Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದರ್ಶನ್ ಕೇಸಲ್ಲಿ ಸ್ಟಾರ್ ಆಗಿ ಮಿಂಚಿದ್ದ ಎಸಿಪಿ ಚಂದನ್ ವಿರುದ್ಧ ತನಿಖೆಗೆ ಆದೇಶ..!

04:31 PM Oct 25, 2024 IST | suddionenews
Advertisement

 

Advertisement

ಬೆಂಗಳೂರು: ಎಸಿಪಿ ಚಂದನ್ ಎಂದಾಕ್ಷಣಾ ಎಲ್ಲರ ಕಣ್ಣ ಮುಂದೆ ಬರುವುದು ದರ್ಶನ್ ಅವರನ್ನೇ ಎಳೆದು ತರುವ ದೃಶ್ಯ. ಈ ಕೇಸಲ್ಲಿ ಅವರು ನಡೆದುಕೊಂಡ ರೀತಿಗೆ ಹೀರೋ ಆಗಿ ಮಿಂಚಿದ್ದರು. ಆದರೆ ಇದೀಗ ಎಸಿಪಿ ಚಂದನ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕು ಆಯೋಗ ತನಿಖೆಗೆ ಆದೇಶಿಸಿದೆ.

ಪುನೀತ್ ಕೆರೆಹಳ್ಳಿ ದೂರು ನೀಡಿದ್ದರು. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ಕಿರುಕುಳ ನೀಡಲಾಗಿದೆ ಎನ್ನಲಾಗಿತ್ತು. 'ಜುಲೈ 26ರಂದು ರಾತ್ರಿ 9 ಗಂಟೆ ಸುಮಾರಿಗೆ ಕಾಟನ್ ಪೇಟೆ ಪೊಲೀಸರು ಕಾರಣ ತಿಳಿಸಿ ಬಲವಂತವಾಗಿ ನನ್ನನ್ನು ಠಾಣೆಗೆ ಕರೆದುಕೊಂಡು ಹೋದರು. ಆಗ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಷ್ಟೇ ಅಲ್ಲದೆ ಎಸಿಪಿ ಚಂದನ್ ಕುಮಾರ್ ಅವರು ಲಾಠಿಯಿಂದ ಜೋರಾಗಿ ಹೊಡೆದು, ನಗ್ನಗೊಳಿಸಿ, ಲೈಂಗಿಕ ಕಿರುಕುಳ ನೀಡಿದರು' ಎಂದು ಆರೋಪ ಮಾಡಿದ್ದರು.

Advertisement

ಈ ಸಂಬಂಧ ಇದೀಗ ರಾಜ್ಯ ಮಾನವ ಹಕ್ಕು ಆಯೋಗ ತನಿಖೆ ನಡೆಸುವಂತೆ ಉಪ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ. ನಾಲ್ಕು ವಾರಗಳಲ್ಲಿ ಇದರ ವರದಿ ನೀಡುವಂತೆ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ನಾಯಿ ಮಾಂಸ ಸಾಗಾಟದ ಬಗ್ಗೆ ದೊಡ್ಡ ಸುದ್ದಿಯೇ ಆಗಿತ್ತು. ದೊಡ್ಡಮಟ್ಟದ ಚರ್ಚೆಗೂ ಇದು ಗ್ರಾಸವಾಗಿತ್ತು. ಕುರಿ ಮತ್ತು ಮೇಕೆ ಮಾಂಸದ ಜೊತೆಗೆ ನಾಯಿ ಮಾಂಸ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತದೆ ಎಂದು ಆರೋಪಿಸಲಾಗಿತ್ರು. ಇದು ನಾನ್ ವೆಜ್ ಪ್ರಿಯರ ನಿದ್ದೆ ಕೆಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ಕೇಸ್ ದಾಖಲಿಸಿದ್ದರು.

Advertisement
Tags :
ACP Chandanbengaluruchitradurgadarshansuddionesuddione newsಆದೇಶಎಸಿಪಿ ಚಂದನ್ಚಿತ್ರದುರ್ಗತನಿಖೆದರ್ಶನ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸ್ಟಾರ್
Advertisement
Next Article