ಅಬ್ಬಬ್ಬಾ ಪುಷ್ಪ-2 ಸಿನಿಮಾ ಡ್ಯೂರೇಷನ್ ಇಷ್ಟೊಂದಾ..? ಪ್ರೇಕ್ಷಕನ ತಾಳ್ಮೆ ಚೆಕ್ ಮಾಡುತ್ತಾ..?
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ಅದಾಗಲೇ ಪುಷ್ಪ ಮಾಡಿ ಎಲ್ಲರು ಕುತೂಹಲದಿಂದಾನೇ ಕಾಯುವಂತೆ ಮಾಡಿದ ಸುಕುಮಾರನ್ ಇದೀಗ ತಮ್ಮ ಪುಷ್ಪ-2 ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಪುಷ್ಪ-2 ಸಿನಿಮಾ ರಿಲೀಸ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಪ್ರಚಾರ ಕಾರ್ಯವೂ ಶುರುವಾಗಿದೆ. ಎಲ್ಲೆಡೆ ಪುಷ್ಪ-2 ಫೀವರ್ ಕೂಡ ಜೋರಾಗಿದೆ. ಇಂದು ಸೆನ್ಸಾರ್ ಕೂಡ ಮುಗಿದಿದ್ದು, ಯುಐ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಈ ಜೋಶ್, ಕ್ರೇಜ್ ನಡುವೆ ಭಯಂಕರ ಸಂಗತಿ ಎಂದರೆ ಸಿನಿಮಾದ ಅವಧಿ.
ಪುಷ್ಪ-2 ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರುತ್ತಿದೆ. ಸೆನ್ಸಾರ್ ಮಂಡಳಿಯಿಂದ ಸಿನಿಮಾದಲ್ಲಿರುವ ಸಣ್ಣ ಮಟ್ಟದ ಅಶ್ಲೀಲತೆಯನ್ನು ಕತ್ತರಿಸುವಂತೆ ಸೂಚನೆ ನೀಡಲಾಗಿದೆಯಂತೆ. ಅದರಂತೆ ಸಿನಿಮಾ ತಂಡ ಆ ಡೈಲಾಗ್ ಗಳ ರೀತಿಯನ್ನು ಬದಲು ಮಾಡಿದೆಯಂತೆ. ಹಾಗೇ ಇಲ್ಲಿ ಹೆಚ್ಚು ಚರ್ಚೆಯಾಗುತ್ತಿರುವುದು ಸಿನಿಮಾದ ಡ್ಯೂರೇಷನ್. ಪುಷ್ಪ-2 ಸುಮಾರು ಮೂರುವರೆ ಗಂಟೆಗಳ ಕಾಲ ಇದೆಯಂತೆ. ಮೊದಲಾರ್ಧವೇ 1 ಗಂಟೆ 45 ನಿಮಿಷ ಇದೆ ಎನ್ನಲಾಗಿದೆ.
ಅವಧಿ ಸಿಕ್ಕಾಪಟ್ಟೆ ಜಾಸ್ತಿಯಾದರೂ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಎಂದೇ ಹೇಳಲಾಗುತ್ತಿದೆ. ಆದರೂ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕನ ತಾಳ್ಮೆಯನ್ನು ಮೆಚ್ಚಬೇಕಾದದ್ದೆ. ಸಿನಿಮಾ ಡ್ಯೂರೇಷನ್ ಜಾಸ್ತಿಯಾದಷ್ಟು ನೋಡುಗ ತಾಳ್ಮೆ ಕಳೆದುಕೊಳ್ಳುತ್ತಾ ಹೋಗುತ್ತಾನೆ. ಸಿನಿಮಾ ತಂಡ ಏನನ್ನ ಪ್ರೇಕ್ಷಕನಿಗೆ ತಲುಪಿಸಬೇಕು ಎಂದುಕೊಂಡಿರುತ್ತಾನೋ ಅದು ತಲುಪುವಲ್ಲಿ ಫೇಲ್ ಕೂಡ ಆಗಬಹುದು. ನೋಡೋಣಾ ಸಿನಿಮಾ ಎಲ್ಲಿಯೂ ಬೋರ್ ಹೊಡೆಸಲ್ಲ ಎಂದು ಚಿತ್ರ ತಂಡವೇ ಭರವಸೆ ನೀಡಿದೆ.