ಬೆಲ್ಲದ ಜೊತೆಗೆ ಜೇನು ಸೇರಿಸಿ ತಿನ್ನುವುದರಿಂದ ಚಳಿಗಾಲದಲ್ಲಿ ಆರೋಗ್ಯವಾಗಿರಬಹುದು..!
ಚಳಿಗಾಲ ಬಂತು ಅಂದ್ರೆ ಸಾಕು ಹಲವಾರು ಕಾಯಿಲೆಗಳು ಶುರುವಾಗಿ ಬಿಡುತ್ತವೆ. ಅದರಲ್ಲೂ ನೆಗಡಿ, ಕೆಮ್ಮು, ಚಳಿ ಜ್ವರ ಕಾಮನ್ ಆಗಿ ಕಾಣಿಸುತ್ತವೆ. ಎಷ್ಟೇ ಕೇರ್ ಫುಲ್ ಆಗಿದ್ದರೂನು ಕಾಯಿಲೆಗಳ ಆಗಮನಕ್ಕೆ ದೇಹ ಒಗ್ಗಿ ಬಿಡುತ್ತದೆ. ಆದರೆ ಚಳಿಗಾಲದ ಕಾಯಿಲೆಗಳಿಂದ ದೂರ ಇರುವುದಕ್ಕೆ ನಮಗೆ ನಾವೇ ಆರೋಗ್ಯದ ಕಾಳಜಿಯನ್ನು ಮಾಡಿಕೊಳ್ಳಬೇಕು. ಅಡುಗೆ ಮನೆಯಲ್ಲಿ ಇರುವ ಪದಾರ್ಥಗಳ ಜೊತೆಗೆ ಸ್ವಲ್ಪ ಜೇನು ಸೇರಿಸಿದರೆ ಸಾಕು ಆರೋಗ್ಯ ನಿಮ್ಮ ಕೈನಲ್ಲೇ ಇರುತ್ತದೆ.
ಬೆಲ್ಲದ ಜೊತೆ ಜೇನು ತುಪ್ಪ ಮಿಕ್ಸ್ ಮಾಡಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮಾತ್ರವಲ್ಲದೆ ಜೇನು ತುಪ್ಪ ಮತ್ತು ಬೆಲ್ಲದಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ದೈಹಿಕ ಸದೃಢತೆಯನ್ನು ಉತ್ತಮಗೊಳಿಸುವುದರ ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ವನ್ನು ಹೆಚ್ಚಿಸುತ್ತದೆ.ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವ ಇವುಗಳನ್ನು ಸೇವಿಸುವುದರಿಂದ ಒತ್ತಡ ಕೂಡ ಸಾಕಷ್ಟು ಕಡಿಮೆಯಾಗುತ್ತದೆ.
ತುಳಸಿ ಮತ್ತು ಬೆಲ್ಲವನ್ನು ಬಳಸಿ ಚಹಾ ತಯಾರು ಮಾಡಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ರಕ್ತ ಶುದ್ಧೀಕರಣವಾಗುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳು ದೂರ ವಾಗುತ್ತವೆ. ತುಳಸಿ ಔಷಧೀಯ ಗುಣಗಳನ್ನು ಒಳಗೊಂಡಿರುವುದರಿಂದ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.
ಬೆಲ್ಲವನ್ನು ನೀವು ಚಳಿಗಾಲದಲ್ಲಿ ಸೇವಿಸಲು ಬಯಸುವ ಬಹುತೇಕ ಸಿಹಿ ಪದಾರ್ಥಗಳಲ್ಲಿ ಕೂಡ ಬಳಸಬಹುದು. ವಿವಿಧ ಬಗೆಯ ಪಾನೀಯಗಳಲ್ಲಿ ಬೆಲ್ಲವನ್ನು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ.
ಇದರಲ್ಲಿ ಅತ್ಯುತ್ತಮ ಪೌಷ್ಟಿಕಾಂಶಗಳು ಮತ್ತು ಆಂಟಿ ಆಕ್ಸಿ ಡೆಂಟ್ ಅಂಶಗಳು ಇರುವುದರಿಂದ ಮುಖ್ಯವಾಗಿ ಕಬ್ಬಿಣದ ಅಂಶ ನಮ್ಮ ದೇಹ ಸೇರುವುದ್ರಿಂದ ನಮ್ಮ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ದೂರವಾ ಗುತ್ತದೆ ಮತ್ತು ರಕ್ತ ಶುದ್ಧೀಕರಣವಾಗುತ್ತದೆ.
ಬಾದಾಮಿಯು ಸ್ವಭಾವತಃ ಬಿಸಿಯಾಗಿದ್ದು ದೇಹಕ್ಕೆ ಉಷ್ಣತೆಯನ್ನು ನೀಡುತ್ತವೆ. ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು, ಫೈಬರ್, ವಿಟಮಿನ್ಗಳು ಮತ್ತು ಖನಿಜಗಳು ಇತ್ಯಾದಿಗಳು ಬಾದಾಮಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇವೆಲ್ಲವೂ ಸೇರಿಕೊಂಡು ಮತ್ತು ಶೀತದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಪಿಸ್ತಾದ ಬೆಚ್ಚಗಿನ ಸ್ವಭಾವವು ಚಳಿಗಾಲದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಾಗಿಸುತ್ತದೆ. ಪಿಸ್ತಾದಲ್ಲಿ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಬಿ 6, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿವೆ.