ಮುರುಡೇಶ್ವರದಲ್ಲಿ ವಿದ್ಯಾರ್ಥಿಗಳು ಸಾವು : ಉಳಿದವರನ್ನು ಸುರಕ್ಷಿತವಾಗಿ ಕೋಲಾರಕ್ಕೆ ಕಳುಹಿಸಿದ ಪೊಲೀಸರು..!
ಕಾರಾವಾರ: ಕೋಲಾರ ಜಿಲ್ಲೆಯ ಮುಳುಬಾಗಿಲು ಮೊರಾರ್ಜಿ ವಸತಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಶಾಲಾ ಶಿಕ್ಷಕರು ಪ್ರವಾಸಕ್ಕೆಂದು ಬಂದಿದ್ದರು. ಮುರುಡೇಶ್ಚರ ತಲುಪಿದ ಕೂಡಲೇ ಆ ಸಮುದ್ರದ ಅಲೆ ಕಂಡು ಮಕ್ಕಳು ಖುಷಿಯಾಗಿದ್ದಾರೆ. ಆದರೆ ಆ ಖುಷಿಯೇ ಮಕ್ಕಳನ್ನು ಬಲಿ ಪಡೆದಿದೆ. ಸಮುದ್ರದ ಅಲೆಗೆ ಸಿಲುಕು ನಾಲ್ಕು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ನಿನ್ನೆ ಈ ಘಟನೆ ನಡೆದಿದ್ದು, ಇಂದು ಶವಗಳು ಸಿಕ್ಕಿವೆ.
ಕೊತ್ತೂರಿನ ಮೊರಾರ್ಜಿ ಶಾಲೆಯಿಂದ ಪ್ರವಾಸ ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 57 ಮಂದಿ ಪ್ತವಾಸಕ್ಕೆಂದು ಬಂದಿದ್ದರು. ಮುರುಡೇಶ್ವರ ಬೀಚ್ ನಲ್ಲಿ ಆಟವಾಡುವಾಗ ಏಳು ಮಂದಿ ನಾಪತ್ತೆಯಾಗಿದ್ದರು. ಆದರೆ ನಿನ್ನೆಯೇ ಮೂರು ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಇಂದು ಮೂವರ ಶವ ಪತ್ತೆಯಾಗಿದೆ. 15 ವರ್ಷದ ದೀಕ್ಷಾ, ಲಾವಣ್ಯ, ವಙದನಾ, ಶ್ರಾವಂತಿ ಶವವಾಗಿ ಸಿಕ್ಕಿದ್ದಾರೆ. ಪೋಸ್ಟ್ ಮಾಟಂಗೆ ಮೃತದೇಹಗಳನ್ನು ಕಳುಹಿಸಲಾಗಿದ್ದು, ಬಳಿಕ ಪೋಷಕರಿಗೆ ಹಸ್ತಾಂತರ ಮಾಡಲಾಗುತ್ತದೆ.
ಘಟನೆಯ ಬಳಿಕ ಮುರುಡೇಶ್ವರ ಬೀಚ್ ನಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಉಳಿದ ಶಿಕ್ಷಕರು, ವಿದ್ಯಾರ್ಥಿಗಳ ಸುರಕ್ಷತೆಯ ಕಡೆಗೆ ಗಮನ ಹರಿಸಿದ ಪೊಲೀಸರು, ಇಂದು ಅವರನ್ನೆಲ್ಲ ಸುರಕ್ಷಿತವಾಗಿ ಕೋಕಾರಕ್ಕೆ ಕಳುಹಿಸಿದ್ದಾರೆ. ವಿದ್ಯಾರ್ಥಿಗಳ ಸಾವಿಗೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಘೋಷಣೆ ಮಾಡಲಾಗಿದೆ. ಮಕ್ಕಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋದಾಗ ಅಥವಾ ಮಕ್ಕಳೆ ಈ ರೀತಿ ಬೀಚ್ ಕಡೆಗೆಲ್ಲ ಹೋದಾಗ ಸುರಕ್ಷಿತವಾಗಿರಬೇಕಾಗುತ್ತದೆ. ವಿದ್ಯಾರ್ಥಿನಿಯರ ಸಾವು ಉಳಿದ ವಿದ್ಯಾರ್ಥಿನಿಯರಿಗೂ ದುಃಖವನ್ನುಂಟು ಮಾಡಿದೆ. ಖುಷಿಯಾಗಿರಲು ಹೋದವರು ಮಸಣ ಸೇರಿದ್ದು ದುರಂತವೆ ಸರಿ.