Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡಿಸಿಎಂ ಹೆಚ್ಚುವರಿ ಹುದ್ದೆ ವಿಚಾರ : ಬಹಿರಂಗವಾಗಿ ಚರ್ಚೆ ಮಾಡದಂತೆ ಸಿಎಂ ಎಚ್ಚರಿಕೆ..!

02:35 PM Jun 27, 2024 IST | suddionenews
Advertisement

ಬೆಂಗಳೂರು: ಸರ್ಕಾರ ರಚನೆಯಾದಾಗಿನಿಂದ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿಯಾಗಲಿ ಎಂದು ಸಾಕಷ್ಟು ಸಚುವರು, ಶಾಸಕರು ಡಿಮ್ಯಾಂಡ್ ಇಡುತ್ತಲೇ ಇದ್ದಾರೆ. ಆದರೆ ಸಿಎಂ ಸ್ಥಾನ ಬಿಟ್ಟುಕೊಡುವುದಕ್ಕೆ ಡಿಕೆ ಶಿವಕುಮಾರ್ ಅವರು ಡಿಮ್ಯಾಂಡ್ ಇಟ್ಟಿದ್ದರು ಎನ್ನಲಾಗಿದೆ. ಡಿಸಿಎಂ ಸ್ಥಾನ ಒಂದೇ ಇರಬೇಕು ಎಂಬ ಡಿಮ್ಯಾಂಡ್ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಡಿಸಿಎಂ ಸ್ಥಾನ ಹೆಚ್ಚು ಮಾಡಲು ಹೈಕಮಾಂಡ್ ಕೂಡ ಒಪ್ಪುತ್ತಿಲ್ಲ ಎನ್ನಲಾಗಿದೆ. ಇದರ ಮಧ್ಯೆ ರಾಜ್ಯದಲ್ಲಿ ಡಿಸಿಎಂ ಹೆಚ್ಚುವರಿ ಹುದ್ದೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Advertisement

ಸಚಿವ ಕೆ.ಎನ್.ರಾಜಣ್ಣ ಅವರು ಕೂಡ ಹೆಚ್ಚುವರಿ ಹುದ್ದೆ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಅವರಿಗೆ ದೂರವಾಣಿ ಕರೆ ಮೂಲಕವೇ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಈ ರೀತಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದರೆ ಪಕ್ಷಕ್ಕೆ ಹಾಗೂ ಸರ್ಕಾರದ ಮೇಲೆಯೇ ಪರಿಣಾಮ ಬೀರುತ್ತದೆ. ಹೀಗಾಗಿ ಡಿಸಿಎಂ ವಿಚಾರವಾಗಿ ಯಾರೂ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

 

Advertisement

ಇನ್ನು ಇದೇ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಹ ಬೇಸರ ಮಾಡಿಕೊಂಡಿದ್ದಾರೆ. ಯಾರೂ ಏನು ಬೇಕಾದರೂ ಹೇಳಲಿ. ಈ ಬಗ್ಗೆ ನಾನು ಬಹಿರಂಗವಾಗಿ ಚರ್ಚೆ ನಡೆಸಲ್ಲ. ಹೈಕಮಾಂಡ್ ಇದೆ. ಅವರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿದರೆ ಸಂತೋಷ. ಅದು ಕೂಡ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಬೇಸರ ಹೊರಹಾಕಿದ್ದಾರೆ.

ಆಗಾಗ ಸಿಎಂ ಹಾಗೂ ಡಿಸಿಎಂ ಬಣದ ನಡುವೆ ಈ ವಿಚಾರವಾಗಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ಬಿಡುತ್ತಾರೆ. ಈಗಲೂ ಅದೇ ಆಗಿದ್ದು, ಅದಕ್ಕೆ ಸಿಎಂ ಎಚ್ಚರಿಕೆ ನೀಡಿದ್ದಾರೆ.

Advertisement
Tags :
bengaluruchitradurgaCM SiddaramaiahCM warnsDcmDCM additional post issuesuddionesuddione newsಚಿತ್ರದುರ್ಗಡಿಸಿಎಂಬಹಿರಂಗವಾಗಿ ಚರ್ಚೆಬೆಂಗಳೂರುಸಿಎಂ ಎಚ್ಚರಿಕೆಸುದ್ದಿಒನ್ಸುದ್ದಿಒನ್ ನ್ಯೂಸ್ಹುದ್ದೆ ವಿಚಾರ
Advertisement
Next Article