For the best experience, open
https://m.suddione.com
on your mobile browser.
Advertisement

ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್ ಕುಮಾರ್ : ಭಾರತದ ಪೌರತ್ವದ ಬಗ್ಗೆ ಹೇಳಿದ್ದೇನು..?

01:02 PM May 20, 2024 IST | suddionenews
ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್ ಕುಮಾರ್   ಭಾರತದ ಪೌರತ್ವದ ಬಗ್ಗೆ ಹೇಳಿದ್ದೇನು
Advertisement

Advertisement

ದೇಶದೆಲ್ಲೆಡೆ ಲೋಕಸಭಾ ಚುನಾವಣೆಯ ರಂಗು ಜೋರಾಗಿದೆ. ಇಂದು ಕೂಡ ಮತದಾನ ನಡೆಯುತ್ತಿದ್ದು, ಮಹಾರಾಷ್ಟ್ರದಲ್ಲಿ ಐದನೇ ಹಂತದ ಮತದಾನ ನಡೆಯುತ್ತಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವ ಪಡೆದು ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ.

ಮತದಾನದ ಬಳಿಕ ಮಾತನಾಡಿದ ಅಕ್ಷಯ್ ಕುಮಾರ್, ನನ್ನ ಭಾರತ ವಿಕಸಿತ ಮತ್ತು ಅಭಿವೃದ್ಧಿಯತ್ತ ಸಾಗುತ್ತಿರಬೇಕು. ಇದೇ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾನು ಇವತ್ತು ಮತ ಚಲಾಯಿಸಿದ್ದೇನೆ. ಭಾರತದ ಜನರು ತಮ್ಮ ಸ್ವವಿವೇಚನೆಯಿಂದ ಆಲೋಚಿಸಿ ಮತ ಹಾಕಬೇಕು. ಈ ಬಾರಿ ಹೆಚ್ಚು ಮತದಾನ ಆಗಲಿದೆ. ಇಂದು ಏಳು ಗಂಟೆಗೇನೆ ಅಪಾರ ಸಂಖ್ಯೆಯಲ್ಲಿ ಜನ ಮತಗಟ್ಟೆಗೆ ಬಂದಿದ್ದರು. ಈಗಲೂ 200-300 ಜನ ಮತಗಟ್ಟೆಯಲ್ಲಿ ನಿಂತಿದ್ದಾರೆ. ಭಾರತವೇ ನನಗೆ ಸರ್ವಸ್ವ. ನನ್ನ ಹೃದಯ ಮತ್ತು ಪೌರತ್ವ ಎಲ್ಲವೂ ಹಿಂದೂಸ್ತಾನವೇ ಆಗಿದೆ. ನಾನು ಗಳಿಸಿದ್ದು ಎಲ್ಲವೂ ಇಲ್ಲಿಂದಾನೇ. ಮತ್ತೆ ಭಾರತದ ಪೌರತ್ವ ಹಿಂಪಡೆಯುತ್ತಿರುವುದಕ್ಕೆ ಖುಷಿ ಇದೆ. ಕೆಲವೊಮ್ಮೆ ಜನರು ಯಾವ ವಿಷಯವನ್ನು ತಿಳಿದುಕೊಳ್ಳದೆ ಮಾತನಾಡಿದಾಗ ಬೇಸರವಾಗುತ್ತದೆ ಎಂದಿದ್ದಾರೆ. ಇನ್ನು ಜನರಿಗೆ ಮತದಾನದ ಜಾಗೃತಿಯನ್ನು ಮೂಡಿಸಿದ್ದು, ತಪ್ಪದೇ ಮತದಾನ ಮಾಡಿ ಎಂದು ಕಿವಿ ಮಾತು ಹೇಳಿದ್ದಾರೆ.

Advertisement

ಅಕ್ಷಯ್ ಕುಮಾರ್ 1990 ರಲ್ಲಿ ಕೆನಡಾದ ಪೌರತ್ವಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ನಂತರ 2019 ರಲ್ಲಿ ಮತ್ತೆ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಕೆ ಮಾಡಿದರು‌. ಇಲ್ಲಿನ ನಾಗರೀಕತ್ವವನ್ನು ಪಡೆದುಕೊಂಡರು. ಅಂದು ಪೌರತ್ವ ಪಡೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಭಾರತದ ಪೌರತ್ವ ಪಡೆದಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

Tags :
Advertisement