For the best experience, open
https://m.suddione.com
on your mobile browser.
Advertisement

ಇಳಿಕೆಯಾಗಿದ್ದ ಚಿನ್ನದ ದರ ದಿಢೀರನೇ ಏರಿಕೆ : 910 ರೂಪಾಯಿ ಹೆಚ್ಚಳ..!

02:44 PM Nov 08, 2024 IST | suddionenews
ಇಳಿಕೆಯಾಗಿದ್ದ ಚಿನ್ನದ ದರ ದಿಢೀರನೇ ಏರಿಕೆ   910 ರೂಪಾಯಿ ಹೆಚ್ಚಳ
Advertisement

ಬೆಂಗಳೂರು: ಚಿನ್ನದ ದರ ಹಾವು-ಏಣಿ ಆಟ ಆಡುತ್ತಿದೆ. ಒಂದೊಂದೆ ರೂಪಾಯಿ ಇಳಿಕೆಯಾಗುತ್ತಿದೆ ಎಂದು ಕೊಂಚ ಸಮಾಧಾನ ಮಾಡಿಕೊಳ್ಳುವಷ್ಟರಲ್ಲಿ ಒಂದೇ ದಿನಕ್ಕೆ ನೂರಾರು ರೂಪಾಯಿ ಏರಿಕೆಯಾಗಿ ಶಾಕ್ ನೀಡುತ್ತಿದೆ‌. ನಿನ್ನೆಯ ತನಕ ಇಳಿಕೆಯಾಗಿದ್ದ ಚಿನ್ನದ ದರದಲ್ಲಿ ಈವತ್ತು ಆಗಲೇ ಏರಿಕೆಯಾಗಿದೆ.

Advertisement

ಗುರುವಾರ ಅಂದ್ರೆ ನಿನ್ನೆಯ ದಿನ ಚಿನ್ನದ ದರ ಪ್ರತಿ ಗ್ರಾಂಗೆ 180 ರೂಪಾಯಿ ಇಳಿಕೆಯಾಗಿತ್ತು. 10 ಗ್ರಾಂಗೆ 1800 ರೂಪಾಯಿ ಇಳಿಕೆಯಾದಂತೆ. ಶುಕ್ರವಾರ ಅಂದ್ರೆ ಇಂದು ದಿಢೀರನೇ 91 ರೂಪಾಯಿ ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ ಈಗ 910 ರೂಪಾಯಿ ಏರಿಕೆಯಾದಂತೆ ಆಗಿದೆ.

Advertisement

ಪ್ರಸ್ತುತ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 7285 ರೂಪಾಯಿ ಇದೆ. ಅದೇ ರೀತಿ 10 ಗ್ರಾಂಗೆ 72,850 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 7,947 ರೂಪಾಯಿ ಇದ್ದು, ಹತ್ತು ಗ್ರಾಂಗೆ 79,470 ರೂಪಾಯಿ ಆಗಿದೆ. ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಮದುವೆಯ ಸಂಭ್ರಮ ಇರಲಿದ್ದು ಈ ಸಮಯದಲ್ಲಿ ಚಿನ್ನ ಬೆಳ್ಳಿ ಬೆಲೆಯಲ್ಲಿ ಸಹಜವಾಗಿಯೇ ಬೆಲೆ ಏರಿಕೆಯಾಗಲಿದೆ.

ಇನ್ನು ಬೆಳ್ಳಿ ಬೆಲೆ 1 ಗ್ರಾಂಗೆ 94 ರೂಪಾಯಿ ಇದ್ದು, ಕೆಜಿಗೆ 94 ಸಾವಿರ ರೂಪಾಯಿ ತಲುಪಿದೆ. ತಜ್ಞರು ಹೇಳಿದ ಪ್ರಕಾರ ಇನ್ನು ಮುಂದೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂಬ ಭರವಸೆಯೊಂದಿಗೆ ಆಭರಣ ಪ್ರಿಯರು ಕಾಯುತ್ತಿದ್ದಾರೆ. ಆದರೆ ಈಗ ನೋಡಿದರೆ ದರ ಒಂದೇ ಸಮನೆ ಏರಿಕೆಯಾಗುತ್ತಿರುವುದು ಬೇಸರಕ್ಕೆ ಕಾರಣವಾಗಿದೆ.

Advertisement
Tags :
Advertisement