For the best experience, open
https://m.suddione.com
on your mobile browser.
Advertisement

ಇಂದು ಕೂಡ ಏರಿಕೆಯಾಯ್ತು ಚಿನ್ನದ ಬೆಲೆ : ಎಷ್ಡಿದೆ ಇಂದಿನ ದರ..?

01:06 PM Dec 04, 2024 IST | suddionenews
ಇಂದು ಕೂಡ ಏರಿಕೆಯಾಯ್ತು ಚಿನ್ನದ ಬೆಲೆ   ಎಷ್ಡಿದೆ ಇಂದಿನ ದರ
Advertisement

Advertisement

ಬೆಂಗಳೂರು: ಇಂದು ಕೂಡ ಚಿನ್ನದ ದರ ಏರಿಕೆಯತ್ತಲೇ ಮುಖ ಮಾಡಿದೆ. ಒಂದು ರೂಪಾಯಿಯಷ್ಟು ದರ ಏರಿಕೆಯಾಗಿದೆ. ನಿನ್ನೆಯಷ್ಟೇ 40 ರೂಪಾಯಿ ದರ ಹೆಚ್ಚಳವಾಗಿತ್ತು. ಆದರೆ ಇಂದು ಬೆಳ್ಳಿಯ ಬೆಲೆ ಕುಸಿತವಾಗಿದೆ. 10 ಪೈಸೆಯಷ್ಟು ಬೆಳ್ಳಿ ಬೆಲೆಯಲ್ಲಿ ಕಡಿಮೆಯಾಗಿದೆ. ಈ ಮೂಲಕ ಹತ್ತು ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ಇಂದಿಗೆ 71,310 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 77,790 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,090 ರೂಪಾಯಿ ಇದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನ - ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ:

Advertisement

ಬೆಂಗಳೂರಿನಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 71,310 ರುಇಪಾಯಿ ಇದೆ. ಇನ್ನು ಬೆಳ್ಳಿ ಬೆಲೆ 10 ಗ್ರಾಂಗೆ 90.90 ರೂಪಾಯಿ ಇದೆ. ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರದಲ್ಲಿ ಒಂದೇ ರೀತಿಯ ಬೆಲೆ ಇದೆ. ಆದರೆ ದೆಹಲಿ, ಅಹ್ಮದಾಬಾದ್, ಜೈಪುರ, ಲಕ್ನೋದಲ್ಲಿ ಬೆಲೆಯಲ್ಲಿ ಏರಿಳಿತ ಕಾಣಿಸುತ್ತಿದೆ.

ಇನ್ನು ಬೆಳ್ಳಿ ಬೆಲೆಯಲ್ಲೂ ವಿವಿಧ ನಗರದಲ್ಲಿ ವಿವಿಧ ರೀತಿಯ ಬೆಲೆ ಇದೆ. ಬೆಂಗಳೂರಿ, ಮುಂಬೂ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋದಲ್ಲಿ 10 ಗ್ರಾಂಗೆ 9,090 ರೂಪಾಯಿ ಇದ್ದರೆ. ಉಳಿದ ಬೇರೆ ನಗರ ಅಂದ್ರೆ ಚೆನ್ನೈ, ಕೇರಳ, ಭುವನೇಶ್ವರದಲ್ಲಿ 9,940 ರೂಪಾಯಿ‌ ಇದೆ. ವಿದೇಶಗಳಲ್ಲಿಯೂ ಚಿನ್ನದ ದರ ಹಾವು ಏಣಿ ಆಟವಾಡುತ್ತಿದೆ. ಕುವೈತ್ ಹಾಗೂ ಅಮೆರಿಕಾದಲ್ಲಿ ಚಿನ್ನದ ಬೆಲೆ ಅತಿ ಕಡಿಮೆ ಇದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಒಂದು ಗ್ರಾಂಗೆ 6,600-6,650 ರೂಪಾಯಿಗೆ ಸಿಗುತ್ತಿದೆ.

Tags :
Advertisement