ಬೆಂಗಳೂರಿಗೆ ಮತ್ತೆ ಬಾಂಬ್ ಬೆದರಿಕೆ : ಸಿಎಂ, ಡಿಸಿಎಂಗೆ ಇಮೇಲ್
ಬೆಂಗಳೂರು: ಇತ್ತಿಚೆಗಷ್ಟೇ ಬೆಂಗಳೂರಿನ ಜನರನ್ನೇ ಬೆಚ್ಚಿಬೀಳಿಸಿತ್ತು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಇದೀಗ ಮತ್ತೆ ಬಾಂಬ್ ಬ್ಲಾಸ್ಟ್ ಬೆದರಿಕೆಗಳು ಬಂದಿವೆ. ಸಿಎಂ ಕಚೇರಿ, ಡಿಸಿಎಂ ಕಚೇರಿ, ಗೃಹ ಸಚಿವರ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ರಾಜ್ಯ ಸರ್ಕಾರಕ್ಕೆ, ಶಾಹಿದ್ ಖಾನ್ ಹೆಸರಲ್ಲಿ ಇಮೇಲ್ ಮೂಲಕ ಬೆದರಿಕೆ ಬಂದಿದೆ.
ಕಳೆದ ಮಾರ್ಚ್ 4ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಬಾಂಬ್ ಬೆದರಿಕೆ ಸಂಬಂಧ ದೂರು ದಾಖಲಾಗಿದೆ. ಪೊಲೀಸರ ಎಫ್ಐಆರ್ ನಲ್ಲಿ ಈ ವಿಚಾರ ದಾಖಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಬಸ್, ರೈಲು, ದೇವಸ್ಥಾನ, ಹೊಟೇಲ್ ಗಳಿಗೆ ಬಾಂವ್ ಹಾಕುತ್ತೇವೆ ಎಂದು ಪೊಲೀಸ್ ಕಮಿಷನರ್ ಗೂ ಬೆದರಿಕೆ ಇಮೇಲ್ ಬಂದಿದೆ.
ಅಂಬಾರಿ ಬಸ್ ಗಳಿಗೆ ಬಾಂಬ್ ಇಡುತ್ತೀವಿ ಎಂದು ಮೇಲ್ ನಲ್ಲಿ ತಿಳಿಸಲಾಗಿದೆ. ಈಗಾಗಲೇ ರಾಮೇಶ್ವರಂ ಕೆಫೆಗೆ ಬಾಂವ್ ಇಟ್ಟ ವ್ಯಕ್ತಿ, ಪೊಲೀಸರಿಗೆ ತಲೆನೋವಾಗಿದ್ದಾನೆ. ಬಾಂಬ್ ಇಟ್ಟವ ಯಾರು..? ಎಲ್ಲಿ ಹೋದ ಎಂಬ ಸುಳಿವನ್ನು ನೀಡದೆ ನಾಪತ್ತೆಯಾಗಿದ್ದಾನೆ. ಪೊಲೀಸರು ಆತನನ್ನು ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದಾರೆ.