ಚಿನ್ನದ ಬೆಲೆ ಮತ್ತೆ ಏರಿಕೆ.. ಬೆಳ್ಳಿಯಲ್ಲಿ ಕೊಂಚ ಇಳಿಕೆ..!
ಕಳೆದ ಒಂದು ವಾರದಿಂಸ ಚಿನ್ನದ ಬೆಲೆ ಏರುತ್ತಲೆ ಇದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು 7,300 ಗಡಿದಾಟಿದ್ದು, ಇಂದು ಬೆಂಗಳೂರು ನಗರದಲ್ಲಿ 7,285 ರೂಪಾಯಿ ಚಿನ್ನದ ದರವಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ನಿನ್ನೆಯೆಲ್ಲ 4-5 ರೂಪಾಯಿ ಏರಿಕೆ ಕಂಡಿದ್ದ ಚಿನ್ನ ಇಂದು 1 ರೂಪಾಯಿ ಇಳಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಇಂದು ಹತ್ತು ಗ್ರಾಂ ಬೆಳ್ಳಿ ಬೆಲೆ 95.50 ರೂಪಾಯಿ ಇದೆ.
ಬೆಂಗಳೂರಿನಲ್ಲಿ ಹತ್ತು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 72,850 ರೂಪಾಯಿ ಇದೆ. 24 ಕ್ಯಾರಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 79,470 ರೂಪಾಯಿ ಇದೆ. 100 ಗ್ರಾಂ ಬೆಳ್ಳಿಯ ಬೆಲೆ 9,550 ರೂಪಾಗಿ ಆಗಿದೆ. ಉಳಿದಂತೆ ಬೇರೆ ಬೇರೆ ಕಡೆಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣಾ.
ಬೆಂಗಳೂರು ನಗರ ಸೇರಿದಂತೆ ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 72,850 ರೂಪಾಯಿ ಇದೆ. ಉಳಿದಂತೆ ದೆಹಲಿಯಲ್ಲಿ 73,000 ಇದೆ. ಅಹ್ಮದಾಬಾದ್ ನಲ್ಲಿ 72,900 ರೂಪಾಯಿ ಇದೆ. ಜೈಪುರದಲ್ಲಿ 73 ಸಾವಿರ ಇದೆ. ಲಕ್ನೋದಲ್ಲಿಯೂ 73 ಸಾವಿರ ಇದೆ. ಬೆಳ್ಳಿ ಬೆಲೆಯಲ್ಲಿಯೂ ಕೊಂಚ ವ್ಯತ್ಯಾಸವಿದೆ. ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರದಲ್ಲಿ 9,550 ರೂಪಾಯಿ ಇದ್ರೆ ಚೆನ್ನೈ, ಭುವನೇಶ್ವರದಲ್ಲಿ ಮಾತ್ರ ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಾಗಿದೆ. 350 ರೂಪಾಯಿ ಹೆಚ್ಚಿದ್ದು 10,300 ರೂಪಾಯಿ ಇದೆ.