For the best experience, open
https://m.suddione.com
on your mobile browser.
Advertisement

ನಿವೇದಿತಾ ಜೈನ್ ಸಾವಿನ ಬಗ್ಗೆ ಮೊದಲೇ ಎಚ್ಚರಿಸಿದ್ದರು ಆ ಮನುಷ್ಯ.. ಮನೆಯು ಸಿಗಲಿಲ್ಲ.. ನಟಿಯೂ ಉಳಿಯಲಿಲ್ಲ..!

01:10 PM May 09, 2024 IST | suddionenews
ನಿವೇದಿತಾ ಜೈನ್ ಸಾವಿನ ಬಗ್ಗೆ ಮೊದಲೇ ಎಚ್ಚರಿಸಿದ್ದರು ಆ ಮನುಷ್ಯ   ಮನೆಯು ಸಿಗಲಿಲ್ಲ   ನಟಿಯೂ ಉಳಿಯಲಿಲ್ಲ
Advertisement

ನಿವೇದಿತಾ ಜೈನ್ ಬದುಕಿದ್ದು ಕೇವಲ 19 ವರ್ಷ. ಆದರೆ ಹಲವು ಸಿನಿಮಾಗಳಲ್ಲಿ ನಟಿಸಿ, ಎಲ್ಲರನ್ನು ಬಿಟ್ಟು ಹೊರಟೆ ಹೋದರು. ಇಂದಿಗೂ ಅವೆ ಸಾವು ಆತ್ಮಹತ್ಯೆಯೋ, ಸಹಜ ಸಾವೋ ಎಂಬ ಪ್ರಶ್ನೆ ಕಾಡುತ್ತದೆ. ನಿವೇದಿತಾ ಜೈನ್ ಬದುಕಿದ್ದಿದ್ದರೆ ಬಾಲಿವುಡ್ ನಲ್ಲೂ ನಟಿಸುವ ಅವಕಾಶ ಇತ್ತು. ಅವರ ತಾಯಿ ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ.

Advertisement
Advertisement

ರಘುರಾಮ್ ಎಂಬುವವರ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಮಗಳ ಸಾವಿನ ಬಗ್ಗೆ ಮಾತನಾಡಿರುವ ಪ್ರಿಯಾ ಜೈನ್, 'ನಿವೇದಿತಾ ಜೈನ್ 9ನೇ ತರಗತಿ ಓದುತ್ತಿರುವಾಗಲೇ ಮಿಸ್ ಬೆಂಗಳೂರು ಆಗಿದ್ದರು. ಮಿಸ್ ಬೆಂಗಳೂರು ಬಗ್ಗೆ ಪೇಪರ್ ನಲ್ಲಿ ಬಂದಿದ್ದನ್ನು ಅವರ ತಂದೆ ಫೋಟೋ ಕಳುಹಿಸಿಕೊಟ್ಟಿದ್ದರು. ಅವಳಿಗೆ ಕಾಲ್ ಬಂತು. ಅವಳ ಆಗಿನ ಹೈಟ್ ನೋಡಿ 18 ಇರಬಹುದು ಎಂದುಕೊಂಡಿದ್ದರು. ಅವಳಿಗೂ ಆ ಕಾಂಪಿಟೇಷನ್ ನಲ್ಲಿ ಭಾಗವಹಿಸುವ ಆಸೆ ಇತ್ತು. ಅದಾದ ಬಳಿಕ ಅವಳ ಫೋಟೋಗಳು ಪೇಪರ್, ಮ್ಯಾಗಜಿನ್ ನಲ್ಲಿ ಬಂತು. ಡಾ. ರಾಜ್‍ಕುಮಾರ್ ಅವರ ಮಗ ರಾಘವೇಂದ್ರ ರಾಜ್‍ಕುಮಾರ್ ಅವರ ಶಿವರಂಜಿನಿ ಸಿನಿಮಾಗೆ ಆಫರ್ ಬಂತು. ಅವಳು ತುಂಬಾನೇ ಚಿಕ್ಕವಳಿದ್ದಳು. ಹೀಗಾಗಿ ನಾವೂ ಆಸಕ್ತಿ ತೋರಿಸಲಿಲ್ಲ. ಅವಳು ಕೂಡ ಆಸಕ್ತಿ ಇಲ್ಲ ಎಂದಳು. ಆದರೆ ಅಣ್ಣಾವ್ರ ಬ್ಯಾನರ್ ಅಂತ ಒಪ್ಪಿದಳು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋದೆವು. ಅಲ್ಲಿ ಪೂಜೆ ಮಾಡುತ್ತಿದ್ದ ವ್ಯಕ್ತಿ ಕರೆದು, ನಿಮ್ಮ ಮಗಳಿಗೆ ಅಲ್ಪ ಆಯಸ್ಸು ಎಂದು ಹೇಳಿದರು. ಮನೆಯ ದಿಕ್ಕುಗಳ ಬಗ್ಗೆಯೂ ಹೇಳಿದರು. ಆ ಮನೆ ನಿವೇದಿತಾ ಜೈನ್ ಅನ್ನು ಆಹುತಿ ಪಡೆಯುತ್ತೆ ಅಂತ ಕೂಡ ಹೇಳಿದ್ದರು. ಮನೆ ಬದಲಾಯಿಸಲು ಹೇಳಿದ್ದರು. ಅಲ್ಲಿಂದ ಬಂದ ಮೇಲೆ ಮನೆ ಹುಡುಕಲು ಶುರು ಮಾಡಿದೆವು. ಆದರೆ ಮನೆ ಸಿಗಲೇ ಇಲ್ಲ‌. ಅವರು ಹೇಳಿದಂತೆಯೇ ಘಟನೆ ನಡೆದು ಹೋಯ್ತು' ಎಂದಿದ್ದಾರೆ.

Advertisement
Advertisement

Advertisement
Tags :
Advertisement