ಮಾದವಾರದಲ್ಲಿ ಸಿಕ್ಕ ಕೋಟಿ ಕೋಟಿ ಹಣ : ಮೆಸೇಜ್ ಮಾಡಿ, ಕಾಲ್ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ಕೆ.ಸುಧಾಕರ್..?
ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕಂತೆವಕಂತೆ ಹಣ ಸಾಗಾಣೆಯಾಗುವುದು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಹಣ ಸಾಗಾಟ ನಡೆಯುತ್ತದೆ ಎಂದೇ ಪೊಲೀಸರು ಹದ್ದಿನ ಕಣ್ಣು ಇಡುತ್ತಾರೆ. ಏಪ್ರಿಲ್ 25ರಂದು ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಇದೀಗ ಆ ಹಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ.
ಮಾದವಾರದ ಬಿಜೆಪಿ ಮುಖಂಡ ಗೋವಿಂದಪ್ಪನ ಮನೆಯಲ್ಲಿ ಸುಮಾರು 4.8 ಕೋಟಿ ಹಣ ಪತ್ತೆಯಾಗಿತ್ತು. ಈ ಸಂಬಂಧ ಡಾ.ಕೆ ಸುಧಾಕರ್ ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ನೋಡಲ್ ಅಧಿಕಾರಿ ಮೌನೀಶ್ ಮುದ್ಗಿಲ್ ಅವರಿಗೆ ಸಂದೇಶ ಕಳುಹಿಸಿ, ಕರೆ ಕೂಡ ಮಾಡಿದ್ದಾರೆ ಎನ್ನಲಾಗಿದ್ದು, ಇದರ ಸಾಕ್ಷಿ ಸಮೇತ ಎಫ್ಐಆರ್ ನಲ್ಲಿ ನೀಡಿ, ದೂರು ದಾಖಲಾಗಿದೆ ಎನ್ನಲಾಗಿದೆ. ನೋಡಲ್ ಅಧಿಕಾರಿ ಮೌನೀಶ್ ಮುದ್ಗಿಲ್ ಅವರಿಗೆ ವಾಟ್ಸಾಪ್ ಕರೆ ಮಾಡಿ, ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.
ಏಪ್ರಿಲ್25 ರಂದು ಸುಧಾಕರ್ ಅವರ ಆಪ್ತ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯನಾಗಿರುವ ಗೋವಿಂದಪ್ಪ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡನ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಿಕ್ಕಿದೆ. ಈ ಸಂಬಂಧ ಕೆ ಸುಧಾಕರ್ ಅವರು ವಾಟ್ಸಾಪ್ ಸಂದೇಶ ಹಾಗೂ ಕರೆ ಮಾಡಿದ್ದಾರೆ. ಮೊದಲ ಸಂದೇಶದಲ್ಲಿ ‘ಮಾದವಾರ ಗೋವಿಂದಪ್ಪ ಐಟಿ ಟೀಂ’ ಎನ್ನಲಾಗಿದೆ. 2ನೇ ಸಂದೇಶದಲ್ಲಿ ನಾನು ನಿಮಗೆ ತುಂಬಾ ಆಭಾರಿಯಾಗಿರುತ್ತೇನೆ I will be great full to you regards (folded hands logo) ಹಾಗೂ 3ನೇ ಸಂದೇಶ: ಆನಂದ್ ರತ್ಕಲ್ (ಹೆಸರು ಜೊತೆ ಫೋನ್ ನಂಬರ್) ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಕೆ ಸುಧಾಕರ್ ಅವರಿಗೆ ಸಂಕಷ್ಟ ಎದುರಾಗಿದೆ.