Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಜಾಜಿನಗರದ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಬೆಂಕಿ : ಬರ್ತ್ ಡೇ ಗೂ ಮುನ್ನವೇ ಪ್ರಿಯಾ ಡೆತ್..!

09:42 PM Nov 19, 2024 IST | suddionenews
Advertisement

ಬೆಂಗಳೂರು: ಇವಿ ಬೈಕ್ ಗಳಿಗೆ ನಿಂತಲ್ಲಿಯೇ ಬೆಂಕಿ ಹೊತ್ತಿಕೊಳ್ಳುತ್ತಿದ್ದ ಘಟನೆಯನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈಗ ಶೋರೂಮಿಗೆ ಶೋರೂಮೆ ಹೊತ್ತಿ ಉರಿದಿದೆ. ಇದರಿಂದ ಪ್ರಾಣವೂ ಹೋಗಿದೆ. ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಗ್ರೀನ್ ಸಿಟಿ ಮೋಟಾರ್ಸ್ ಶೋ ರೂಂ ಇದೆ. ಆ ಶೋರೂಮಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ, ಹೊತ್ತಿ ಉರಿದಿದೆ.

Advertisement

ಈ ಇವಿ ಎಲೆಕ್ಟ್ರಿಕ್ ಶೋ ರೂಮಿಗೆ ಬೆಂಕಿ ಬಿದ್ದಾಗ ಸುಮಾರು ಆರು ಜನ ಒಳಗೆ ಸಿಲುಕಿದ್ದರು. ಪ್ರಿಯಾ ಎಂಬಾಕೆ ಬೆಂಕಿ ಜಾಸ್ತಿಯಾಗುತ್ತಿದ್ದಂತೆ ಹೊರಗೆ ಬರದೆ ಅಲ್ಲಿಯೇ ಕ್ಯಾಶ್ ರೂಮಿಗೆ ಹೋಗಿ ಲಾಕ್ ಹಾಕಿಕೊಂಡಿದ್ದಾರೆ. ಪರಿಣಾಮ ಬೆಂಕಿಯ ಹೊಗೆ ದಟ್ಟವಾಗಿ ಹಬ್ಬಿದ್ದು, ಬೆಂಕಿಯೂ ತೀವ್ರವಾಗಿ ಹಬ್ಬಿದ್ದು, ಪ್ರಿಯಾ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಹಲವರು ಹೊಗೆಯಿಂದಾಗಿ ಪ್ರಜ್ಞೆ ತಪ್ಪಿದ್ದಾರೆ, ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಶೋ ರೂಮಿನಲ್ಲಿ ಬೆಂಕಿ ನಂದಿಸುವ ವಸ್ತುಗಳು ಸಹ ಇರಲಿಲ್ಲವೆಂದು ಹೇಳಲಾಗುತ್ತಿದೆ. ಕಳೆದ ಐದು ವರ್ಷದಿಂದ ಈ ಶೋ ರೂಮ್ ರಾಜಾಜಿನಗರದಲ್ಲಿಯೇ ಇತ್ತು ಎನ್ನಲಾಗಿದೆ.

ಇನ್ನು ಮೃತ ಪ್ರಿಯಾ ತಂದೆ ಆರ್ಮುಗಂ ಮಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಾಳೆಯಷ್ಟೇ ಪ್ರಿಯಾ ಅವರ ಹುಟ್ಟುಹಬ್ಬವಿದೆಯಂತೆ. ಅದಕ್ಕಾಗಿ ಮಗಳಿಗೆ ಬಟ್ಟೆಯನ್ನು ಕೊಡಿಸಿದ್ದರಂತೆ‌. ನಾಳೆ ಹುಟ್ಟುಹಬ್ಬವಿತ್ತು. ಈಗ ಮಗಳನ್ನು ಕಳೆದುಕೊಂಡಿದ್ದೇವೆ. ಕಳೆದ ಮೂರು ವರ್ಷದಿಂದ ಇದೇ ಶೋ ರೂಮಿನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳಿಗೆ ಏನಾಯಿತು ಎಂದು ಗೊತ್ತಿಲ್ಲ ಎಂದು ಮೃತ ಪ್ರಿಯಾರ ತಂದೆ ಕಣ್ಣೀರು ಹಾಕಿದ್ದಾರೆ.

Advertisement

Advertisement
Tags :
bengalurucaught firechitradurgaElectric bikekannadaKannadaNewsRajajinagarShowroomsuddionesuddionenewsಎಲೆಕ್ಟ್ರಿಕ್ ಬೈಕ್ಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಬರ್ತ್ ಡೇಬೆಂಗಳೂರುರಾಜಾಜಿನಗರಶೋ ರೂಂಗೆ ಬೆಂಕಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article