For the best experience, open
https://m.suddione.com
on your mobile browser.
Advertisement

ನವೆಂಬರ್ 26 ರಿಂದ 28 ರವರೆಗೆ ಭ್ರಷ್ಟಾಚಾರ ತಡೆಯಲು ಉಪವಾಸ ಸತ್ಯಾಗ್ರಹ : ಎಎಪಿ ಜಗದೀಶ್

04:13 PM Nov 22, 2024 IST | suddionenews
ನವೆಂಬರ್ 26 ರಿಂದ 28 ರವರೆಗೆ ಭ್ರಷ್ಟಾಚಾರ ತಡೆಯಲು ಉಪವಾಸ ಸತ್ಯಾಗ್ರಹ   ಎಎಪಿ ಜಗದೀಶ್
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ನ. 22 : ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ತುಂಬಿ ತುಳುಕಾಡುತ್ತಿದೆ, ಇದನ್ನು ತಡೆಯುವ ಸಲುವಾಗಿ ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ನ. 26 ರಿಂದ 28ರವರೆಗೆ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ ಘಟಕದವತಿಯಿಂದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಬಿ.ಇ.ಜಗದೀಶ್ ತಿಳಿಸಿದರು.

Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಸಮಾಜಿಕ ನ್ಯಾಯ ಸರಿಯಾದ ರೀತಿಯಲ್ಲಿ ಸಿಕ್ಕಲ್ಲ, ಸಂವಿಧಾನದ ಆಶಯಗಳು ಪೂರ್ಣಗೊಂಡಿಲ್ಲ, ಸರ್ಕಾರದ ಸೌಲಭ್ಯಗಳು ಸಿಕ್ಕವರಿಗೆ ಸಿಗುತ್ತಿವೆ, ಬಡವ ಬಡವನಾಗಿಯೇ ಇರುತ್ತಿದ್ದಾರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ, ಇಂದಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ಎನ್ನುವುದು ತುಂಬಿದೆ ಯಾವ ಸರ್ಕಾರಿ ಕಚೇರಿಯಾದರೂ ಸಹಾ ಲಂಚ ಇಲ್ಲದೆ ಕೆಲಸವಾಗುವುದಿಲ್ಲ, ಆಸ್ಪತ್ರೆಯಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ, ಬಡವರು ಚಿಕಿತ್ಸೆಗಾಗಿ ಹೋದರೆ ಲಂಚ ಇಲ್ಲದೆ ಚಿಕಿತ್ಸೆ ಸಿಗುವುದಿಲ್ಲ ಕಾರ್ಯಾಂಗ ಶಾಸಕಾಂಗ ಭ್ರಷ್ಠಾಚಾರದಿಂದ ಕೊಡಿದೆ. ಇದರಲ್ಲಿ ಮತದಾರನು ಸಹಾ ಭ್ರಷ್ಠಚಾರನಾಗಿದ್ದಾನೆ ಇವರಿಂದ ಮತವನ್ನು ಖರೀದಿ ಮಾಡಿದ ಚುನಾಯುತ ವ್ಯಕ್ತಿಯೂ ಸಹಾ ಭ್ರಷ್ಠಚಾರನಾಗಿದ್ದಾನೆ ಎಂದು ದೂರಿದರು.

ಸಂವಿಧಾನವನ್ನು ಒಪ್ಪಿಕೊಂಡ ನಮಗೆ ಇದರ ಪೂರ್ಣವಾದ ಸೌಲಭ್ಯ ಸಿಗುತ್ತಿಲ್ಲ, ಇದನ್ನು ಹೇಳುವುದರ ಮೂಲಕ ನಮ್ಮನ್ನು ಚುನಾಯುತ ಪ್ರತಿನಿಧಿಗಳು ಯಾಮಾರಿಸುತ್ತಿದ್ದಾರೆ. ಇದರಿಂದ ಹೊರಬರಬೇಕಿದೆ. ಈ ಹಿನ್ನಲೆಯಲ್ಲಿ ಆಮ್ ಆದ್ಮೀ ಪಾರ್ಟಿಯವತಿಯಿಂದ ನ. 26 ರಿಂದ 28ರವರಗೆ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಭ್ರಷ್ಠಾಚಾರ ಮುಕ್ತ ಚಿತ್ರದುರ್ಗಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಮೂರು ದಿನ ನಡೆಯುವ ಈ ಸತ್ಯಾಗ್ರಹದಲ್ಲಿ ಆಮ್ ಆದ್ಮೀ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಸೇರಿದಂತೆ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಟಿಯಲ್ಲಿ ಕಾರ್ಯದರ್ಶಿ ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ, ಹೊಸದುರ್ಗ ತಾ.ಅಧ್ಯಕ್ಷರಾದ ರಾಜು, ಚಿತ್ರದುರ್ಗ ತಾ.ಮಹಿಳಾ ಘಟಕದ ಅಧ್ಯಕ್ಷರಾದ ವಿನೋದಮ್ಮ, ಆಲ್ಪ ಸಂಖ್ಯಾತರ ಘಟಕದ ಆಧ್ಯಕ್ಷರಾದ ತನ್ವೀರ್, ಜಂಟಿ ಕಾರ್ಯದರ್ಶಿ ಲೋಕೇಶಪ್ಪ, ಯುವ ಘಟಕದ ಅಧ್ಯಕ್ಷರಾದ ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

Tags :
Advertisement