For the best experience, open
https://m.suddione.com
on your mobile browser.
Advertisement

ಕೊಲೆ ಕೇಸಲ್ಲಿ ಜೈಲಲ್ಲಿರುವ ದರ್ಶನ್ : ಮೊದಲ ಬಾರಿಗೆ ಅಣ್ಣನ ಬಗ್ಗೆ ಮಾತಾಡಿದ ದಿನಕರ್ ತೂಗುದೀಪ..!

03:25 PM Oct 06, 2024 IST | suddionenews
ಕೊಲೆ ಕೇಸಲ್ಲಿ ಜೈಲಲ್ಲಿರುವ ದರ್ಶನ್   ಮೊದಲ ಬಾರಿಗೆ ಅಣ್ಣನ ಬಗ್ಗೆ ಮಾತಾಡಿದ ದಿನಕರ್ ತೂಗುದೀಪ
Advertisement

ತುಮಕೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್, ಈಗಾಗಲೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ಕೂಡ ಅರ್ಜಿಯ ವಿಚಾರಣೆ ನಡೆದಿದ್ದು, ಜಾಮೀನು ಸಿಗುವ ಭರವಸೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದರೆ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ ಅವರು ತಮ್ಮ ಅತ್ತಿಗೆಯ ಜೊತೆಗೆ ಪ್ರತಿಸಲ ಜೈಲಿಗೆ ಭೇಟಿ ನೀಡಿದ್ದಾರೆ. ದರ್ಶನ್ ಅವರ ಬಳಿ ಮಾತನಾಡಿ, ಜಾಮೀನು ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಮೊದಲ ಬಾರಿಗೆ ವೇದಿಕೆ ಮೇಲೆ ಅಣ್ಣನ ಬಗ್ಗೆ ಮಾತನಾಡಿದ್ದಾರೆ.

Advertisement

ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ವಿರಾಟ್ ಅಭಿನಯದ ಈ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದೆ. ಹಾಡು ಬಿಡುಗಡೆಯನ್ನು ತುಮಕೂರಿನಲ್ಲಿ, ವಿದ್ಯಾರ್ಥಿಗಳಿಂದ ಮಾಡಿಸಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಅಣ್ಣನ ಬಗ್ಗೆ ಮಾತನಾಡಿದ್ದಾರೆ.

Advertisement

'ಒಷ್ಟು ದಿನ ನಾನು ಎಲ್ಲಿಯೂ ಹೋಗಲಾಗಿರಲಿಲ್ಲ. ಯಾರ ಬಳಿಯೂ ಮಾತನಾಡಲಾಗಿರಲಿಲ್ಲ. ಆದರೆ ಇಂದು ಈ ವೇದಿಕೆ ಬಳಸಿಕೊಂಡು ಮಾತನಾಡುತ್ತಿದ್ದೇನೆ. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಬೆಂಬಲ ನೀಡುತ್ತಿರುವ, ಬೆನ್ನಿಗೆ ನಿಂತ‌ ಎಲ್ಲರಿಗೂ ಧನ್ಯವಾದಗಳು. ನಾವೂ ಹೆಸರು ಮಾಡಿರುವುದಕ್ಕೆ ಡಿ ಬಾಸ್ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಕಾರಣ. ನಿಮ್ಮ ಈ ಪ್ರೀತಿ ದರ್ಶನ್ ಹಾಗೂ ಅವರ ಕುಟುಂಬದ ಮೇಲೆ ಹೀಗೆ ಇರಲಿ. ನಿಮ್ಮ ಪ್ರೀತಿ ಇರುವ ತನಕ ಡಿ ಬಾಸ್ ಗೆ ಯಾರೂ ಏನು ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.

Advertisement

Advertisement
Tags :
Advertisement