ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ ಮಾಡುತ್ತಾರೆ ಎಂದು ರೈತರು ಪೆಟ್ರೋಲ್ ಬಂಕಿನ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದಾರೆ. ನೂರು ರೂಪಾಯಿ ಪೆಟ್ರೋಲ್ ಹಾಕಿಸಿದರೆ ಬರೀ 40 ರೂಪಾಯಿ ಪೆಟ್ರೋಲ್ ಅಷ್ಟೇ ಹಾಕುತ್ತಾರೆ. ಇಲ್ಲಿ ಗ್ರಾಹಕರಿಗೆ ತುಂಬಾ ವಂಚನೆ ಯಾಗುತ್ತಿದೆ ಎಂದು ಗ್ರಾಹಕರು ಇಂದು ಆಕ್ರೋಶ ವ್ಯಕ್ತಪಡಿಸಿದರು.
ಪಾವಗಡ ತಾಲೂಕಿನ ಕೆಂಚ್ಚಮ್ಮನಹಳ್ಳಿ ಗ್ರಾಮದ ಕೃಷ್ಣಪ್ಪ ಎನ್ನುವ ವ್ಯಕ್ತಿ ಚಿತ್ರದುರ್ಗದಿಂದ ಪಾವಗಡಕ್ಕೆ ತೆರಳುವ ಮಧ್ಯದಲ್ಲಿ ಚಳ್ಳಕೆರೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕಿಗೆ ಬಂದು ನೂರು ರೂಪಾಯಿ ಪೆಟ್ರೋಲ್ ಹಾಕಲು ತಿಳಿಸಿದ್ದು. ಪೆಟ್ರೋಲ್ ಬಂಕಿನ ಸಿಬ್ಬಂದಿ ಬರಿ 60 ರೂಪಾಯಿ ಪೆಟ್ರೋಲ್ ಹಾಕಿದ್ದು ನೂರು ರೂಪಾಯಿ ತೆಗೆದುಕೊಂಡಿದ್ದಾನೆ.ಇದನ್ನು ಗಮನಿಸಿದ ಕೃಷ್ಣಪ್ಪ. ಬೈಕ್ ಸವಾರರಿಗೆ ವಂಚನೆ ಮಾಡುತ್ತಿರುವುದನ್ನು ಕಂಡು ಪೆಟ್ರೋಲ್ ಬಂಕಿನ ಸಿಂಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಬಂಕ್ ನ ಮಾಲಿಕ ಸ್ಥಳಕ್ಕೆ ಬರುವವರೆಗೂ ಯಾರಿಗೂ ಪೆಟ್ರೋಲ್ ಹಾಕದಂತೆ ತಾಕಿತು ಮಾಡಿದರು. ಈ ವೇಳೆ ಪೆಟ್ರೋಲ್ ಬಂಕಿನ ಸಿಬ್ಬಂದಿಗು ಹಾಗೂ ರೈತರಿಗೂ ಮಾತಿನ ಚಕಮಕಿ ನಡೆಯಿತು.