Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೊಬ್ಬರಿ ಬೆಳೆಗಾರರಿಗೆ ಖುಷಿ ಸುದ್ದಿ : ಬೆಲೆಯಲ್ಲಿ ಹೆಚ್ಚಳ..!

05:43 PM Dec 21, 2024 IST | suddionenews
Advertisement

ನವದೆಹಲಿ: ತೆಂಗು ಬೆಳೆಗಾರರಿಗೆ ಇದೀಗ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ಕೊಬ್ಬರಿಯ ಕನಿಷ್ಠ ಬೆಲೆಯನ್ನು ಹೆಚ್ಚಿಸಲು ಶುಕ್ತವಾರ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಸಭೆಯ ಬಳಿಕ ಈ ಸಂಬಂಧ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

Advertisement

ಉಂಡೆ ಕೊಬ್ಬರಿ ಪ್ರತಿ ಕ್ವಿಂಟಾಲ್ ಗೆ 100 ರೂಪಾಯಿ ಹಾಗೂ ಹೋಳಾದ ಕೊಬ್ಬರಿಗೆ 422 ರೂಪಾಯಿ ಹೆಚ್ಚಿಸಲಾಗಿದೆ. ಕ್ವಿಂಟಲ್ ಉಂಡೆ ಕೊಬ್ಬರಿಗೆ 12,100 ರೂಪಾಯಿ ಹಾಗೂ ಹೋಳಾದ ಕೊಬ್ಬರಿಗೆ 11,582 ರೂಪಾಯಿ ಬೆಂಬಲ ಬೆಲೆಯನ್ನು ನಿಗದಿ ಪಡಿಸಲಾಗಿದೆ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸು ಅನ್ವಯ ಈ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿ 855 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ. ಉತ್ಪಾದನಾ ವೆಚ್ಚಕ್ಕಿಂತಲೂ ಶೇಕಡ 50 ರಷ್ಟು ಹೆಚ್ಚು ಎಂಎಸ್ಪಿ ನಿಗದಿಪಡಿಸಲಾಗಿದೆ. ಇಡೀ ದೇಶದ ಕೊಬ್ಬರಿ ಉತ್ಪಾದನೆ ಪೈಕಿ ಕರ್ನಾಟಕ ಪಾಲು ಶೇಕಡ 32.7ರಷ್ಟಿದೆ. ತಮಿಳುನಾಡು ಶೇಕಡ 25.7, ಕೇರಳ 25.4, ಆಂಧ್ರಪ್ರದೇಶ ಶೇಕಡ 7.7ರಷ್ಟು ಪಾಲು ಇದೆ.

2014ರಲ್ಲಿ ಮಿಲ್ಲಿಂಗ್ (ಹೋಳು) ಕೊಬ್ಬರಿ ಹಾಗೂ ಇಡಿ ಕೊಬ್ಬರಿ ಎಂಎಸ್ಪಿ ಕ್ವಿಂಟಾಲ್ ಗೆ ಕ್ರಮವಾಗಿ 5,250 ರೂಪಾಯಿ ಹಾಗೂ 5,500 ರೂಪಾಯಿ ಇತ್ತು. ಆದರೆ ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೆ 2025ನೇ ಅವಧಿಗೆ ಇದು ಶೇಕಡ 121 ಹಾಗೂ ಶೇಕಡ 120ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಿಬ್ಬರಿ ಬೆಲೆಯಲ್ಲಿ ಇಷ್ಟು ಏರಿಕೆಯಾಗಿದ್ದು ತೆಂಗು ಬೆಳೆಗಾರರಲ್ಲಿ ಸಂತಸ ತರಿಸಿದೆ. ಕೊಬ್ಬರಿಗೆ ಬೆಂಬಲ ಬೆಲೆ ಸಿಕ್ಕರೆ ರೈತರ ಕಷ್ಟಗಳು ಕಡಿಮೆಯಾಗುತ್ತದೆ.

Advertisement

Advertisement
Tags :
bengaluruchitradurgacoconut farmersgood newsIncrease in pricekannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಕೊಬ್ಬರಿಖುಷಿ ಸುದ್ದಿಚಿತ್ರದುರ್ಗಬೆಂಗಳೂರುಬೆಲೆಯಲ್ಲಿ ಹೆಚ್ಚಳಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article