Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೂಡಾ ನಿವೇಶನಗಳನ್ನು ಹಿಂತಿರುಗಿಸಲು ನಿರ್ಧರಿಸಿದ ಮಲ್ಲಿಕಾರ್ಜುನ ಖರ್ಗೆ ಟ್ರಸ್ಟ್..!

03:08 PM Oct 13, 2024 IST | suddionenews
Advertisement

ಬೆಂಗಳೂರು: ಈಗಾಗಲೇ ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿಲುಕಿದ್ದಾರೆ. ಸಿಎಂ ಸ್ಥಾನಕ್ಕೆ ಕುತ್ತು ಬಂದಿದೆ. ಸಿಎಂ ಪತ್ನಿ ಪಾರ್ವತಿ ಅವರು ನಿವೇಶನಗಳನ್ನು ವಾಪಾಸ್ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟ್ರಸ್ಟ್ ನಿಂದ ಕೂಡ ಈಗ ವಾಪಸ್ ಮಾಡಲಾಗುತ್ತಿದೆ.

Advertisement

ಸಿದ್ದಾರ್ಥ್ ವಿಹಾರ್ ಟ್ರಸ್ಟ್. ಇದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರ ಟ್ರಸ್ಟ್ ಆಗಿದೆ. ಈ ಟ್ರಸ್ಟ್ ನಲ್ಲಿ ಅವರ ಕುಟುಂಬ ಸದಸ್ಯರೇ ಇದ್ದಾರೆ. ಈ ಟ್ರಸ್ಟ್ ಮೂಲಕ ಐದು ಎಕರೆ ವಿಸ್ತೀರ್ಣದ ಸಿಎ ನಿವೇಶನಗಳನ್ನು ಕೊಂಡುಕೊಳ್ಳಲಾಗಿತ್ತು. ಇದೀಗ ಆ ನಿವೇಶನಗಳನ್ನು ವಾಪಾಸ್ ನೀಡಲು ಟ್ರಸ್ಟ್ ಮುಂದಾಗಿದೆ‌. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ. ಕೆಐಎಡಿಬಿ ವತಿಯಿಂದ ಸಿದ್ದಾರ್ಥ್ ವಿಹಾರ್ ಟ್ರಸ್ಟ್ ಗೆ ನಿವೇಶನಗಳನ್ನು ನೀಡಲಾಗಿತ್ತು.

ಈ ನಿವೇಶನ ವೇಳೆ ಚಾರ ಕೂಡ ಈಗಾಗಲೇ ವಿವಾದಕ್ಕೆ ಸಿಲುಕಿತ್ತು. ರಾಜ್ಯಪಾಲರ ಅಂಗಳಕ್ಕೂ ತಲುಪಿತ್ತು. ಇದೀಗ ಮುಂಜಾಗ್ರತೆಯಿಂದ ಆ ಸೈಟ್ ಗಳನ್ನು ವಾಪಾಸ್ ನೀಡಲು ತೀರ್ಮಾನಿಸಲಾಗಿದೆ. ಆ ನಿವೇಶನಗಳನ್ನು ವಾಪಾಸ್ ನೀಡಲು ನಿರ್ಧರಿಸಿದ್ದೇವೆ‌. ನಮ್ಮ ಟ್ರಸ್ಟ್ ಗೆ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆಯಾಗಿದೆ ಎಂಬ ಆರೋಪವಿತ್ತು. ಈ ಬಗ್ಗೆ ಟ್ರಸ್ಟ್ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ಇರಲಿಲ್ಲ. ನಮ್ಮ ಕುಟುಂಬದಲ್ಲಿ ಮೂರು ಜನರಷ್ಟೇ ರಾಜಕಾರಣದಲ್ಲಿ ಇದ್ದೀವಿ. ನನ್ನ ಸಹೋದರ ಮೃದು ಸ್ವಭಾವದವರು. ಈ ವಿವಾದದಿಂದ ಕುಟುಂಬಸ್ಥರಿಗೆ ನೋವಾಗಿದೆ. ಹೀಗಾಗಿ ಸೈಟ್ ಗಳನ್ನು ವಾಪಾಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

Advertisement

Advertisement
Tags :
bengaluruchitradurgaMallikarjuna khargeMuda plotssuddionesuddione newsಚಿತ್ರದುರ್ಗಬೆಂಗಳೂರುಮಲ್ಲಿಕಾರ್ಜುನ ಖರ್ಗೆಮೂಡಾ ನಿವೇಶನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article