For the best experience, open
https://m.suddione.com
on your mobile browser.
Advertisement

ಬೆಂ.ಗ್ರಾಮಾಂತರ ಕ್ಷೇತ್ರದ ಜನರ ಒಲವು ಯಾರ ಕಡೆಗೆ ಡಿಕೆ ಸುರೇಶ್..? ಸಿಎನ್ ಮಂಜುನಾಥ್..?

08:20 PM Mar 19, 2024 IST | suddionenews
ಬೆಂ ಗ್ರಾಮಾಂತರ ಕ್ಷೇತ್ರದ ಜನರ ಒಲವು ಯಾರ ಕಡೆಗೆ  ಡಿಕೆ ಸುರೇಶ್    ಸಿಎನ್ ಮಂಜುನಾಥ್
Advertisement

ಲೋಕಸಭಾ ಚುನಾವಣೆಯ ರಣಕಣ ಬಿಸಿಯಾಗಿದೆ‌. ಈ ಬಾರಿ ಬಿಜೆಪಿ ಹೊಸ ಪ್ರಯೋಗವನ್ನೇ ಮಾಡಿದೆ. ಡಾ. ಸಿಎನ್ ಮಂಜುನಾಥ್ ಗಿರುವ ಹೆಸರನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುವುದಕ್ಕೆ ಹೊರಟಿದೆ. ಹೀಗಾಗಿ ಡಾ. ಮಂಜುನಾಥ್ ಅವರು ವೈದ್ಯ ವೃತ್ತಿಯಿಂದ ನಿವೃತ್ತರಾಗಿದ್ದೇ ತಡ, ಅವರನ್ನು ರಾಜಕೀಯದ ಪಡಸಾಲೆಗೆ ಕರೆತಂದಿದ್ದಾರೆ.

Advertisement
Advertisement

ಆರಂಭದಲ್ಲಿ ಮಂಜುನಾಥ್ ಅವರಿಗೆ ರಾಜಕೀಯ ಪ್ರವೇಶದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಆದರೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ಕಾರಣದಿಂದಾಗಿ ಮಂಜುನಾಥ್ ಅವರನ್ನು ಒಪ್ಪಿಸಿ ರಾಜಕೀಯ ಅಖಾಡಕ್ಕೆ ಇಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಮಂಜುನಾಥ್ ಅವರಿಗೆ ವೈದ್ಯರಾಗಿ ಇರುವ ಹೆಸರನ್ನೇ ಬಳಸಿಕೊಂಡು ಡಿಕೆ ಸುರೇಶ್ ಅವರನ್ನು ಸೋಲಿಸಬೇಕೆಂಬ ಯೋಜನೆ ಹೊಂದಲಾಗಿದೆ.

Advertisement

ಸ್ವಂತ ಮಾವನ ಪಕ್ಷ ಬಿಟ್ಟು ಬಿಜೆಪಿಗೆ ಸೇರಿರುವುದರ ಹಿಂದೆ ಲೆಕ್ಕಾಚಾರ ಇಲ್ಲದೇನಿಲ್ಲ. ಜೆಡಿಎಸ್‌ ಬಿಜೆಪಿ ಮೈತ್ರಿಯಾಗಿರುವ ಕಾರಣ ಮುಂದೆ ಮೋದಿ ಸರ್ಕಾರ ಅಧಿಕಾರ ಹಿಡಿದರೆ ಮಂತ್ರಿ ಸ್ಥಾನದ ಬೇಡಿಕೆ ಇಡುವ ಮಾತುಗಳು ಕೇಳಿ ಬಂದಿತ್ತು. ಆ ಮೂಲಕ ಆರೋಗ್ಯ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಗುಮಾನಿ ಇತ್ತು. ಮಂಜುನಾಥ್‌ ಅವರಿಗೆ ಇರುವ ಪ್ರಸಿದ್ಧಿಯನ್ನು ಬಳಸಿಕೊಂಡು ಪ್ರಬಲ ನಾಯಕ ಸುರೇಶ್‌ ಅವರನ್ನು ಕಟ್ಟಿ ಹಾಕುವ ಜೆಡಿಎಸ್‌ ಮತ್ತು ಬಿಜೆಪಿ ಮಾಸ್ಟರ್‌ ಪ್ಲಾನ್‌ಗೆ ಕ್ಷೇತ್ರದ ಜನ ಯಾವ ರೀತಿಯ ಮನ್ನಣೆ ನೀಡಲಿದ್ದಾರೆ ಎಂಬ ಕುತೂಹಲವಂತು ಇದೆ.

Advertisement
Advertisement

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ಅಧಿಕ, ಇಬ್ಬರು ಅಭ್ಯರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರು. ಹಿಂದುಳಿದ, ದಲಿತ, ಮುಸ್ಲಿಂ ಮತಗಳೇ ನಿರ್ಣಾಯಕ. ಮುಸ್ಲಿಂ ಮತಗಳು ಕಾಂಗ್ರೆಸ್‌ ಕೈ ಬಿಡಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಈ ಬಾರಿ ಹಿಂದುಳಿದ ಮತ್ತು ದಲಿತ ಮತಗಳೂ ಕಾಂಗ್ರೆಸ್‌ ಜೊತೆ ಇರಲಿವೆ ಎಂಬ ಲೆಕ್ಕಾಚಾರವನ್ನು ತಳ್ಳಿ ಹಾಕುವಂತಿಲ್ಲ.

8 ಕ್ಷೇತ್ರಗಳ ಪೈಕಿ ಕುಣಿಗಲ್, ಆನೇಕಲ್, ರಾಮನಗರ, ಕನಕಪುರ, ಮಾಗಡಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಹಾಗೂ ಚನ್ನಪಟ್ಟಣದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅತಿ ದೊಡ್ಡ ಕ್ಷೇತ್ರವಾಗಿದ್ದು, ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಮೂರರಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ಪ್ರಾಬಲ್ಯವಿದೆ. ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲವಾಗಿದ್ದ ಕ್ಷೇತ್ರಗಳ ಪೈಕಿ ಈ ಕ್ಷೇತ್ರ ಕೂಡ ಒಂದು. ಅಂತಹ ಕ್ಷೇತ್ರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿಯವರು, ಮೈತ್ರಿಯ ನೆಪದಲ್ಲಿ ಕುಟುಂಬದ ಮತ್ತೊಂದು ಕುಡಿಯನ್ನು ಕಣಕ್ಕಿಳಿಸಿದ್ದಾರೆ. ಗೆದ್ದರೆ ಬಿಜೆಪಿಗೆ ಒಂದು ಸ್ಥಾನ. ಇನ್ನು ಡಿಕೆ ಸುರೇಶ್‌ಗೆ ಕೆಲಸಗಾರ, ಹಾರ್ಡ್ ವರ್ಕರ್ ಎಂಬುದು ಪ್ಲಸ್ ಪಾಯಿಂಟ್‌. ಕೊರೋನ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ. ಕುಟುಂಬವಿದ್ದೂ ಕೊರೋನ ಕಾರಣಕ್ಕೆ ಶವದ ಹತ್ತಿರ ಸುಳಿಯದಿರುವ ಸಂದರ್ಭದಲ್ಲಿ ಅನಾಥ ಶವಗಳ ಸಂಸ್ಕಾರವನ್ನು ಸುರೇಶ್‌ ಸ್ವತಃ ಮಾಡಿದ್ದಾರೆ. ಅಷ್ಟೇ ಅಲ್ಲ ಕ್ಷೇತ್ರದ ಜನರ, ಪಕ್ಷದ ಮುಖಂಡರ ಜತೆ ನಿರಂತರ ಸಂಪರ್ಕ ಸಾಧಿಸಿ ಹಿಡಿತ ಹೊಂದಿದ್ದಾರೆ. ಮನೆ ಮನೆಗೆ ತೆರಳಿ ಜನರ ಕಷ್ಟ ಕೇಳುವ ಸಹೃದಯಿ ಎಂಬ ಮಾತೂ ಇದೆ. ಹೀಗಾಗಿ ಕಡೆ ಗಳಿಗೆಯಲ್ಲಿ ಮತದಾರರು ಯಾರ ಕಡೆಗೆ ಒಲವು ತೋರಲಿದ್ದಾರೆ ಎಂಬ ಕುತೂಹಲವು ಇದೆ.

Advertisement
Tags :
Advertisement