ಸಿದ್ದು ಯಾಕೆ ರಿಸೈನ್ ಮಾಡಬೇಕು.. ಕುಮಾರಸ್ವಾಮಿ ಮಾಡ್ತಾರಾ..? ಜಿಟಿಡಿ ಮಾತಿಗೆ ಹೆಚ್ಡಿಕೆ ಸ್ಪಷ್ಟನೆ..!
ಬೆಂಗಳೂರು: ಮೂಡಾ ಹಗರಣದಲ್ಲಿ ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿವೆ. ಇಂದು ದಸರಾ ಹಬ್ಬಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ದಸರಾ ಉದ್ಘಾಟನೆಯಲ್ಲಿ ಜಿ.ಟಿ.ದೇವೇಗೌಡ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ವೇಳೆ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವರ epidemic ರವಾಗಿ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಕೊಡುವುದಾದರೆ ಎಫ್ಐಆರ್ ಆಗಿರುವ ಎಲ್ಲಾ ನಾಯಕರು ರಾಜೀನಾಮೆ ಕೊಡಲಿ. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ರಾಜೀನಾಮೆ ಕೊಡುತ್ತಾರಾ..? ಸಿದ್ದರಾಮಯ್ಯ ಅವರು ಯಾವತ್ತೂ ಕುಟಿಂಬ ನೋಡಿದವರಲ್ಲ. ಈಗ ಎಲ್ಲರೂ ಗಾಜಿನ ಮನೆಯಲ್ಲಿ ಕುಳಿತಿದ್ದಾರೆ. ಎಫ್ಐಆರ್ ಆದವರು ರಾಜೀನಾಮೆ ಕೊಡಬೇಕಾದರೆ ಜೆಡಿಎಸ್ ನಲ್ಲಿರುವವರು ಕೊಡಲಿ. ರಾಜೀನಾಮೆ ಕೊಡು ಅಂತ ಕೋರ್ಟ್ ಹೇಳಿದೆಯಾ..? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ ಎಂದೇ ಪ್ರಶ್ನೆ ಮಾಡಿದ್ದಾರೆ.
ಜಿಟಿ ದೇವೇಗೌಡರು ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ. ಮೂಡಾ ಹಗರಣದಲ್ಲಿ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನವರು ತೊಂದರೆಗೆ ಸಿಕ್ಕಿಕೊಳ್ಳಬಾರದು ಎಂದು ಹೇಳಿರಬಹುದು. ಎಫ್ಐಆರ್ ಆದವರೆಲ್ಲಾ ರಾಜೀನಾಮೆ ಕೊಡಬೇಕು ಅಂತ ಹೇಳಲ್ಲ. ಸಿದ್ದರಾಮಯ್ಯ ಅವರಿಗೂ ಹೇಳಿದ್ದೆ. ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಕೊಡಿ ಎಂದು ನಾನು ಕೇಳಿಲ್ಲ. ಎಷ್ಟು ಸಲ ಹೇಳಿದ್ದೀನಿ ನೀವೂ ರಾಜೀನಾಮೆ ಕೊಡಬೇಡಿ ಎಂದು. ಆದರೆ ಅವರು ನಡೆದುಕೊಳ್ಳುತ್ತಿರುವ ರೀತಿಗೆ ಈಗ ಒತ್ತಡ ಹಾಕುತ್ತಿದ್ದೇವೆ ಅಷ್ಟೆ ಎಂದಿದ್ದಾರೆ.