For the best experience, open
https://m.suddione.com
on your mobile browser.
Advertisement

ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM'

08:24 PM Sep 16, 2024 IST | suddionenews
ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ arm
Advertisement

Advertisement
Advertisement

ಬೆಂಗಳೂರು: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ ARM ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ.

ಬಿಡುಗಡೆಯಾದ 4 ದಿನಕ್ಕೆ 54 ಕೋಟಿ ಕಲೆಕ್ಷನ್ ಆಗಿದೆ. ನೂರು ಕೋಟಿ ಕಲೆಕ್ಷನ್ ನತ್ತ ಮುನ್ನುಗುತ್ತದೆ ಚಿತ್ರತಂಡ ಹೇಳಿದೆ.

Advertisement
Advertisement

ಬುಕ್ ಮೈ ಶೋನಲ್ಲಿ 24 ಗಂಟೆಗಳಲ್ಲಿ 1,52,000 ಸಾವಿರ ಟಿಕೆಟ್ ಬುಕ್ ಆಗಿದೆ. ಗೋಟ್ ಮತ್ತು ಸ್ತ್ರೀ ಚಿತ್ರಗಳು ಗಿಂತಲೂ ಹೆಚ್ಚು ಬುಕ್ಕಾದ ಭಾರತದಲ್ಲಿ ಮೊದಲ ಸಿನಿಮಾ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇದೇ ಚಿತ್ರವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌ ಸಂಸ್ಥೆ ಬಿಡುಗಡೆ ಮಾಡಿದೆ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲು ಹೌಸ್ ಪುಲ್ ಕಲೆಕ್ಷನ್ ಕಾಣುತ್ತಿದೆ.

ಈ ಚಿತ್ರದಲ್ಲಿ ನಟ ಟೊವಿನೋ ಥಾಮಸ್‌ ಮೂರು ಶೇಡ್‌ಗಳಲ್ಲಿ ಅಭಿನಯಿಸಿದ್ದಾರೆ. ತಮಿಳು, ತೆಲುಗು ಮತ್ತು ಚಿತ್ರರಂಗದಲ್ಲಿ ಮೋಡಿ ಮಾಡಿರುವ ನಟಿಯರಾದ ಕೃತಿ ಶೆಟ್ಟಿ, ಐಶ್ವರ್ಯ ರಾಜೇಶ್ ಮತ್ತು ಸುರಭಿ ಲಕ್ಷ್ಮಿ ಎಆರ್‌ಎಂ ಸಿನಿಮಾದಲ್ಲಿದ್ದಾರೆ.

ಚಿತ್ರದ ಸುತ್ತಲಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಮಹಿಳೆಯೋರ್ವರು ಕಥೆಯನ್ನು ವಿವರಿಸುತ್ತಾರೆ. ಹಿಂಸಾಚಾರ ಮತ್ತು ನಾಯಕನ ಪ್ರವೇಶವನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಎಆರ್​​ಎಂ ಭರ್ಜರಿ ಆ್ಯಕ್ಷನ್​ ಸೀನ್​ಗಳೊಂದಿಗೆ ಅದ್ಭುತ ಸಿನಿಮೀಯ ಅನುಭವ ಚಿತ್ರದಲ್ಲಿಇದೆ.

ಉತ್ತರ ಕೇರಳದ ವಿವಿಧ ಸಮಯಾವಧಿಯಲ್ಲಿನ (1900, 1950 ಮತ್ತು 1990) ನಿರೂಪಣೆಗಳನ್ನು ಒಳಗೊಂಡಿದೆ. ಟೊವಿನೋ ಥಾಮಸ್​​​ ಮೂರು ವಿಭಿನ್ನ ಪಾತ್ರಗಳನ್ನು ಅಭಿನಸಿದ್ದಾರೆ.ಮಣಿಯನ್, ಕುಂಜಿಕ್ಕೆಲು ಮತ್ತು ಅಜಯನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಮಿಯ ಸಂಪತ್ತನ್ನು ರಕ್ಷಿಸುವ ಹೋರಾಟವಿದೆ. ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ಒಂದು ಬಲವಾದ ಕಥೆಯೊಂದಿಗೆ ದೃಶ್ಯ ಚಮತ್ಕಾರವಿರಲಿದೆ ಎಂಬ ಭರವಸೆ ನೀಡಿದೆ.ಎಆರ್​​ಎಂ​​ ಟೊವಿನೋ ಥಾಮಸ್ ಅವರ 50ನೇ ಚಿತ್ರವಾಗಿದ್ದು, ಟ್ರೇಲರ್​ನಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ‌. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ ನಿರ್ವಹಿಸಲು ನಟ ಕಳರಿಪಯಟ್ಟುವಿನ ವ್ಯಾಪಕ ತರಬೇತಿ ಪಡೆದಿದ್ದರು. ಕಾಂತಾರ ಖ್ಯಾತಿಯ ವಿಕ್ರಮ್ ಮೂರ್ ಮತ್ತು ಫೀನಿಕ್ಸ್ ಪ್ರಭು ಸ್ಟಂಟ್ಸ್ ಸಂಯೋಜಿಸಿದ್ದಾರೆ.

Advertisement
Tags :
Advertisement