ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ನಿಖಿಲ್ ಫಸ್ಟ್ ರಿಯಾಕ್ಷನ್ : ಅಜ್ಜ, ಅಜ್ಜಿ ಬಗ್ಗೆ ಮನವಿ
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಸುದ್ದಿ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದಾದ್ಯಂತೆ ಸದ್ದು ಮಾಡುತ್ತಿದೆ. ನಟಿ ಮಣಿಯರು ಕೂಡ ಇದಕ್ಕೆ ಆಕ್ರೋಶಿತರಾಗಿ ಮಾತನಾಡುತ್ತಿದ್ದಾರೆ. ಇದೀಗ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮೊ ಬಾರಿಗೆ ನಿಖಿಲ್ ಕುಮಾರಸ್ವಾಮಿ ರಿಯಾಕ್ಷನ್ ಕೊಟ್ಟಿದ್ದಾರೆ.
ಈ ಪ್ರಕರಣವನ್ನು ಕರ್ನಾಟಕ ರಾಜ್ಯ ಸರ್ಕಾರ ಎಸ್ಐಟಿಗೆ ಕೊಟ್ಟಿದೆ. ತನಿಖೆ ನಡೆಯುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಂತಿಮವಾಗಿ ಎಸ್ಐಟಿ ವರದಿ ಬಂದ ಮೇಲೆ ಕಾನೂನು ಕ್ರಮ ಆಗಲಿದೆ. ಅದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ದೇವೇಗೌಡರು ಹಾಗೂ ಅವರ ಪತ್ನಿ ಬಗ್ಗೆ ಮಾತನಾಡಿ, ಈ ಒಂದು ಪ್ರಕರಣವನ್ನು ರಾಜಕೀಯವಾಗಿ ರಾಜ್ಯದ ಜನತೆಗಡ ತಪ್ಪು ಸಂದೇಶ ಕೊಡುತ್ತಿದ್ದಾರೆ. ದೇವೇಗೌಡರ ಜೀವನ ತೆರೆದ ಪುಸ್ತಕದ ಆಗಿದೆ. ದೇವೇಗೌಡರು ಹಾಗೂ ನಮ್ಮ ಅಜ್ಜಿ ಯುವಕರಿಗೆ ಸ್ಪೂರ್ತಿ. ದಂಪತಿ ಯಾವ ರೀತಿ ಬದುಕಿ ಬಾಳಬೇಕು ಎಂಬುದಕ್ಕೆ ಅವರೇ ಉದಾಹರಣೆ. ಬೇರೆ ಯಾರು ಕಾಣುವುದಿಲ್ಲ. ದಯಮಾಡಿ ನಾನು ಕೈ ಜೋಡಿಸಿ ಮನವಿ ಮಾಡುತ್ತೀನಿ. ದೇವೇಗೌಡರಿಗೆ 91-92 ವರ್ಷ ವಯಸ್ಸು. ಈ ಎಲ್ಲಾ ವಿಷಯ ಕೇಳಿದ ಮೇಲೆ ಅವರ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಯಾರೂ ಸಹ ಊಹೆ ಮಾಡುವುದಕ್ಕೆ ಆಗಲ್ಲ. ಬೆಳಗ್ಗೆ 5 ಗಂಟೆಗೆ ದೇವಸ್ಥಾನಕ್ಕೆ ಹೋಗಿ 9 ಗಂಟೆಗೆ ಬಂದೆ ಎಂದು ಹೇಳಿದ್ದಾರೆ. ಅವರು ಕೂಡ ಎಲ್ಲರಿಗಿಂತ ಹೆಚ್ಚು ನೊಂದಿದ್ದಾರೆ. ದೇವೇಗೌಡರು, ನಮ್ಮ ಅಜ್ಜಿ ಬಹಳ ನೊಂದಿದ್ದಾರೆ ಎಂದಿದ್ದಾರೆ.