For the best experience, open
https://m.suddione.com
on your mobile browser.
Advertisement

ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್ : ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ..!

03:12 PM Nov 25, 2024 IST | suddionenews
ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್   ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ
Advertisement

Advertisement

ಮದ್ಯಪಾನ ಪ್ರಿಯರಿಗೆ ಬೆಲೆ ಏರಿಕೆಯದ್ದೇ ಚಿಂತೆಯಾಗಿರುತ್ತದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಇದು ಬೇಸರ ತರಿಸಿದೆ. ಆದರೆ ಈ ಬಾರಿ ಮದ್ಯ ಪ್ರಿಯರಿಗೆ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಅದುವೆ ಚಳಿಗಾಲ ಮುಗಿಯುವ ತನಕ ಮದ್ಯ ಮಾರಾಟದಲ್ಲಿ ಬೆಲೆ ಏರಿಕೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದೆ.

Advertisement

ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಯರ್ ಕುಡಿಯುವುದು ಕಡಿಮೆ. ಹೀಗಾಗಿ ಮಾರಾಟದಲ್ಲೂ ಹಿಂದೆ ಬೀಳುತ್ತದೆ. ಮಾರಾಟವಾಗುವ ಕಡಿಮೆ ಬಿಯರ್ ಗೆ ಹೆಚ್ಚಿನ ದರ ಫಿಕ್ಸ್ ಮಾಡುತ್ತಾರೆ. ಆದರೆ ಈ ಬಾರಿ ಮದ್ಯ ಮಾರಾಟದಲ್ಲಿ ಬೆಲೆ ಏರಿಕೆ ಮಾಡುತ್ತಿಲ್ಲ. ಅಬಕಾರಿ ಇಲಾಖೆಗೆ ಸರ್ಕಾರ 36 ಸಾವಿರ ಕೋಟಿ ಟಾರ್ಗೆಟ್ ನೀಡಿದೆ. ಇದೇ ಕಾರಣಕ್ಕೆ ಬಿಯರ್ ದರ ಹೆಚ್ಚಳ ಮಾಡಲು ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.

ಈ ಬಾರಿ ಚಳಿಗಾಲ ಜಾಸ್ತಿ ಇರಲಿದೆ. ಮಳೆ ಜಾಸ್ತಿಯಾಗಿರುವ ಕಾರಣ ಚಳಿಯೂ ಜಾಸ್ತಿಯಾಗಲಿದೆ. ಇದರಿಂದ ಆದಾಯಕ್ಕೆ ಹೊಡೆತ ಬೀಳಲಿದೆ. ಚಳಿಗಾಲ ಈಗಾಗಲೇ ಶುರುವಾಗಿದೆ. ಈ ಬೆನ್ನಲ್ಲೇ ಅಬಕಾರಿ ಇಲಾಖೆಗೆ ಟೆನ್ಶನ್ ಶುರು ಆಗಿದೆ. ಚಳಿಗಾಲದಲ್ಲಿ ಹೆಚ್ಚು ಜನ ಬಿಯರ್ ಕುಡಿಯದ ಕಾರಣ 10-20 ರಷ್ಟು ಮಾರಾಟ ಕುಸಿತವಾಗಲಿದೆ. ಅಬಕಾರಿ ಇಲಾಖೆಯ ಪ್ರಸ್ತಾವನೆಗೆ ಸರ್ಕಾರ ಏನಾದರೂ ಓಕೆ ಎಂದು ಬಿಟ್ಟರೆ ಆದಾಯಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿಯೇ ಅಬಕಾರಿ ಇಲಾಖೆ ಸಲ್ಲಿಸಿದ ಪ್ರಸ್ತಾವಕ್ಕೆ ಸರ್ಕಾರ ಅಸ್ತು ಎನ್ನದೆ, ಬೆಲೆ ಹಾಗೆಯೇ ಉಳಿಸಿದೆ.

Tags :
Advertisement