ಜಾನಪದ ಕಲೆಗಳು ಮುಂದಿನ ಪೀಳಿಗೆಗೂ ಉಳಿಯಬೇಕು : ಆರ್. ಸುಬ್ರಾನಾಯಕ್
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 08 :ಜಾನಪದ ಕಲೆಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಅವುಗಳನ್ನು ಉಳಿಸಿ ಬೆಳೆಸಬೇಕು. ಆ ನಿಟ್ಟಿನಲ್ಲಿ ಯುವಜನರು ಜಾನಪದ ಕಲೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ನಮ್ಮ ಪುರಾತನ ಸಂಪ್ರದಾಯಗಳನ್ನು ಮರೆಯದೆ ಮೈಗೂಡಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರ್. ಸುಬ್ರಾನಾಯಕ್ ಹೇಳಿದರು.
ಅವರು ಗುರುವಾರ ಸಂಜೆ ಶ್ರೀ ಆದರ್ಶ ಯುವಕ/ಯುವತಿ ಸಂಘ(ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ
ಕರ್ನಾಟಕ ಸುವರ್ಣ ಸಂಭ್ರಮ-50 ರ ಹೆಸರಾಯಿತು ಕರ್ನಾಟಕ ಉಸಿರಾಗಿಲಿ ಕನ್ನಡ ಎಂಬ ಶೀರ್ಷಿಕೆ ಅಡಿಯಲ್ಲಿ
ಸಾಂಸ್ಕೃತಿಕ ವ್ಯೆಭವ 2024 ರ ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ವಸತಿ ನಿಲಯ ಅವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಒತ್ತಡದ ಜೀವನದ ನಡುವೆ ಜಾನಪದ ಕಲೆಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಬದುಕಿನೆಡೆಗೆ ಸಾಗಲು ಕರೆ ನೀಡಿದರು.
ಮುಖ್ಯ ಅತಿಥಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಗಾಯಿತ್ರಿಶಿವರಾಂ ಮಾತನಾಡಿ ಈ ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಯುವಜನರು ಸೇರಿರುವುದು ಒಂದು ವಿಶೇಷ ದಿನ. ನಿತ್ಯ ಬದುಕಿನಲ್ಲಿ ಎಷ್ಟೇ ಒತ್ತಡವಿದ್ದರೂ ಸಂಗೀತ ಕೇಳುವುದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಕೆ ಪಿ ಎಮ್ ಗಣೇಶಯ್ಯ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಗಂಗಾಧರ್ ಅಮಕುಂದಿ ಮತ್ತು ಮೈಲಾರಿ ಅವರಿಂದ ಸುಗಮ ಸಂಗೀತ ನಡೆಯಿತು. ಎಂ. ಕೆ. ಹರೀಶ್ ಶ್ರೀಮತಿ ಯಶೋಧ ಜಾನಪದ ಗೀತಾಗಾಯನ ಪೊಲೀಸ್ ಇಲಾಖೆಯ ಮನೋಹರ್. ಡಾ||ನರಹರಿ ಅವರಿಂದ ಕನ್ನಡ ಗೀತೆಗಳ ಗಾಯನ. ಜಗದೀಶ್. ಚನ್ನಬಸಪ್ಪ ಅವರಿಂದ ತತ್ವಪದ ದಾಸರ ಪದ. ಶಿವಣ್ಣ ತಂಡದಿಂದ ಗೊರವರ ಕುಣಿತ ಕುಮಾರಿ ಅನುಷ ನಂದಿನಿ ಭೂಮಿಕ ಅವರಿಂದ ಜಾನಪದ ನೃತ್ಯ ಪಲ್ಲವಿ ಕನ್ನಡ ನೃತ್ಯವನ್ನು ಸಾದರಪಡಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಪುಷ್ಪಲತಾ ಬಾವಿಮಠ್ ಶ್ರೀ ಆದರ್ಶ ಯುವಕ/ಯುವತಿ ಸಂಘದ ಕಾರ್ಯದರ್ಶಿ ಶ್ರೀಮತಿ ಓಂಕಾರಮ್ಮಶ್ರೀನಿವಾಸ್ ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ವಸಂತಮ್ಮ ನಿಲಯ ಮೇಲ್ವಿಚಾರಕರಾದ ದೀಪ ರಾಣಿ ಶ್ರೀಮತಿಲಕ್ಷ್ಮಿ ಸಕಿನಾ ಬೀ ಉಪಸ್ಥಿತರಿದ್ದರು.