'ಗೂಂಡಾ' ಗದ್ದಲ : ಬಿಜೆಪಿ ನಾಯಕರನ್ನು ಮಾತಲ್ಲೇ ಗದರಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬಜೆಟ್ ಅಧಿವೇಶನಕ್ಕೂ ಮುನ್ನ ಕಲಾಪ ನಡೆಯುತ್ತಿದೆ. ಈ ಸದನದಲ್ಲಿ ಹಲವು ವಿಷಯಗಳು ಚರ್ಚೆಗೆ ಬರಲಿವೆ. ಅದರ ಜೊತೆಗೆ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಗದ್ದಲಗಳು ಏಳಲಿವೆ. ಇದೀಗ ಇಂದು ಸಿಎಂ ಸಿದ್ದರಾಮಯ್ಯ ಅವರು ಗೂಂಡಾಗಿರಿ ಪದ ಬಳಸಿದರು ಎಂದು ಬಿಜೆಪಿ ನಾಯಕರು ಗದ್ದಲ ಎಬ್ಬಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸುವಾಗ ಸಿದ್ದರಾಮಯ್ಯ ಅವರು ಗೂಂಡಾಗಿರಿ ಪದ ಬಳಕೆ ಮಾಡಿದ್ದಾರೆಂದು ಆಕ್ಷೇಪಿಸಿ ಗದ್ದಲ ಶುರು ಮಾಡಿದ್ದ ಬಿಜೆಪಿ ನಾಯಕರನ್ನು ಸಿಎಂ ಸಿದ್ದರಾಮಯ್ಯ ಅವರು ಗದರಿಸಿದ್ದಾರೆ.
ಏನು ಗೂಂಡಾಗಿರಿ ಮಾಡುತ್ತೀರಾ. ನಾನು ಯಾವುದಕ್ಕೂ ಹೆದರುವುದಿಲ್ಲ. ಏಳು ಕೋಟಿ ಜನರು ನೋಡುತ್ತಿದ್ದಾರೆ. ಜನ ಇವರಿಗೆ ಛೀ.. ಥೂ ಅಂತಿದ್ದಾರೆ. ನಾನು ಫ್ಯಾಕ್ಟ್ ಹೇಳುತ್ತಿದ್ದೇನೆ. ಫ್ಯಾಕ್ಟ್ ಈಸ್ ಫ್ಯಾಕ್ಟ್. ವಿಪಕ್ಷಗಳ ಈ ನಡೆಯನ್ನು ಸಹಿಸುವುದಿಲ್ಲ. ನಾನು ಉತ್ತರ ಕೊಡಲ್ಲ. ಪ್ರಶ್ನೆ ಕೇಳಿದವರೇ ಸುಮ್ಮನೆ ಇರುವಾಗ ವಿಪಕ್ಷದವರದ್ದೇನು ಮಾತು. ನಿರ್ಮಲಾ ಸೀತರಾಮನ್ ಕೂಡ ವಿರೋಧಿ ಧೋರಣೆ ತೋರಿಸಿದ್ದಾರೆ. ಅವರೇ ಬಜೆಟ್ ಒಪ್ಪಿಕೊಂಡಿದ್ದ 5300 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ. ಆದರೆ ನಾವೂ ಒಂದು ಸಾವಿರ ಕೋಟು ಹಣ ಬಿಡುಗಡೆ ಮಾಡಿದ್ದೇವೆ. ಯೋಜನೆಗಳ ಕಾಳಜಿಯಿಂದ ಒಂದು ಸಾವಿರ ಕೋಟಿ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ಸಾವಿರ ಕೋಟಿ ಹಣ ಮೋಸ ಮಾಡಿದೆ. ಇದಕ್ಕೆ ಹಣಕಾಸು ಸಚಿವರು ಸಾಥ್ ನೀಡಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಮಧ್ಯಪ್ರವೇಶಿಸಿದಿ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಸೌಧದಲ್ಲಿ ತೊಡೆ ತಟ್ಟಿದ್ದು ನೀವಾ.. ನಾವಾ..? ನಮಗೆ ಗೂಂಡಾಗಿರಿ ಅಂತೀರಲ್ಲ, ಆಗ ತೊಡೆ ತಟ್ಟಿದ್ದು ಯಾರು..? ನೀವೂ ಗೂಂಡಾಗಳು, ನಿಮ್ಮ ಗೂಂಡಾಗಿರಿಗೆ ಹೆದರಲ್ಲ ಎಂದು ಹೇಳುವ ಮೂಲಕ ಗೂಂಡಾ ಹೇಳಿಕೆಯನ್ನು ಖಂಡಿಸಿ ಬಿಜೆಪಿ ನಾಯಕರು ಸಭಾ ತ್ಯಾಗ ಮಾಡಿದರು.