Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿರೂರು ಗುಡ್ಡ ಕುಸಿತದಲ್ಲಿ ಅರ್ಜುನ ನಾಪತ್ತೆ : ಪತ್ತೆ ಮಾಡಲು ಬಂದ ಈಶ್ವರ ಯಾರು..?

02:34 PM Jul 27, 2024 IST | suddionenews
Advertisement

 

Advertisement

ಉತ್ತರ ಕನ್ನಡದ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನೆಲೆ ಲಾರಿ ಡ್ರೈವರ್ ಅರ್ಜುನ ನಾಪತ್ತೆಯಾಗಿದ್ದರು. ಇಂದಿಗೆ 12 ದಿನ ಕಳೆದರು ಇಲ್ಲಿಯವರೆಗೂ ಅರ್ಜುನ ಪತ್ತೆಯಾಗಿಲ್ಲ. ಆರಂಭದಲ್ಲಿ ಬದುಕಿದ್ದರು ಎಂದೇ ಹೇಳಲಾಗಿತ್ತು. ಆದರೆ ಈಗ ಅವರ ಪತ್ತೆಯಾಗುತ್ತಿಲ್ಲ. ಹೀಗಾಗಿ ಈಶ್ವರನ ಮೊರೆ ಹೋಗಿದ್ದಾರೆ. ಅರ್ಜುನ ಓಡಿಸುತ್ತಿದ್ದ ಲಾರಿಯೇ 20 ಅಡಿ ಆಳದಲ್ಲಿ ಪತ್ತೆಯಾಗಿದೆ. ಹೀಗಾಗಿ ಅರ್ಜುನ್ ನನ್ನು ಹುಡುಕಲು ಕರಾವಳಿಯ ಮುಳುಗು ತಜ್ಞ ಈಶ್ವರ್ ಸಹಾಯ ಪಡೆಯಲಾಗುತ್ತಿದೆ.

 

Advertisement

ಈಶ್ವರ ಅವರ ಸಹಾಯದಿಂದ ಲಾರಿ ಹಾಗೂ ಚಾಲಕ ಅರ್ಜುನ್ ನನ್ನು ಪತ್ತೆ ಮಾಡಬೇಕಿದೆ. ಜಿಲ್ಲಾಡಳಿತದ ಮನವಿ ಮೇರೆಗೆ ಈಶ್ವರ್ ಮಲ್ಪರ ಶಿರೂರಿನ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಈಶ್ವರ್ ಮಲ್ಪೆ ಮೂಲತಃ ಕರಾವಳಿ ಭಾಗದವರು. ಆಂಬುಲೆನ್ಸ್ ಡ್ರೈವರ್ ಆಗಿರುವ ಈಶ್ವರ್ ಸಾಕಷ್ಟು ಜನರ ಪ್ರಾಣ ಉಳಿಸಿದ್ದಾರೆ. ನದಿಯ ಆಳಕ್ಕೆ ಇಳಿದು ನಾಪತ್ತೆಯಾದ ಮೃತದೇಹಗಳನ್ನು ಪತ್ತೆ ಹಚ್ಚುವ ಸಾಹಸಿ ಇವರು.

ಈಶ್ವರ್ ಮಲ್ಪೆ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಅದೆಷ್ಟೇ ಆಳವಿರಲಿ, ಅಪಾಯಕಾರಿ ಸ್ಥಳವಿರಲಿ ಅಲ್ಲಿಗೆ ಇಳಿದು ಮೃತದೇಹಗಳನ್ನು ತೆಗೆದಿದ್ದಾರೆ. ಅಷ್ಡು ದೊಡ್ಡ ಸಾಹಸಮಯಿ ಇವರು. ಎಷ್ಟೋ ಬಾರಿ ಊಟ ಬಡಿಸುವಾಗಲೇ ಕರೆ ಬಂದಿದ್ದರು, ಈಶ್ವರ್ ಮೊದಲು ರಕ್ಷಣೆ ಆಮೇಲೆ ಊಟ ಎನ್ನುತ್ತಾರೆ. ಎಂಥದ್ದೇ ಪರಿಸ್ಥಿತಿ ಇದ್ದರು ಕರೆ ಬಂದ ತಕ್ಷಣ ಓಡಿ ಹೋಗುತ್ತಾರೆ. ಕಳೆದ ವರ್ಷ ಜುಲೈ 23ರಂದು ಅರಿಶಿನ ಗುಂಡಿ ಜಲಪಾತದಲ್ಲಿ ಭದ್ರಾವತಿ ಮೂಲದ ಶರತ್ ಎಂಬಾತ ಕಾಲು ಜಾರಿ ನೀರಿಗೆ ಬೀಳುತ್ತಾನೆ. ಸೌಪರ್ಣಿಕ ನೀರಿನ ಸೆಳೆತಕ್ಕೆ ಆತ ಕೊಚ್ಚಿ ಹೋಗುತ್ತಾನೆ. ಮರದ ದಿಂಬಿಗೆ ಸಿಲುಕಿ ದೇಹ ಅಲ್ಲಿಯೇ ಇರುತ್ತದೆ. ಆರು ದಿನಗಳ ಬಳಿಕ ಆ ಮೃತದೇಹವನ್ನು ಈಶ್ವರ್ ಮಲ್ಪೆ ಅವರೇ ಮೇಲಕ್ಕೆ ಎತ್ತುತ್ತಾರೆ.

Advertisement
Tags :
AnkolaArjunabengaluruchitradurgahill collapsemissingShirurusuddionesuddione newsಅರ್ಜುನಆಂಕೋಲಈಶ್ವರಗುಡ್ಡ ಕುಸಿತಚಿತ್ರದುರ್ಗನಾಪತ್ತೆಪತ್ತೆಬೆಂಗಳೂರುಶಿರೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article