For the best experience, open
https://m.suddione.com
on your mobile browser.
Advertisement

ಐಶ್ವರ್ಯಾ-ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿಯ ನಡುವೆ ಬಂತು ಹೊಸ ಫೋಟೋ..!

04:34 PM Dec 06, 2024 IST | suddionenews
ಐಶ್ವರ್ಯಾ ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿಯ ನಡುವೆ ಬಂತು ಹೊಸ ಫೋಟೋ
Advertisement

ಬಾಲಿವಿಡ್ ಅಂಗಳದಲ್ಲಿ ಬಿಗ್ ಬಿ ಮನೆಯ ಸುದ್ದಿಯೇ ಹೆಚ್ಚು ಸದ್ದಾಗುತ್ತಿದೆ. ಮಗ-ಸೊಸೆ ದೂರ ದೂರವಾಗಿದ್ದಾರೆ. ಇಬ್ಬರ ನಡುವೆ ಡಿವೋರ್ಸ್ ಕೂಡ ಆಗಿದೆ ಎಂದೇ ಹೇಳುತ್ತಿದ್ದಾರೆ. ಆದರೆ ಅದನ್ನ ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳುತ್ತಿಲ್ಲ ಎಂದೇ ಹಲವರು ಮಾತಾಡಿಕೊಳ್ಳುತ್ತಿದ್ದಾರೆ. ಈ ಸುದ್ದಿ ಸ್ಟ್ರಾಂಗ್ ಆಗುವುದಕ್ಕೆ ಕಾರಣ ಐಶ್ವರ್ಯಾ ಯಾವುದೇ ಕಾರ್ಯಕ್ರಮಕ್ಕೆ ಹೋದರು ಮಗಳೊಟ್ಟಿಗೆ ಒಬ್ಬರೆ ಇರುತ್ತಾರೆ. ಜೊತೆಗೆ ಎಲ್ಲಿಯೂ ಈ ವಿಚಾರವಾಗಿ ಅಧಿಕೃತವಾಗಿ ಕ್ಲಾರಿಟಿ ಕೊಡುವ ಪ್ರಯತ್ನ ಮಾಡಿಲ್ಲ.

Advertisement

ಆದರೆ ಈಗ ಅನುಮಾನ ಪಡುತ್ತಿದ್ದವರಿಗೆಲ್ಲ ಫೋಟೋ ಮೂಲಕ ಉತ್ತರ ಕೊಟ್ಟಿದ್ದಾರೆ. ಫ್ಯಾಮಿಲಿಯ ಕಾರ್ಯಕ್ರಮವೊಂದು ನಡೆದಿದೆ. ಆ ಕಾರ್ಯಕ್ರಮಕ್ಕೆ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಕೂಡ ಭಾಗಿಯಾಗಿದ್ದರು. ಅಷ್ಟೇ ಅಲ್ಲ ಜೊತೆ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಐಶ್ವರ್ಯಾ ಅವರು ಸೆಲ್ಫಿ ತೆಗೆಯುವಾಗ ಅಭಿಷೇಕ್ ಖುಷಿ ಖುಷಿಯಾಗಿ ಪೋಸ್ ನೀಡಿದ್ದಾರೆ. ಇಬ್ಬರು ಬ್ಲಾಕ್ ಕಲರ್ ಡ್ರೆಸ್ ಅನ್ನೇ ತೊಟ್ಟಿದ್ದಾರೆ. ಇದು ಇಬ್ಬರ ನಡುವಿನ ಬಾಂಡಿಂಗ್ ಅನ್ನ ತೋರಿಸ್ತಾ ಇದೆ‌. ಆದರೆ ಈ ಫೋಟೋ ನೋಡಿದವರು ಕೂಡ, ಫ್ಯಾಮಿಲಿ ಕಾರ್ಯಕ್ರಮಕ್ಕೋಸ್ಕರ ಒಂದಾಗಿರಬಹುದು ಅಂತಾನು ಹಲವರು ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ ಸೆಲೆಬ್ರೆಟಿಗಳನ್ನ ಅವರ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಾ ಇರುತ್ತಾರೆ. ಏನಾದರೂ ಇದ್ದರೆ ಸೋಷಿಯಲ್ ಮೀಡಿಯಾ ಮೂಲಕವೇ ಅಧಿಕೃತವಾಗಿ ಅನೌನ್ಸ್ ಮಾಡುತ್ತಾರೆ. ಜೊತೆಗಿರುವ ಫೋಟೋಗಳನ್ನು ತೆಗೆದು ಹಾಕುತ್ತಾರೆ. ಒಂದು ವೇಳೆ ಎದುರು ಬದುರಾದರು ಮಾತಾಡಿಸುವುದಕ್ಕೆ ಹೋಗಲ್ಲ. ಆದರೆ ಐಶ್ವರ್ಯಾ ಆ ರೀತಿ ಮಾಡಿಲ್ಲ. ಹೀಗಾಗಿ ನಗುಮುಖದ ಫೋಟೋ ನೋಡಿದ್ರೆ ಅವರ ನಡುವಿನ ಡಿವೋರ್ಸ್ ಸುದ್ದಿ ಸುಳ್ಳು ಎಂದೇ ಹೇಳಲಾಗುತ್ತಿದೆ.

Advertisement

Tags :
Advertisement