For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಜನವರಿ 20 ರಿಂದ 27ರವರೆಗೆ ಹರಿದಾಸ ಹಬ್ಬ : ಕಾರ್ಯಕ್ರಮಗಳ ಸಂಪೂರ್ಣ ವಿವರ

04:40 PM Jan 05, 2024 IST | suddionenews
ಚಿತ್ರದುರ್ಗದಲ್ಲಿ ಜನವರಿ 20 ರಿಂದ 27ರವರೆಗೆ ಹರಿದಾಸ ಹಬ್ಬ   ಕಾರ್ಯಕ್ರಮಗಳ ಸಂಪೂರ್ಣ ವಿವರ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಜ. 05 :  ಶ್ರೀ ಹರಿವಾಯುಗುರು ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕನಕಪುರಂದರಾದಿ ಹರಿದಾಸರುಗಳ ಸ್ಮರಣೆಯ ಹರಿದಾಸ ಹಬ್ಬ 2024 ಜನವರಿ 20 ರಿಂದ 27ರವರೆಗೆ ನಗರದ ವಾಸವಿ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಟಿ.ಕೆ.ನಾಗರಾಜ ರಾವ್ ತಿಳಿಸಿದ್ದಾರೆ.

Advertisement
Advertisement

ಈ ಹರಿದಾಸ ಹಬ್ಬದಲ್ಲಿ ಪಾರಾಯಣ, ಭಜನೆ, ಉಪನ್ಯಾಸ, ಪವನ-ಹೋಮ ಶ್ರೀರಾಮಡೋಲೋತ್ಸವ ಆರ್ಶೀವಚನ ದಾಸಲಹರಿ ಶ್ರೀ ರಾಮನ ಸ್ತುತಿ, ಸ್ತೂತ್ರ, ಪ್ರವಚನ, ಭವ್ಯ ಶೋಬಾಯಾತ್ರೆ, ಶ್ರೀರಾಮತಾರಕ ಹೋಮ ಕಾರ್ಯಕ್ರಮಗಳು ನಡೆಯಲಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಭೀಮನಕಟ್ಟೆಯ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಗಳು ವಹಿಸಲಿದ್ದಾರೆ.

ಜನವರಿ 20ರ ಸಂಜೆ 6.30ಕ್ಕೆಮ ವಾಸವಿ ಶಾಲಾ ಆವರಣದಲ್ಲಿ ಹರಿದಾಸ ಹಬ್ಬದ ಉದ್ಘಾಟನೆ ನಡೆಯಲಿದ್ದು, ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ವಿದ್ಯಾ ಪೀಠದ ಅಧ್ಯಾಪಕರಾದ ಕೃಷ್ಣರಾಜ ಕುತ್ವಾಡಿ ಉಪನ್ಯಾಸವನ್ನು ನೀಡಲಿದ್ದಾರೆ. ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಪಿ.ಎಸ.ಮಂಜುನಾಥ್, ಶ್ರೀರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕರಾದ ಪ್ರಾಣೇಶಾಚಾರ್ಯ, ಉತ್ತರಾಧಿಮಠದ ವ್ಯವಸ್ಥಾಪಕರಾದ ಉಪಾಧ್ಯ ಪ್ರಭಂಜನಾಚಾರ್ಯ ಕೂಸಸೂರು, ನಗರಸಭೆ ಸದಸ್ಯರಾದ ಹರೀಶ್, ಬಡಗನಾಡು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶೇಷಗಿರಿರಾವ್, ಗುರುರಾಜ ಸೇವಾ ಸಂಘದ ಅಧ್ಯಕ್ಷರಾದ ವೇದವ್ಯಾಸಚಾರ್ಯ, ವೃಷ್ಣವಸಭಾದ ಅಧ್ಯಕ್ಷರಾದ ಜಗದೀಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಪ್ರತಿ ದಿನ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬೆಳಿಗ್ಗೆ 8 ರಿಂದ ಮಹಾಭಾರತ ತಾತ್ಪರ್ಯ ನಿರ್ಣಯಗಳ ಬಗ್ಗೆ ಪಾಠ-ಪ್ರವಚನ 9 ರಿಂದ ಶ್ರೀಗಳು ಗೃಹ ಭೇಟಿ ಪಾದ ಪೂಜಾ ಕಾರ್ಯಕ್ರಮ, 10.30ರಿಂದ ಸಂಸ್ಥಾನ ಪೂಜೆ ನಡೆಯಲಿದೆ. ಇದರೊಂದಿಗೆ ಪ್ರತಿ ದಿನ ಸಂಜೆ ವಾಸವಿ ಶಾಲೆಯ ಆವರಣದಲ್ಲಿ ಸಂಜೆ 6 ರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ, 6.30ರಿಂದ ಶ್ರೀ ರಾಮನಾಮ ಭಜನೆ ಸಂಕೀರ್ತನೆ 7 ರಿಂದ ಅಯೋಧ ರಾಮನ ಬಗ್ಗೆ ಉಪನ್ಯಾಸ ನಡೆಯಲಿದ್ದು, 8 ರಿಂದ ಶ್ರೀಪಾದಂಗಳವರ ಅನುಗ್ರಹ ಅಮೃತವಾಣಿ ನಡೆಯಲಿದೆ.

ಜನವರಿ 21ರಂದು ಶ್ರೀ ಪರಂದರದಾಸರ ಕೃತಿಗಳ ಬಗ್ಗೆ ಶ್ರೀ ಬ್ರಹ್ಮ ಚೈತನ್ಯ ಭಜನಾ ಮಂಡಳಿಯವರಿಂದ, ಜನವರಿ 22ರಿಂದು ಶ್ರೀ ಕನಕದಾಸರ ಕೃತಿಗಳ ಬಗ್ಗೆ ಶ್ರೀವಾರಿ ಭಜನಾ ಮಂಡಳಿಯವರಿಂದ, ಜ. 23 ರಂದು ಶ್ರೀ ವಿಜಯ ದಾಸರ ಕೃತಿಗಳ ಬಗ್ಗೆ, ಶ್ರೀ ಸರಸ್ವತಿ ಭಜನಾ ಮಂಡಳಿಯವರಿಂದ, ಜ. 24 ರಂದು ಶ್ರೀ ಗೋಪಾಲದಾಸರ ಕೃತಿಗಳ ಬಗ್ಗೆ ಶ್ರೀ ಸಪ್ತಗಿರಿ ಭಜನಾ ಮಂಡಳಿಯವರಿಂದ ಜ. 25 ರಂದು ಶ್ರೀ ಜಗನ್ನಾಥ ದಾಸರ ಕೃತಿಗಳ ಬಗ್ಗೆ ಶ್ರೀ ಪಾಂಡುರಂಗ ಭಜನಾ ಮಂಡಳಿಯವರಿಂದ ಶ್ರೀ ರಾಮ ಸಂಕೀರ್ತನೆ ನಡೆಯಲಿದೆ.

ಜ. 26 ರಂದು ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ರಾಮ ತಾರಕ ಹೋಮ ನಡೆಯಲಿದೆ. ಬೆಳಿಗ್ಗೆ 5.30ಕ್ಕೆ ಪುಣ್ಯಾಹ, ಕಳಶ ಸ್ಥಾಪನೆ, ಹೋಮ 9.15ಕ್ಕೆ ಪೂರ್ಣಾಹುತಿ ಕಾರ್ಯಕ್ರಮವೂ ಕೆ.ನರಹರಿ ಆಚಾರ್ಯ ಹಾಗೂ ರಾಘವಾಚಾರ್ಯ ಮಿಟ್ಟಿಯವರಿಂದ ನಡೆಯಲಿದ್ದು 9.30ಕ್ಕೆ ಚಳ್ಳಕೆರೆ, ಹಿರಿಯೂರು, ಹೂಸದುರ್ಗ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 5.30ರಿಂದ ಅಯೋಧ್ಯಾರಾಮನ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಪುಷ್ಪಾಲಂಕೃತ ರಜತ ರಥದಲ್ಲಿ ಶ್ರೀ ರಾಮಚಂದ್ರದೇವರ ವಿಗ್ರಹದೊಂದಿಗೆ ದಾಸವರೇಣ್ಯರ ಭಾವಚಿತ್ರ ಹಾಗೂ ಶ್ರೀಪಾದಂಗಳವರು ಭಾಗವಹಿಸಲಿದ್ದಾರೆ. ಯಾತೆಯೂ ಆನೆ ಬಾಗಿಲ ಬಳಿಯ ಶ್ರೀ ಸುವೃಷ್ಟಿ ಪ್ರಾಣದೇವರ ಸನ್ನಿಧಾನದಿಂದ ಪ್ರಾರಂಭವಾಗಿ ವಾಸವಿ ವಿದ್ಯಾ ಸಂಸ್ಥೆಯನ್ನು ತಲುಪಲಿದೆ. ಶೋಭಾಯಾತ್ರೆಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ಹಾಗೂ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಪಿ.ಎಸ್.ಮಂಜುನಾಥ್ ಉದ್ಘಾಟಿಸಲಿದ್ದಾರೆ. ಸಂಜೆ 6.30ರಿಂದ ಸಾಧನಾ ಸನ್ಮಾನ ಪ್ರವಚನ ಮಂಗಳ ಮಹೋತ್ಸವ ಸಂಜೆ 7 ಕ್ಕೆ ಶ್ರೀರಾಮ ಡೊಲೋತ್ಸವ ನಡೆಯಲಿದೆ.

ಜನವರಿ 27 ರ ಶನಿವಾರ ಬೆಳ್ಳಿಗೆ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ವಾಯುಸ್ತುತಿ ಪುನಃಶ್ಚರಣ ಹೋಮ, ಬೆಳಿಗ್ಗೆ 5.30ಕ್ಕೆ ಪುಣ್ಯಾಹ, ಕಳಶ ಸ್ಥಾಪನೆ, ಹೋಮ 9.15ಕ್ಕೆ ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಕ್ಕೆ ವಾಸವಿವಿದ್ಯಾಸಂಸ್ಥೆಯ ಆವರಣದಲ್ಲಿ ಶ್ರೀರಾಮ ಸಂಕೀರ್ತನ ಶ್ರೀ ಬೃಂದಾವನ ಭಜನಾ ಮಂಡಲಿಯವರಿಂದ ಸಂಜೆ 6.30ಕ್ಕೆ 2024ರ ಹರಿದಾಸ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ನ್ಯಾಯಾವಾದಿಗಳು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಆಶೋಕ ಹಾರನಹಳ್ಳಿ ಆಗಮಿಸಲಿದ್ದಾರೆ. ಸಂಜೆ 7.30ರಿಂದ ಮನೋಜವಂ ಆತ್ರೇಯ ಮತ್ತು ಸಂಗಡಿಗರಿಂದ ದಾಸ ಲಹರಿ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಂಜೆ 5.45ಕ್ಕೆ ವಿದ್ಯಾನಗರ, ಹಾಗೂ ಜೆಸಿಆರ್ ವೃತ್ತದಿಂದ ವಾಸವಿ ವಿದ್ಯಾ ಸಂಸ್ಥೆಯವರೆಗೂ ವಾಹನವನ್ನು ಬಿಡಲಾಗುವುದು ಕಾರ್ಯಕ್ರಮ ಮುಗಿದ ನಂತರ ವಾಪಾಸ್ಸು ಮರಳಿ ಬಿಡಲಾಗುವುದು.

Advertisement
Tags :
Advertisement