ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಶಾಕ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಮಂಡ್ಯ: ಇತ್ತೀಚೆಗಷ್ಟೇ ಸಂಪುಟ ಪುನರ್ ರಚನೆ ಆಗುತ್ತೆ ಎಂಬ ಚರ್ಚೆ ಜೋರಾಗಿತ್ತು. ಸಂಪುಟ ಪುನರ್ ರಚನೆಯಾಗುತ್ತೆ ಎಂದಾಗಲೇ ಈ ಬಾರಿ ನಮಗೂ ಅವಕಾಶ ಸಿಗುತ್ತೆ ಎಂಬನಿರೀಕ್ಷೆ ಹಲವರಿಗೆ ಹುಟ್ಟಿಕೊಂಡಿತ್ತು. ಅದರಲ್ಲೂ ಸಿದ್ದರಾಮಯ್ಯ ಅವರ ಸಂಪುಟ ಸೇರುವುದಕ್ಕೆ ಹಲವರು ಆಕಾಂಕ್ಷುಗಳಾಗಿದ್ದರು. ಯಾರೂ ಹೊರಗೆ ಹೋಗ್ತಾರೆ..? ಯಾರೂ ಹೊರಗೆ ಬರ್ತಾರೆ ಎಂಬ ಚರ್ಚೆಗಳು ಶುರುವಾಗಿತ್ತು. ಅಷ್ಟೇ ಅಲ್ಲ ಮಾಜಿ ಸಚಿವರಿಗೂ ಮತ್ತೆ ಅವಕಾಶಗಳು ಸಿಗಬಹುದಾ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನರ್ ರಚನೆ ಆಗುವುದರ ಬಗ್ಗೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 'ಪುನರ್ ರಚನೆ ಸದ್ಯಕ್ಕೆ ಆಗಲ್ಲ. ನಾನೇಳಿದ್ದೀನಾ..?' ಎಂದು ಪ್ರಶ್ನೆ ಮಾಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಯಾರು ಹೇಳುತ್ತಾರೆ ಎಂಬುದು ಮುಖ್ಯವಲ್ಲ, ಅಂತಿಮವಾಗಿ ಹೈಕಮಾಂಡ್ ನಾಯಕರು ನಂಗೆ ಸೂಚನೆ ಕೊಡಬೇಕು, ಬಳಿಕ ನಾನು ತೀರ್ಮಾನ ತೆಗೆದುಕೊಳ್ಳಬೇಕು. ಹೈಕಮಾಂಡ್ ನಾಯಕರು ನಂಗೆ ಹೇಳಿಯೂ ಇಲ್ಲ. ನಾನು ತೀರ್ಮಾನ ತೆಗೆದುಕೊಂಡು ಇಲ್ಲ.
ಇದೇ ವೇಳೆ ಹಾಸನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾಳೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸ್ವಾಭಿಮಾನಿ ಒಕ್ಕೂಟದ ಜಂಟಿಯಲ್ಲಿ ಸಮಾವೇಶ ನಡೆಯುತ್ತಿದೆ. ಅದು ಹೆಚ್ಚಾಗಿ ಸ್ವಾಭಿಮಾನಿ ಒಕ್ಕೂಟದ ಜನಗಳನ್ನ ಕರೆದುಕೊಂಡು ಬರುತ್ತಾರೆ. ಹೆಸರೇನು ಬದಲಾಗಿಲ್ಲ. ಮೊದಲಿನಿಂದಾನೂ ಹಾಗೇ ಇದೆ. ಕಾಂಗ್ರೆಸ್ ಪಕ್ಷ ಕುಇಡ ಸೇರಿಕೊಂಡು ನಡೆಸುತ್ತಿರುವ ಕಾರಣ ಜಂಟಿ ಆಶಯದಲ್ಲಿ ನಡೆಯುತ್ತಿದೆ ಎಂದು ಹೇಳುವ ಮೂಲಕ ಹಲವು ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ.