For the best experience, open
https://m.suddione.com
on your mobile browser.
Advertisement

ಚೀನಾದಲ್ಲಿ ಮತ್ತೆ ವೈರಸ್ ಕಾಟ : ಕರ್ನಾಟಕದಲ್ಲೂ ಅಲರ್ಟ್

11:39 AM Nov 29, 2023 IST | suddionenews
ಚೀನಾದಲ್ಲಿ ಮತ್ತೆ ವೈರಸ್ ಕಾಟ   ಕರ್ನಾಟಕದಲ್ಲೂ ಅಲರ್ಟ್
Advertisement

ಚೀನಾದಿಂದ ಶುರುವಾದ ಕೊರೊನಾ ವೈರಸ್ ನಿಂದ ಇಡೀ ದೇಶವೇ ಎಷ್ಟೆಲ್ಲಾ ಸಮಸ್ಯೆ ಅನುಭವಿಸಿದೆ ಎಂದು ಎಲ್ಲರಿಗೂ ಗೊತ್ತಿದೆ. ಈಗಲೂ ಅದೆಷ್ಟೋ ಕ್ಷೇತ್ರಗಳು ನಷ್ಟದಿಂದ ಹೊರ ಬಂದಿಲ್ಲ. ಎಷ್ಟೋ ಜನರ ಜೀವನ ಬೀದಿಗೆ ಬಂದಿದೆ. ಎಷ್ಟೋ ಆತ್ಮೀಯರನ್ನು ಕಳೆದುಕೊಂಡು ಆಗಿದೆ. ಎಷ್ಟೋ ಮನೆಯ ಯಜಮಾನರು ಇಲ್ಲದೆ ಸಂಸಾರಗಳು ಕಷ್ಟದಲ್ಲಿವೆ. ಎರಡು ವರ್ಷವಾದರೂ ಅದರಿಂದ ಚೇತರಿಕೆ ಕಂಡಿಲ್ಲ. ಹೀಗಿರುವಾಗ ಇದೀಗ ಮತ್ತೆ ಚೀನಾದಲ್ಲಿ ವೈರಸ್ ಒಂದು ಆತಂಕ ಹುಟ್ಟಿಸುತ್ತಿದೆ. ಅದುವೇ ನ್ಯೂಮೋನಿಯಾ.

Advertisement

ಚೀನಾದಲ್ಲಿ ಹೆಚ್ಚಾಗುತ್ತಿರುವ ನ್ಯೂಮೋನಿಯಾ ಆತಂಕ ಈಗ ರಾಜ್ಯದಲ್ಲೂ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದೆ. ಎಲ್ಲಾ ರಾಜ್ಯದಲ್ಲೂ ಎಚ್ಚರದಿಂದ ಇರಲು ಕೇಂದ್ರ ಸರ್ಕಾರ ಗೈಡ್ ಲೈನ್ ಹೊರಡಿಸಿದೆ. ಕೊರೊನಾ ಸಮಯದಲ್ಲಿ ಏನೆಲ್ಲಾ ಮುಂಜಾಗ್ರತ ಕ್ರಮ ವಹಿಸಿದ್ದರೋ ಆ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ. ಜನರು ಕೂಡ ಆರೋಗ್ಯದ ಕಡೆಗೆ ಗಮನ ಹರಿಸಲು ಸೂಚಿಸಿದೆ.

Advertisement

ಯಾವುದೇ ಕಾಯಿಲೆಯ ಲಕ್ಷಣಗಳು ಕಂಡರೂ ತಾವೇ ಔಷಧಿ ತೆಗೆದುಕೊಳ್ಳುವ ಬದಲಿಗೆ ವೈದ್ಯರನ್ನು ಸಂಪರ್ಕಿಸಲು ಸೂಚನೆ ನೀಡಲಾಗಿದೆ. ಕೆಮ್ಮುವಾಗ ಬಾಯಿ ಮುಚ್ಚಿಕೊಂಡು ಕೆಮ್ಮಬೇಕು, ಆಗಾಗ ಕೈಗಳನ್ನು ತೊಳೆಯುತ್ತಿರಬೇಕು, ಅನಗತ್ಯವಾಗಿ ಕಣ್ಣು, ಮೂಗು ಮುಟ್ಟಿಕೊಳ್ಳಬಾರದು, ಜನಸಂದಣಿ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು, ಪೌಷ್ಟಿಕಾಂಶ ಆಹಾರ ಸೇವನೆ, ಸಾರ್ವಜನಿಕ ಸ್ಥಳದಲ್ಲೇ ಉಗುಳದೆ ಇರುವುದು ಹೀಗೆ ಆರೋಗ್ಯಕರ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.

Advertisement
Tags :
Advertisement