Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ತುಮಕೂರಿನಲ್ಲಿ ಮಳೆ ಅವಾಂತರ : ನೀರಿನಲ್ಲಿ‌ ಕೊಚ್ಚಿ ಹೋದವ ಕೊಂಬೆ ಹಿಡಿದು ಬದುಕಿದ..!

03:36 PM Nov 20, 2021 IST | suddionenews
Advertisement

ತುಮಕೂರು: ಎಲ್ಲೆಡೆ ಮಳೆರಾಯ ಅವಾಂತರ ಸೃಷ್ಟಿಸಿದ್ದಾನೆ. ಜನರ ಪಾಡಂತು ಕೇಳುವ ಹಾಗಿಲ್ಲ. ರೈತರ ಗೋಳಾಟ ನೋಡುವವರ್ಯಾರಿಲ್ಲ ಎಂಬಂತಾಗಿದೆ. ಜಿಲ್ಲೆಯಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲಾ ನದಿಯಂತಾಗಿದೆ‌.

Advertisement

ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನಡೆದ ಘಟನೆ ಎಲ್ಲರ ಮೊಬೈಲ್ ನಲ್ಲೂ ಫುಲ್ ವೈರಲ್ ಆಗಿತ್ತು. ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿತ್ತು. ಬೈಕ್ ಸವಾರನನ್ನ ಕಾಪಾಡಲು ಒಂದಿಬ್ಬರು ನಿಂತಿದ್ದರು. ಆದ್ರೆ ಅವರಿಂದಲೂ ಸಾಧ್ಯವಾಗಲೇ ಇಲ್ಲ. ಬೈಕ್ ಜೊತೆಗೆ ಸವಾರನು ಕೊಚ್ಚಿ ಹೋಗಿದ್ದ. ಈ ವಿಡಿಯೋ ನೋಡಿ ಎಲ್ಲರು ಮರುಗಿದ್ದರು. ಅದೃಷ್ಟವಶಾತ್ ಆ ಯುವಕ ಬದುಕಿದ್ದಾನೆ.

ಮರದ ಕೊಂಬೆಯೊಂದನ್ನ ಹಿಡಿದು ಆ ಯುವಕ ಬದುಕಿ ಬಂದಿದ್ದಾನೆ. ಎಲ್ಲೆಡೆ ಅಪಾಯ ಮೀರು ನೀರಿನಮಟ್ಟ ಹರಿಯುತ್ತಿದೆ. ಆದ್ರೆ ಇದನ್ನು ಲೆಕ್ಕಿಸದೆ ಕೆಲವರು ಆ ನೀರಿನಲ್ಲೇ ಹುಡುಗಾಟವಾಡಲು ಹೋಗುತ್ತಿದ್ದಾರೆ. ಅಪಾಯ ತಂದುಕೊಳ್ಳುತ್ತಿದ್ದಾರೆ. ಇಂದು ಕೂಡ ಇದೇ ಜಾಗದಲ್ಲಿ ಹರಿಯುತ್ತಿರುವ ನೀರಿನಲ್ಲಿ ಎರಡು ಬೈಕ್ ಗಳು ಕೊಚ್ಚಿ ಹೋಗಿವೆ.

Advertisement

Advertisement
Tags :
featuredheavy rain fallsuddionetumakurಕೊಚ್ಚಿಕೊಂಬೆತುಮಕೂರುಮಳೆ ಅವಾಂತರಸುದ್ದಿಒನ್
Advertisement
Next Article