For the best experience, open
https://m.suddione.com
on your mobile browser.
Advertisement

ರಾವಣ ಪಾತ್ರಕ್ಕಾಗಿ ಯಶ್ ಹೆಚ್ಚಿಸಿಕೊಂಡಿದ್ದು ಬರೋಬ್ಬರಿ 15 ಕೆಜಿ..!

04:51 PM Apr 27, 2024 IST | suddionenews
ರಾವಣ ಪಾತ್ರಕ್ಕಾಗಿ ಯಶ್ ಹೆಚ್ಚಿಸಿಕೊಂಡಿದ್ದು ಬರೋಬ್ಬರಿ 15 ಕೆಜಿ
Advertisement

ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಸಿಕ್ಜಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಯಶ್ ಕೂಡ ಅದರಲ್ಲಿ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಇನ್ನಷ್ಟು ಸದ್ದು ಮಾಡಿದೆ. ರಾವಣನ ಪಾತ್ರದಲ್ಲಿ ಯಶ್ ರಾಮಾಯಣದಲ್ಲಿ ನಟಿಸಲು ಒಪ್ಪಿದ್ದಾರೆ. ಆದರೆ ಈ ಸಿನಿಮಾಗೆ ಒನ್ ಆಫ್ ದಿ ಪ್ರೊಡ್ಯೂಸರ್ ಕೂಡ ಯಶ್.

Advertisement

ಯಾವುದೇ ಸಿನಿಮಾ ಆಗಲಿ ಯಶ್ ಸಾಕಷ್ಟು ಡೆಡಿಕೇಷನ್ ಆಗಿ ವರ್ಕ್ ಮಾಡುತ್ತಾರೆ. ಆಗಲೇ ಸಿನಿಮಾಗಳು ಹಿಟ್ ಎನಿಸಿಕೊಳ್ಳುವುದು. ಅದಕ್ಕೆ ಕೆಜಿಎಫ್ ಬೆಸ್ಟ್ ಎಕ್ಸಾಂಪಲ್ ಕೂಡ. ಈಗ ರಾಮಾಯಣ ಸಿನಿಮಾಗೂ ಸಾಕಷ್ಟು ಒತ್ತು ನೀಡುತ್ತಿದ್ದಾರೆ. ರಾವಣನ ಪಾತ್ರಕ್ಕೆ ಯಾವ ರೀತಿಯ ಮೈಕಟ್ಟು ಬೇಕೋ ಅದನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಅದರ ಪರಿಣಾಮವೇ ಇದೀಗ ಯಶ್ 15 ಕೆಜಿ ತೂಕವನ್ನು ಹೆಚ್ಚಿಗೆ ಮಾಡಿಕೊಂಡಿದ್ದಾರೆ. ನಿನ್ನೆಯಷ್ಟೆ ಚುನಾವಣೆಗೆ ಬಂದಿದ್ದಾಗ ಅಭಿಮಾನಿಗಳೆಲ್ಲರಿಗೂ ಒಂದಷ್ಟು ವ್ಯತ್ಯಾಸದ ದರ್ಶನವಾಗಿದೆ.

Advertisement


ರಣ್​ಬೀರ್​ ಮತ್ತು ಸಾಯಿ ಪಲ್ಲವಿ ಸಿನಿಮಾದಲ್ಲಿ ಭಗವಾನ್​ ರಾಮ ಮತ್ತು ಸೀತಾ ದೇವಿ ಪಾತ್ರದಲ್ಲಿ ಕಾಣಿಸಿಕೊಂಡ ಫೋಟೋ ಲೀಕ್​ ವೈರಲ್ ಆಗುತ್ತಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಶನಿವಾರದಂದು ರಾಮಾಯಣ ಸೆಟ್​ನಲ್ಲಿ ರಣ್​​ಬೀರ್​​ ಅಯೋಧ್ಯೆಯ ಶ್ರೀರಾಮ ಚಂದ್ರನಂತೆ ಕಾಣಿಸಿಕೊಂಡಿದ್ದಾರೆ. ಅತ್ತ ಸಾಯಿ ಪಲ್ಲವಿ ಕೂಡ ಸೀತೆಯಂತೆ ಕಂಗೊಳಿಸಿದ್ದಾರೆ. ಆದರೆ ಇದೇ ಸೆಟ್​ನಲ್ಲಿ ಇವರಿಬ್ಬರ ಫೋಟೋ ಲೀಕ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬರೀ ಬಾಲಿವುಡ್ ಮಾತ್ರವಲ್ಲ ರಾಮಾಯಣ ಸಿನಿಮಾಗಾಗಿ ಎಲ್ಲರು ಕಾಯುತ್ತಿದ್ದಾರೆ. ಅದರಲ್ಲೂ ಯಶ್ ಅಭಿಮಾನಿಗಳು ಎಲ್ಲೆಲ್ಲೂ ಇದ್ದು, ಎಲ್ಲಾ ರಾಜ್ಯದ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.

Advertisement

Advertisement
Advertisement
Advertisement
Tags :
Advertisement