Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಹುನಿರೀಕ್ಷಿತ ಪ್ರಭಾಸ್ ನಟನೆಯ 'ಕಲ್ಕಿ 2898AD' ಸಿನಿಮಾ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕ : ಹೇಗಿದೆ ಸಿನಿಮಾ..?

04:33 PM Jun 27, 2024 IST | suddionenews
Advertisement

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898AD ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಪ್ರಭಾಸ್ ನಟನೆಯ ಈ ಸಿನಿಮಾ ಬಗ್ಗೆ ಕುತೂಹಲವೂ ಹೆಚ್ಚಿತ್ತು. ಇಂದು ದೇಶದಾದ್ಯಂತ ಸಿನಿಮಾ ರಿಲೀಸ್ ಆಗಿದೆ‌. ಅಭಿಮಾನಿಗಳು ಕೂಡ ಅದ್ದೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ನೋಡಿ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಟೆಯಂತ ಘಟಾನುಘಟಿ ಕಲಾವಿದರೇ ಅಭಿನಯಿಸಿದ್ದಾರೆ‌. ಬಹು ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ತೆರೆಮೇಲೆ ತರಲಾಗಿದೆ.

Advertisement

ಸಿನಿಮಾದ ಕಥೆ ಹೀಗಿದೆ:

ಕಲಿಯುಗದ ಅಂತ್ಯ ಹಾಗೂ ಕಲ್ಕಿ ಆಗಮನದ ಮಧ್ಯೆ ನಡೆಯುವಂತ ಕಥೆಯಿದಾಗಿದೆ. ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಕಲ್ಕಿಯ ಆಗಮನಕ್ಕಾಗಿ ಕಾಯುತ್ತಿರುವ ಸುಮತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು, ಸುಮತಿಯ ಹೊಟ್ಟೆಯಲ್ಲಿ ಕಲ್ಕಿ ಹುಟ್ಟುತ್ತಾನೆ. ಕಾಶಿಯಲ್ಲಿ ವಾಸಿಸುವ ಭೈರವನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈ ಭೈರವ ಸ್ವರ್ಗದಂತೆ ಕಾಣುವ ಕಾಂಪ್ಲೆಕ್ಸ್ ಗೆ ಹೋಗುವುದಕ್ಕೆ ಹಾತೊರೆಯುತ್ತಾ ಇರುತ್ತಾನೆ. ಕಾಶಿ ನಗರದ ಶೈತಾನ್ ನಾಯಕನ ಪಾತ್ರದಲ್ಲಿ ಕಮಲ್ ಹಾಸನ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ವಿಶೇಷ ಅತಿಥಿ ಪಾತ್ರದಲ್ಲಿ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಜಮೌಳಿ, ದಿಶಾ ಪಟಾನಿ, ಶೋಭನಾ, ಬ್ರಹ್ಮಾನಂದ್, ಮಾಳವಿಕ ನಾಯರ್ ಕೂಡ ಕಾಣಿಸಿಕೊಂಡಿದ್ದಾರಡ.

Advertisement

ಪಾತ್ರಗಳ ಗೆಟಪ್, ಬಳಸುವ ವಾಹನಗಳೆಲ್ಲವೂ ವಿಶೇಷವಾಗಿದೆ. ಆಕ್ಷನ್ ಸೀನ್ ಗಳಂತೂ ಬೇರೆ ಲೆವೆಲ್ ನಲ್ಲಿಯೇ ಇದಾವೆ. ಈ ಸಿನಿಮಾ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳಿಗೆ ಹಬ್ಬವನ್ನುಂಟು ಮಾಡಿದೆ. ಇನ್ನು ಈ ಸಿನಿಮಾದಲ್ಲಿ ಬಳಸಲಾಗಿರುವ ಬುಜ್ಜಿ ಎಂಬ ಕಾರು ಎಲ್ಲರ ಆಕರ್ಷಣಿಯ ಬಿಂದುವಾಗಿದೆ. ಅದ್ಭುತ ಪ್ರಯತ್ನ, ಅದ್ಬುತ ಪ್ರಯೋಗಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

Advertisement
Tags :
'Kalki 2898AD'actor Prabhasaudiencebengaluruchitradurgaprabhassuddionesuddione newsThe much awaitedಕಲ್ಕಿ 2898ADಚಿತ್ರದುರ್ಗಪ್ರಭಾಸ್ಬಹುನಿರೀಕ್ಷಿತಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article