ರೇಣುಕಾಸ್ವಾಮಿ ಶವದ ಮುಂದೆ ದರ್ಶನ್ : ಫೋಟೋ ರಿಟ್ರೀವ್..!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ತಲೆಯ ಮೇಲೆ ತೂಗು ಕತ್ತಿ ನೇತಾಡುತ್ತಿದೆ. ಅನಾರೋಗ್ಯದ ಸಮಸ್ಯೆಯಿಂದ ಒಂದೂವರೆ ತಿಂಗಳುಗಳ ಕಾಲ ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ದರ್ಶನ್ ವಿರುದ್ಧ ಬೇಕಾದ ಎಲ್ಲಾ ಸಾಕ್ಷ್ಯಗಳನ್ನು ಇನ್ನು ಸ್ಟ್ರಾಂಗ್ ಆಗಿ ಒದಗಿಸುತ್ತಿದ್ದಾರೆ. ದರ್ಶನ್ ಪರ ವಕೀಲರು, ಪೊಲೀಸರು ನೀಡಿದ ಸಾಕ್ಷ್ಯಗಳೆಲ್ಲಾ ಗೊಂದಲ ಹಾಗೂ ದೋಷಪೂರಿತವಾಗಿವೆ ಎಂಬ ವಾದ ಮಂಡಿಸಿದ್ದರು. ಇದೀಗ ದರ್ಶನ್, ರೇಣುಕಾಸ್ವಾಮಿ ಸತ್ತಾಗ ಶವದ ಮುಂದೆ ಕೂತ ಫೋಟೋವನ್ನು ರಿಟ್ರೀವ್ ಮಾಡಿದ್ದಾರೆ.
ಈಗಾಗಲೇ ಅದನ್ನು ನ್ಯಾಯಾಲಯದ ಗಮನಕ್ಕೂ ತರಲಾಗಿದೆ. ಪಟ್ಟಣಗೆರೆ ಶೆಡ್ ನಲ್ಲಿ ಕೊಲೆಯಾದ ಸಮಯದಲ್ಲಿ ದರ್ಶನ್ ಅಲ್ಲಿರಲಿಲ್ಲ ಎಂಬ ವಾದವನ್ನು ಮಂಡಿಸಲಾಗಿತ್ತು. ಕೋಪದಲ್ಲಿ ಒಡೆದು ಅಲ್ಲಿಂದ ದರ್ಶನ್ ಹೊರಟು ಹೋಗಿದ್ದರು ಎಂದು ಹೇಳಲಾಗಿತ್ತು. ಈಗ ಆರೋಪಿಯೊಬ್ಬರ ಮೊಬೈಲ್ ನಿಂದ ಫೋಟೋ ರಿಟ್ರೀವ್ ಆಗಿದ್ದು, ರೇಣುಕಾಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇನ್ನಿತರೆ ಆರೋಪಿಗಳು ನಿಂತಿರುವ ಫೋಟೋ ಅದಾಗಿದೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಸಾಕ್ಷಿಗಳ ಸಂಗ್ರಹಕ್ಕಾಗಿ ಆರೋಪಿಗಳ ಮೊಬೈಲ್ ಅನ್ನು ಹೈದ್ರಾಬಾದ್ ಬೆಂಗಳೂರಿನ ಎಫ್ಎಸ್ಎಲ್ ಗೆ ಕಳುಹಿಸಲಾಗಿತ್ತು. ಹೈದ್ರಾಬಾದ್ ನಿಂದ ಕೆಲವು ವರದಿಗಳು ಬರಬೇಕಿತ್ತು. ಇದೀಗ ಆ ಸಾಕ್ಷಿಗಳು ಪೊಲೀಸರ ಕೈಸೇರಿವೆ. ಆರೋಪಿ ಪವನ್ ಮೊಬೈಲ್ ನಿಂದ ಕ್ಲಿಕ್ಕಿಸಿರುವ ಫೋಟೋ ಅವಾಗಿವೆ.
ದರ್ಶನ್ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೊರೆ ಹೋಗಲು ಪೊಲೀಸರು ತೀರ್ಮಾನಿಸಿದ್ದರು. ಬಳ್ಳಾರಿ ಜೈಲಿನಲ್ಲಿಯೇ ಫಿಜಿಯೋಥೆರಪಿ ತೆಗೆದುಕೊಳ್ಳುವಂತೆಯೂ ಸೂಚನೆ ನೀಡಲಾಗುತ್ತು. ದರ್ಶನ್ ಅದಕ್ಕೆ ಒಪ್ಪಿರಲಿಲ್ಲ. ಇದೀಗ ಇನ್ನು ಕೂಡ ಸರ್ಜರಿಯಾಗಿಲ್ಲ. ಫಿಜಿಯೋಥೆರಪಿ ಟ್ರೀಟ್ಮೆಂಟ್ ನಲ್ಲಿಯೇ ಇದ್ದಾರೆ.