ಕುಮಾರಸ್ವಾಮಿಗೆ ಸದ್ಯಕ್ಕಿಲ್ಲ ತನಿಖೆಯ ಟೆನ್ಶನ್ : ವಿಜಯ್ ತಾತಾ ಕಡೆಯಿಂದ ಸಬ್ಮಿಟ್ ಆಗಿಲ್ಲ ದಾಖಲೆ..!
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ 50 ಕೋಟಿ ಬೇಡಿಕೆ ಇಟ್ಟಿದ್ದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜೆಡಿಎಸ್ ನಲ್ಲಿಯೇ ಇರುವ ವಿಜಯ್ ತಾತಾ ಈ ದೂರು ನೀಡಿದ್ದಾರೆ. ಕುಮಾರಸ್ವಾಮಿ ಹಾಗೂ ಎಂಎಲ್ಸಿ ರಮೇಶ್ ಗೌಡ ವಿರುದ್ಧ ದೂರು ನೀಡಲಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಆದರೆ ವಿಜಯ್ ತಾತಾ, ಈ ಕೇಸಿಗೆ ಸಂಬಂಧಿಸಿದಂತ ಯಾವುದೇ ದಾಖಲೆಗಳನ್ನು ನೀಡಿಲ್ಲ. ಪೊಲೀಸರ ಮುಂದೆ ಬಂದು ಹೇಳಿಕೆಯನ್ನಷ್ಟೇ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಾಥಮಿಕ ದಾಖಲೆಗಳನ್ನು ನೀಡಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ತನಿಖೆಗೆ ಬೇಕಾದ ಪ್ರಾಥಮಿಕ ದಾಖಲೆಗಳನ್ನು ಸಲ್ಲಿಸದಿದ್ದರೆ ತನಿಖೆ ನಡೆಸುವುದು ಕಷ್ಟ. ಹೀಗಾಗಿ ಆದಷ್ಟು ಬೇಗ ದಾಖಲೆಗಳನ್ನು ನೀಡುವುದಕ್ಕೆ ವಿಜಯ್ ತಾತಾ ಬಳಿ ಪೊಲೀಸರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ವಿಜಯ್ ತಾತಾ ಯಾವುದೇ ದಾಖಲೆಗಳನ್ನು ಸಲ್ಲಿಸದೇ ಹೋದಲ್ಲಿ ತನಿಖೆ ನಡೆಯುವುದು ಕಷ್ಟ. ಕುಮಾರಸ್ವಾಮಿ ಅವರ ಟೀಕೆಗೂ ವಿಜಯ್ ತಾತಾ ಗುರಿಯಾಗಬೇಕಾಗುತ್ತದೆ.
ಇತ್ತಿಚೆಗಷ್ಟೇ ವಿಜಯ್ ತಾತಾ, ಕುಮಾರಸ್ವಾಮಿ ಮೇಲೆ 50 ಕೋಟಿ ಡಿಮ್ಯಾಂಡ್ ಮಾಡಿದ್ದಾರೆಂದು ಆರೋಪ ಮಾಡಿದ್ದರು. ಅವರ ದೂರಿನ ಅನ್ವಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿಖಿಲ್ ಕುಮಾರಸ್ವಾಮಿ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲಾಗಿತ್ತು. ಪ್ರಚಾರಕ್ಕಾಗಿಯೇ ಕೈಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬುದನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.