For the best experience, open
https://m.suddione.com
on your mobile browser.
Advertisement

ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ..!

05:06 PM Jun 26, 2024 IST | suddionenews
ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
Advertisement

ಬೆಂಗಳೂರು: ಅಶ್ಲೀಲ ವಿಡಿಯೋ ಕೇಸಲ್ಲಿ ಬಂಧಿಯಾಗಿರುವ ಪ್ರಜ್ವಲ್ ರೇವಣ್ಣ ಇನ್ನು ಕೂಡ ಜೈಲಿನಲ್ಲಿಯೇ ಇದ್ದಾರೆ. ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ‌. ಈ ಸಂಬಂಧ ಹೊರಗೆ ಬರುವುದಕ್ಕೆ ಪ್ರಜ್ವಲ್ ರೇವಣ್ಣ ಪರವಾಗಿ ವಕೀಲರು ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

Advertisement

Advertisement

ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಪ್ರಜ್ವಲ್ ರೇವಣ್ಣ ಜೈಲಿನಲ್ಲಿಯೇ ಕೂರಬೇಕಾದ ಪರಿಸ್ಥಿತಿ ಇದೆ.

Advertisement

ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಅದ್ಯಾಕೋ ಜೈಲಿನ ಸಹವಾಸ ತಪ್ಪಿಲ್ಲ. ಪ್ರಜ್ಚಲ್ ರೇವಣ್ಣ ಫಾರಿನ್ ಗೆ ಹಾರಿದ್ದಾಗ ಕಿಡ್ನ್ಯಾಪ್ ಕೇಸಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪೊಲೀಸರ ಕೈಗೆ ಲಾಕ್ ಆಗಿದ್ದರು. ವಾರಾನುಗಟ್ಟಲೇ ಪೊಲೀಸ್ ಠಾಣೆಯಲ್ಲಿಯೇ ಇದ್ದರು. ಬಳಿಕ ಹೇಗೋ ಜಾಮೀನನ ಮೇಲೆ ಹೊರ ಬಂದರು. ಮತ್ತೆ ಕಿರಿಯ ಮಗ ಪ್ರಜ್ಚಲ್ ರೇವಣ್ಣ ಸರದಿ. ವಿದೇಶದಿಂದ ಬಂದೊಡನೆ ಪೊಲೀಸರ ಅತಿಥಿಯಾದರು. ಈಗ ಹಿರಿಯ ಮಗನು ಜೈಲು ಸೇರಿದ್ದಾರೆ. ಅದು ಕೂಡ ಲೈಂಗಿಕ ಆರೋಪದ ಮೇಲೆಯೇ. ಪ್ರಜ್ಚಲ್ ರೇವಣ್ಣ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಂಡ ವಿಡಿಯೋಗಳು ಹರಿದಾಡಿದ್ದರೆ, ಸೂರಜ್ ರೇವಣ್ಣ ಗಂಡಸರ ಜೊತೆಗೆ ಸೇರಿಕೊಂಡು ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಅದರಲ್ಲೂ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿರುವ ದೂರು ದಾಖಲಾಗಿದೆ.

Advertisement

ಸದ್ಯ ಸೂರಜ್ ರೇವಣ್ಣ ಅವರನ್ನು ತನಿಖೆ ನಡೆಸುತ್ತಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ದೂರುದಾರ ಕೂಡ ಜೆಡಿಎಸ್ ಕಾರ್ಯಕರ್ತ ಎಂಬುದು ವಿಶೇಷ.

Advertisement
Tags :
Advertisement