ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾರು ಮುಸ್ಲಿಂ ಹೆಸರು ಹೇಳಬೇಡಿ : ಸಿ ಎಂ ಇಬ್ರಾಹಿಂ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಯಾದ ಮೇಲೆ ಸಿ ಎಂ ಇಬ್ರಾಹಿಂ ಇದೀಗ ಕಾಣಿಸಿಕೊಂಡಿದ್ದು, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾರು ಸಹ ಮುಸ್ಲಿಂ ಹೆಸರು ಹೇಳಬೇಡಿ. ನಮ್ಮ ಪಾಡಿಗೆ ನಮಗೆ ಇರುವುದಕ್ಕೆ ಬಿಡಿ ಎಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ ಪತ್ರಿಕಾಗೋಷ್ಠಿ ನಡೆಸಿದ್ದು, ಮಂಗಳಸೂತ್ರ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿದ್ದಾರೆ. ಈ ರೀತಿಯ ಹೇಳಿಕೆ ಸರಿಯಲ್ಲ. ೫೦ ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಹೇಳಿಕೆ ನೋಡಿರಲಿಲ್ಲ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾರು ಸಹ ಮುಸ್ಲಿಂ ಹೆಸರು ಹೇಳಬೇಡಿ. ನಮ್ಮ ಪಾಡಿಗೆ ಇರೋದಕ್ಕೆ ನಮಗೆ ಬಿಡಿ.
ಏನು ಓಲೈಕೆ ಮಾಡಿದ್ದಾರೆ ಅಂತ ಸ್ವಾಮಿ. ಸಾಚಾರ್ ವರದಿ ಪ್ರಕಾರ ಮುಸ್ಲಿಂ ಸಮುದಾಯ ದಲಿತರಿಗಿಂತ ಕನಿಷ್ಟ ಪರಿಸ್ಥಿತಿ ಯಲ್ಲಿ ಇದ್ದಾರೆ. ಮುಸ್ಲಿಂ ರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಮಂಗಳಸೂತ್ರ ತೆಗೆದುಕೊಡ್ತಾರೆ ಅಂದ್ರೆ ಇದು ಸರಿಯಲ್ಲ. ಆರ್ಥಿಕ ವಾಗಿ ಕಷ್ಟದಲ್ಲಿ ಇರೋರಿಗೆ ಮೀಸಲಾತಿ ಕೊಡ್ತಾ ಇರೋದು. ಯಾವುದೇ ಜಾತಿಯಲ್ಲಿ ಬಡವರು ಇದ್ರೆ ಕೊಡಬೇಕು. ಸುಪ್ರೀಂ ಕೋರ್ಟ್ ಸಹ ಇದನ್ನೇ ಹೇಳಿದೆ. ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದು ಜನತಾದಳ ಸರ್ಕಾರ. ಕಾಂಗ್ರೆಸ್ ಮೀಸಲಾತಿ ಕೊಟ್ಟಿಲ್ಲ. ಇನ್ನೊಂದು ಬಾರಿ ಮನವಿ ಮಾಡ್ತೇನೆ. ಕಾಂಗ್ರೆಸ್, ಬಿಜೆಪಿಯವರು ಮುಸ್ಲಿಂ ರನ್ನು ಸ್ಯಾಂಡ್ ವಿಚ್ ಮಾಡಬೇಡಿ. ನಮ್ಮನ್ನು ಬಿಟ್ಟುಬಿಡಿ ಎಂದು ಸಿ ಎಂ ಇಬ್ರಾಹಿಂ ಮನವಿ ಮಾಡಿದ್ದಾರೆ.ವ