For the best experience, open
https://m.suddione.com
on your mobile browser.
Advertisement

ರಾಜ್ಯ ಪಠ್ಯಪುಸ್ತಕದ ವಿರುದ್ಧ ವೀರಶೈವರ ಅಸಮಾಧಾನ : ಯಾಕೆ ಗೊತ್ತಾ..?

04:07 PM Jun 30, 2024 IST | suddionenews
ರಾಜ್ಯ ಪಠ್ಯಪುಸ್ತಕದ ವಿರುದ್ಧ ವೀರಶೈವರ ಅಸಮಾಧಾನ   ಯಾಕೆ ಗೊತ್ತಾ
Advertisement

ಬೆಂಗಳೂರು: 2024-25ರ ಶೈಕ್ಷಣಿಕ ವರ್ಷ ಈಗಾಗಲೇ ಶುರುವಾಗಿದೆ. ಶಿಕ್ಷಣ ಇಲಾಖೆಯಿಂದ ಈಗಾಗಲೇ ಪುಸ್ತಕಗಳ ವಿತರಣೆಯೂ ನಡೆದಿದೆ. ಇದೀಗ ಪುಸ್ತಕದಲ್ಲಿ ಆಗಿರುವ ಪ್ರಮಾದಕ್ಕೆ ವೀರಶೈವ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಪಾಠವಿದೆ. ಆ ಪಾಠದಲ್ಲಿ ಬಸವಣ್ಣನವರನ್ನು ಕುರಿತು ತಪ್ಪಾಗಿ ಪ್ರಕಟಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪಠ್ಯದಲ್ಲಿ ವೀರಶೈವ ಎಂಬ ಪದವನ್ನೇ ಕೈಬಿಡಲಾಗಿದೆ. ಇದು ಸಮುದಾಯಕ್ಕೆ ಮಾಡಿದ ಅಪಮಾನವೆಂದು ವಚನಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಪತ್ರ ಬರೆದಿದೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲೇನಿದೆ..?

Advertisement

'ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯಲ್ಲಿ ವೀರಶೈವ ಧರ್ಮದ ಗುರುಪರಂಪರೆಯ ಪಂಚಪೀಠಗಳ ಶಾಖಾಮಠಗಳ ಮಠಾಧೀಶರು ಸದಸ್ಯರಾಗಿದ್ದಾರೆ. ಈ ಎಲ್ಲ ಮಠಾಧೀಶರ ಒಮ್ಮತದ ಅಭಿಪ್ರಾಯವನ್ನು ಈ ಪತ್ರದಲ್ಲಿ ತಮ್ಮ ಗಮನಕ್ಕೆ ತರುತ್ತಿದ್ದೇವೆ. ಈ ವರ್ಷದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣ ಅವರ ಪರಿಚಯವನ್ನು ಪರಿಷ್ಕರಿಸಲಾಗಿದೆ. 2016ರಿಂದ ಈಗ ಮೂರನೇ ಬಾರಿ ಪರಿಷ್ಕರಿಸಲಾಗಿದೆ. ಈ ಪರಿಷ್ಕರಣೆಯಲ್ಲಿ ವಿದ್ಯಾರ್ಥಿಗಳಿಗೆ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ. ಬಸವಣ್ಣ ಅವರ ಪರಿಚಯದ ವೇಳೆ ವೀರಶೈವ ಪದ ಕೈ ಬಿಡಲಾಗಿದೆ. ಇದು ಸರಿಯಲ್ಲ. ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ‘ವೀರಶೈವ’ ಪದವನ್ನು ತಗೆದು ಹಾಕಲಾಗಿದೆ. ಈ ಪರಿಷ್ಕರಣೆ ಸರಿಯಲ್ಲ‌. ಯಾಕೆಂದರೆ 30 ಹೆಚ್ಚು ಶಿವಶರಣರು 142 ವಚನಗಳಲ್ಲಿ 221 ಬಾರಿ ʼವೀರಶೈವʼ ಎಂಬ ಪದ ಬಳಸಿದ್ದಾರೆ. ಕೇವಲ 8 ಜನ ಶಿವಶರಣರು ತಮ್ಮ 10 ವಚನಗಳಲ್ಲಿ 12 ಕಡೆ ಮಾತ್ರ ‘ಲಿಂಗಾಯತ’ ಪದವನ್ನು ಬಳಸಿದ್ದಾರೆ. ಆದರೆ ಬಸವಣ್ಣ ತಮ್ಮ ಒಂದು ವಚನದಲ್ಲಿಯೂ ‘ಲಿಂಗಾಯತ’ ಪದ ಬಳಸಿಲ್ಲ. ಆದರೆ ಬಸವಣ್ಣ ಅವರೇ ಅನೇಕ ಬಾರಿ ತಮ್ಮ ವಚನಗಳಲ್ಲಿ ‘ವೀರಶೈವ’ ಪದ ಬಳಸಿರುವುದಲ್ಲದೇ ತಮ್ಮದೊಂದು ವಚನದಲ್ಲಿ ತಾವು ನಿಜ ವೀರಶೈವ’ (ವಚನ ಸಂಖ್ಯೆ 1,092). ವಾಸ್ತವ ಹೀಗಿರುವಾಗ 2016 ಮತ್ತು 2022ರ ಪಠ್ಯಪುಸ್ತದಲ್ಲಿರುವ ʼವೀರಶೈವ’ ಪದವನ್ನು ತಗೆದು ಹಾಕಿರುವುದು ಸರಿಯಾದ ಕ್ರಮವಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರಿಂದ ಇತಿಹಾಸವನ್ನು ತಿರುಚಿದಂತಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯ ಮತ್ತು ಕಾನೂನು ಬಾಹಿರ ಕಾರ್ಯ ಎಂದು ಪತ್ರದಲ್ಲಿ ಬರೆದಿದ್ದಾರೆ.

Tags :
Advertisement