ಇತಿಹಾಸ ನಿರ್ಮಿಸಿದ ಪುಷ್ಪ 2 : ಫಸ್ಟ್ ಡೇ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ ?
ಸುದ್ದಿಒನ್ | ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದೆ. ನಿರ್ಮಾಪಕರು ಮೊದಲೇ ಹೇಳಿದಂತೆ, ಈ ಚಿತ್ರ ಮೊದಲ ದಿನದಲ್ಲಿ ಕಲೆಕ್ಷನ್ ಸುನಾಮಿ ಸೃಷ್ಟಿಸಿದೆ. ವಿಶ್ವಾದ್ಯಂತ ಭಾರೀ ನಿರೀಕ್ಷೆಗಳ ನಡುವೆ ಡಿಸೆಂಬರ್ 5 ರಂದು ಬಿಡುಗಡೆಯಾದ ಈ ಚಿತ್ರವು ಎಲ್ಲೆಡೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಚಿತ್ರ ಈಗಾಗಲೇ ಮುಂಗಡ ಬುಕ್ಕಿಂಗ್ ನಲ್ಲಿ ದಾಖಲೆ ಬರೆದಿದೆ. ಮತ್ತು ಮೊದಲ ದಿನದ ಇತ್ತೀಚಿನ ಕಲೆಕ್ಷನ್ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಪುಷ್ಪ 2 ತನ್ನ ಮೊದಲ ದಿನವೇ ವಿಶ್ವಾದ್ಯಂತ 294 ಕೋಟಿ ಗಳಿಸಿದೆ. ನಿರ್ಮಾಪಕರು ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಪುಷ್ಪ 2 ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನದ ಅತಿ ಹೆಚ್ಚು ಗಳಿಕೆ ಎಂಬ ದಾಖಲೆಯನ್ನು ಸೃಷ್ಟಿಸಿದೆ. ಈ ಮೂಲಕ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಭಾರತದ ನಂ.1 ಸ್ಟಾರ್ ಎನಿಸಿಕೊಂಡಿದ್ದಾರೆ. ಅಲ್ಲದೇ ಬನ್ನಿ ಹೊಡೆತಕ್ಕೆ ಬಾಲಿವುಡ್ ನ ಟಾಪ್ ರೆಕಾರ್ಡ್ ಗಳು ಕೂಡ ಮಕಾಡೆ ಮಲಗಿವೆ. ಪುಷ್ಪ 2 ಹಿಂದಿಯಲ್ಲಿ 72 ಕೋಟಿ ಗಳಿಸಿದೆ. ಈ ವಾರಾಂತ್ಯದಲ್ಲಿ ಪುಷ್ಪ 2 ಕಲೆಕ್ಷನ್ ಮತ್ತಷ್ಟು ಹೆಚ್ಚಾಗಲಿದೆಯಂತೆ. ಅಲ್ಲದೆ ವಿದೇಶದಲ್ಲೂ ಪುಷ್ಪರಾಜ್ ಮೇನಿಯಾ ಮುಂದುವರೆಯಲಿದೆ.
ನಿರ್ದೇಶಕ ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ನಾಯಕಿಯಾಗಿ ಕನ್ನಡದ ರಷ್ಮಿಕಾ ಮಂದಣ್ಣ ಅವರು ಅಭಿನಯಿಸಿದ್ದಾರೆ. ಅಭಿಮಾನಿಗಳು ಮತ್ತು ಸಿನಿ ತಾರೆಯರು ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೊಗಳುತ್ತಿದ್ದಾರೆ.
ಮೊದಲ ದಿನ, ಪುಷ್ಪ 2 ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಹೊಸ ತಾರೆಯಾಗಿ ಹೊರಹೊಮ್ಮಿತು. ಇದು ರಾಜಮೌಳಿಯ RRR ಅನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಂಡಿತು. ಇದು ಬಾಹುಬಲಿ 2 ಮತ್ತು ಕೆಜಿಎಫ್ 2 ರಂತಹವುಗಳನ್ನು ಸಹ ಹಿಂದಿಕ್ಕಿದೆ. ಇದು ಹಿಂದಿಯಲ್ಲಿ ಬಿಡುಗಡೆಯಾದ ಅತ್ಯಂತ ದೊಡ್ಡ ಚಿತ್ರವಾಗಿದೆ, ಕಳೆದ ವರ್ಷದ ಜವಾನ್ ಅನ್ನು ಹಿಂದಿಕ್ಕಿದೆ.
ಚಲನಚಿತ್ರ ಮೊದಲ ದಿನದ ಸಂಗ್ರಹ
ಪುಷ್ಪಾ 2 ₹ 175 ಕೋಟಿ
RRR ₹ 133 ಕೋಟಿ
ಬಾಹುಬಲಿ 2 ₹ 121 ಕೋಟಿ
ಕೆಜಿಎಫ್ 2 ₹ 116 ಕೋಟಿ ಗಳಿಸಿವೆ. ಇದೀಗ ಪುಷ್ಪಾ 2 ಹಳೆಯ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.