ಉಸ್ತುವಾರಿಯನ್ನ ಸರಿಯಾಗ ಮಾಡದ ಚೈತ್ರಾಗೆ ಕಿಚ್ಚ ಕ್ಲಾಸ್ : ಮತ್ತೆ ಕಣ್ಣೀರು.. ಅದೇ ಆರೋಪ..!
ಬಿಗ್ ಬಾಸ್ ಸೀಸನ್ 11ರಲ್ಲಿ ಚೈತ್ರಾ, ಬರೀ ಕಣ್ಣೀರು ಸುರಿಸೋದು, ಜೋರು ಧ್ವನಿಯಲ್ಲಿ ಎಲ್ಲರಿಗೂ ಕಿರಿಕಿರಿ ಮಾಡೋದೆ ಬಂತು. ಹಾಗೇ ಮೂರು ಸಲ ಜೈಲು ವಾಸ ಸೇರಿ ಹೆಚ್ಚು ಸಲ ಜೈಲು ಸೇರಿದವರೆಂಬ ಹಿಸ್ಟರಿಯನ್ನು ಬರೆದಾಯ್ತು. ಇದೀಗ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲಿ ಚೈತ್ರಾಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಚೈತ್ರಾಗೆ ಈ ಬಾರಿಯೂ ಉಸ್ತುವಾರಿಯನ್ನು ನೀಡಲಾಗಿತ್ತು. ಆದರೆ ಉಸ್ತುವಾರಿಯಲ್ಲಿ ಪಕ್ಷಪಾತವನ್ನೇ ಹೆಚ್ಚು ಮಾಡಿದರು. ಇದಕ್ಕೆ ರಜತ್ ಸೇರಿದಂತೆ ಎದುರಾಳಿಗಳು ತಿರುಗಿ ಬಿದ್ದಿದ್ದರು. ಇದೀಗ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಇದೇ ವಿಚಾರ ಬಂದಿದೆ. ಕಿಚ್ಚನ ಕ್ಲಾಸ್ ಗೆ ಚೈತ್ರಾ ಕಣ್ಣೀರು ಹಾಕಿದ್ದಾರೆ.
ಇವತ್ತು ಕಿಚ್ಚ ಸುದೀಪ್ ಕೂಡ ನಾಮಿನೇಷನ್ ಮಾಡುವುದಕ್ಕೆ ಒಂದು ಅವಕಾಶ ಕೊಟ್ಟರು. ಈ ವೇಳೆ ಮತ್ತೆ ಚೈತ್ರಾ ಹೆಸರನ್ನೇ ಮನೆ ಮಂದಿ ತೆಗೆದುಕೊಂಡರು. ಆಗ ಚೈತ್ರಾ, ಯಾವಾಗಲೂ ಉಸ್ತುವಾರಿ ಕೊಡ್ತಾರೆ. ಕಳಪೆ ಕೊಡುವಾಗ ಉಸ್ತುವಾರಿ ಸರಿಯಾಗಿ ಮಾಡಲಿಲ್ಲ ಎಂಬ ಕಾರಣವನ್ನ ನೀಡ್ತಾರೆ. ಬರೀ ಕುಗ್ಗಿಸೋ ಕೆಲಸವನ್ನೇ ಮಾಡ್ತಾರೆ ಎಂದು ಕಣ್ಣೀರು ಹಾಕಿದ್ದಾರೆ. ಆಗ ಕೋಪಗೊಂಡ ಕಿಚ್ಚ, ನೀವ್ ಹೇಳ್ತೀರಲ್ಲ ಕುಗ್ಗಿಸಿದ್ರು ಅಂತ. ನೀವೂ ಹೆಸರು ತೆಗದುಕೊಂಡಾಗ ಅವರು ಕುಗ್ಗಲ್ವಾ..? ಬಾಣ ಬಿಡೋಕೆ ರೆಡಿ ಇರುವವರು ಬಾಣ ಬಿಡಿಸಿಕೊಳ್ಳೋಕೂ ರೆಡಿ ಇರಬೇಕು. ತಗೋಳೋಕೆ ರೆಡಿ ಇಲ್ಲ ಅಂದ್ರೆ ಈ ಆಟಕ್ಕೆ ಫಿಟ್ ಇಲ್ಲ ಎಂದು ಚೈತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತಿ ವಾರ ನಾಮಿನೇಷನ್ ನಿಂದ ಸೇವ್ ಆದಾಗಲೂ ಏನೋ ಒಂದು ಮಾಡ್ತೀನಿ ಅಂತ ಹೇಳಿ ಏನು ಮಾಡದ ಚೈತ್ರಾ ಕಂಡು ನಿಜಕ್ಕೂ ಸುದೀಪ್ ಅವರಿಗೂ ಕೋಪ ತರಿಸಿದೆ.