For the best experience, open
https://m.suddione.com
on your mobile browser.
Advertisement

ದಲಿತ ಎಂಬ ಕೀಳರಿಮೆ ತೆಗೆದು ಹಾಕುವಲ್ಲಿ ಒಗ್ಗಟ್ಟಾಗಬೇಕು : ಸಚಿವ ಪರಮೇಶ್ವರ್

12:10 PM Dec 25, 2023 IST | suddionenews
ದಲಿತ ಎಂಬ ಕೀಳರಿಮೆ ತೆಗೆದು ಹಾಕುವಲ್ಲಿ ಒಗ್ಗಟ್ಟಾಗಬೇಕು   ಸಚಿವ ಪರಮೇಶ್ವರ್
Advertisement

ಮಂಗಳೂರು: ಪೀಳಿಗೆಗಳು ಬದಲಾದರೂ, ವಿದ್ಯಾವಂತರು ಹೆಚ್ಚಾದರೂ ಕೂಡ ಕೆಲವೊಂದು ಆಚಾರ - ವಿಚಾರಗಳನ್ನು ಜನ ಬದಲಾಯಿಸಿಕೊಂಡಿಲ್ಲ. ಅದರಲ್ಲಿ ದಲಿತ ಎಂಬ ಪದ್ದತಿ‌ ಕೂಡ. ಈ ಬಗ್ಗಡ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿ, ದಲಿತ ಎಂಬ ಕೀಳರಿಮೆ ತೆಗೆದು ಹಾಕುವುದಕ್ಕೆ ಎಲ್ಲರೂ ಒಗ್ಗಟ್ಟಾಗಬೇಕು. ಒಗ್ಗಟ್ಟಾಗದಿದ್ದಲ್ಲಿ ತುಳಿತಕ್ಕೊಳಗಾದ, ಶೋಷಿತ ಸಮಾಜ ಹಾಗೆಯೇ ಮುಂದುವರೆಯುತ್ತದೆ ಎಂದಿದ್ದಾರೆ.

Advertisement

ನಗರದಲ್ಲಿ ನಡೆದ ಆದಿ ದ್ರಾವಿಡ ಸಮಾವೇಶದಲ್ಲಿ ಮಾತನಾಡುತ್ತಾ, ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು. ಯಾರೂ ಕೂಡ ನಮ್ಮ ರಕ್ಷಣೆಗೆ ಬರುವುದಿಲ್ಲ. ಬಲಯುತರಾಗಬೇಕು ಎಂದರೆ ಅಲ್ಲಿ ಶಿಕ್ಷಣ ಬಹಳ ಮುಖ್ಯ. ಆದ್ದರಿಂದ ಆದಿ ದ್ರಾವಿಡ ಸಮುದಾಯದವರ ಮನೆಗಳಲ್ಲಿ ಒಬ್ಬರಾದರೂ ಪದವೀಧರರಾಗಬೇಕು. ಈ ಸಂಕಲ್ಪವನ್ನು ಅಮುದಾಯದ ಪ್ರತಿಯೊಬ್ಬರು ತೆಗೆದುಕೊಳ್ಳಬೇಕು. ನಾನು ಕೂಡ ಆದಿ ದ್ರಾವಿಡ ಸಮುದಾಯದಿಂದ ಬಂದವನು. ನಮ್ಮ ತಂದೆ ಹೊರ ದೇಶಕ್ಕೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸುವ ಗುರಿ‌ ಇಟ್ಟುಕೊಂಡಿದ್ದರು. ಬಳಿಕ ರಾಜ್ಯ ರಾಜಕಾರಣಕ್ಕೆ ಬಂದು 35 ವರ್ಷಗಳ ಜರ್ನಿ ಪೂರೈಸಿದ್ದೀನಿ ಎಂದಿದ್ದಾರೆ.

ನಿಮ್ಮದೇ ಆದಿದ್ರಾವಿಡ ಸಮುದಾಯಕ್ಕೆ ಸೇರಿದವನು ಗೃಹಸಚಿವನಾಗಿ ಈ ರಾಜ್ಯದಲ್ಲಿ ನಿಮ್ಮ ಪ್ರತಿನಿಧಿಯಾಗಿ ಇದ್ದಾನೆ ಎಂದು ತಿಳಿಯಿರಿ. ಆ ಕಾರಣದಿಂದಲೇ ನಾನು ಈ ಸಮಾವೇಶಕ್ಕೆ ಬಂದಿದ್ದೇನೆ. ಈ ದೇಶದ ವರ್ಣಾಶ್ರಮ ವ್ಯವಸ್ಥೆಯಲ್ಲಿ ನಮ್ಮನ್ನು ಶೂದ್ರರು ಅತೀ ಶೂದ್ರರು ಎಂದು ಹೊರಗಿಟ್ಟಿದ್ದಾರೆ. ನಮ್ಮನ್ನು ಅತ್ಯಂತ ಕೀಳುಮಟ್ಟದಲ್ಲಿ ನೋಡಲಾಗುತ್ತಿದೆ‌. ಇಂದು ಒಂದಿಷ್ಟು, ಸ್ಥಾನಮಾನ ಗೌರವ ಅಂಥ ಹೇಳೋದಿಲ್ಲ, ಒಂದು ಗುರುತಿಸುವಿಕೆ ಇದೆಯೆಂದರೆ ಬಹುಶಃ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ನೀಡಿದ್ದೇ ಕಾರಣ ಎಂದರು.

Advertisement

Tags :
Advertisement