Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಧಾರಾಕಾರ ಮಳೆಗೆ ಕೋಲಾರದಲ್ಲಿ ಎರಡೂವರೆ ಎಕರೆ ಬಾಳೆ ನಾಶ..!

01:59 PM May 04, 2024 IST | suddionenews
Advertisement

ಕೋಲಾರ: ಮಳೆಯನ್ನು ಕಂಡು ರೈತ ಅದೆಷ್ಟೋ ವರ್ಷಗಳು ಆಗಿತ್ತೇನೋ ಎಂಬ ಭಾವನೆ ಈ ಬಾರಿಯ ಬಿಸಿಲು ನೋಡಿ ಮೂಡಿತ್ತು. ಆದರೆ ವರುಣರಾಯ ಕೃಪೆ ಏನೋ ತೋರಿದ್ದಾನೆ. ನಿನ್ನೆಯಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಇನ್ಮುಂದೆ ಉತ್ತಮ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಆದರೆ ನಿನ್ನೆ ಸುರಿದ ಭಾರಿ ಮಳೆಗೆ ರೈತರ ಬೆಳೆ ನಾಶವಾಗಿದೆ.

Advertisement

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದ ವಿವಿಧ ಜಿಲ್ಲೆಯಲ್ಲಿ ರೈತರು ಬೆಳೆದಂತ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ‌. ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಈ ಘಟನೆ ನಡೆದಿದೆ. ರೈತ ಶಿವ ಪ್ರಸಾದ್ ಹಾಗೂ ಚಂದನ್ ಎಂಬುವವರ ಜಮೀನಿನಲ್ಲಿ ಬೆಳೆದ ಬೆಳೆ ನಾಶವಾಗಿದೆ. ಬೇಳೆ ತೋಟ ಸಂಪೂರ್ಣವಾಗಿ ನೆಲ ಕಚ್ಚಿದೆ.

ಅಷ್ಟೇ ಅಲ್ಲ ಬಂಗಾರಪೇಟೆಯ ಹುಣಕಲ್ ದೊಡ್ಡಿ ಗ್ರಾಮದ ಮುನಿರಾಜು ಎಂಬುವವರಿಗೆ ಸೇರಿದ ಹಾಗಲಕಾಯಿ ಹಾಗೂ ಸೋರೆಕಾಯಿ ಬೆಳೆಗೂ ಹಾನಿಯಾಗಿದೆ. ಜಿಲ್ಲೆಯಲ್ಲಿ ಹಲವು ರೈತರಿಗೆ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ. ಈ ಬಾರಿಯ ರಣ ಬಿಸಿಲಿನಲ್ಲೂ ಹಾಗೋ ಹೀಗೋ ಕಷ್ಟ ಪಟ್ಟು ಬೆಳೆ ಬೆಳೆದಿದ್ದರು. ಮಳೆ ಇಲ್ಲದೆ ಹೋದರೂ ಉಳಿಸಿಕೊಂಡಿದ್ದರು. ಆದರೆ ಮಳೆ ಬಂದು ಎಲ್ಲವನ್ನು ಹಾಳು ಮಾಡಿದೆ. ಇದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾಲ ಸೋಲ ಮಾಡಿದ ಬೆಳೆದ ಬೆಳೆಗೆ ನೀರಿಲ್ಲ ಅಂತ ಒದ್ದಾಡುತ್ತಿರುವಾಗ, ಕರುಣೆ ತೋರಿ ಮಳೆರಾಯ ಬಂದಿದ್ದಾನೆ. ಆದರೆ ಬಿರುಗಾಳಿ ಸಮೇತ ಬಂದು, ಎಲ್ಲವನ್ನು ಹಾನಿ ಮಾಡಿದೆ. ಇದರಿಂದ ಲಕ್ಷಾಂತರ ರೂಪಾಯಿ ಬೆಳೆಯೂ ಕೈ ಸೇರಿದೆ ಭೂಮಿ ಪಾಲಾಗಿದೆ.

Advertisement

Advertisement
Tags :
bananasdestroyedkolarkolaraTorrential rainTwo and a half acresಎರಡೂವರೆ ಎಕರೆಕೋಲಾರಧಾರಾಕಾರ ಮಳೆಬಾಳೆ ನಾಶ
Advertisement
Next Article