For the best experience, open
https://m.suddione.com
on your mobile browser.
Advertisement

ಮಣ್ಣಿನ ಕಪ್ ಗಳಲ್ಲಿ ಟೀ ಕುಡಿಯುವುದರಿಂದ ಉಪಯೋಗಗಳೇನು ಗೊತ್ತಾ ?

05:53 AM Dec 20, 2023 IST | suddionenews
ಮಣ್ಣಿನ ಕಪ್ ಗಳಲ್ಲಿ ಟೀ ಕುಡಿಯುವುದರಿಂದ ಉಪಯೋಗಗಳೇನು ಗೊತ್ತಾ
Advertisement
  • ಸುದ್ದಿಒನ್ : ಚಹಾ ಕುಡಿಯಲು ಯಾರಿಗೆ ತಾನೇ ಇಷ್ಟವಿಲ್ಲ. ಬೆಳಿಗ್ಗೆ ಹೊತ್ತು ನಿದ್ದೆಯಿಂದ ಎದ್ದ ತಕ್ಷಣವೇ ಕೆಲವರಿಗೆ ಬಿಸಿ ಬಿಸಿ ಚಹಾ ಕುಡಿದರಷ್ಟೇ ದಿನನಿತ್ಯದ ಚಟುವಟಿಕೆ ಆರಂಭವಾಗುತ್ತದೆ. ಸ್ವಲ್ಪ ಆಯಾಸವೆನಿಸಿದರೂ ಸರಿ, ಮನಸು ಬೇಜಾರಾಗಿದ್ದರೂ ಸರಿ ಒಂದು ಕಪ್ ಟೀ ಕುಡಿದರೆ ಎಲ್ಲವೂ ಮಾಯವಾಗುತ್ತದೆ. ಹಾಗಾಗಿ ಚಹಾ ಕುಡಿಯುವವರ ಸಂಖ್ಯೆ ಕಡಿಮೆಯೇನಿಲ್ಲ. ದಿನಕ್ಕೆ ಎಷ್ಟು ಬಾರಿ ಬೇಕಾದರೂ ಟೀ ಕುಡಿಯಲು ಕೆಲವರು ಹಿಂದೆಮುಂದೆ ನೋಡುವುದಿಲ್ಲ.

ಅನೇಕ ಜನರು ಅದರಲ್ಲೂ ಐಷಾರಾಮಿ ಜೀವನ ನಡೆಸುವವರು ಅಲಂಕಾರಿಕ ಪಾತ್ರೆಗಳಲ್ಲಿ ಚಹಾವನ್ನು ಕುಡಿಯಲು ಬಯಸುತ್ತಾರೆ. ಇತ್ತೀಚೆಗೆ ರಸ್ತೆ ಬದಿಯ ವಿವಿಧ ಟೀ ಸ್ಟಾಲ್‌ಗಳು ಪ್ಲಾಸ್ಟಿಕ್ ಕಪ್ ಗಳಲ್ಲಿ ಈ ಪಾನೀಯವನ್ನು ನೀಡುತ್ತಿವೆ. ಪ್ಲಾಸ್ಟಿಕ್ ಕಪ್‌ಗಳಲ್ಲಿ ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕರ.

Advertisement
Advertisement

ಈ ತಾಂತ್ರಿಕ ಯುಗದಲ್ಲಿ, ಮಾನವ ನಾಗರಿಕತೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಮಣ್ಣಿನ ಪಾತ್ರೆಗಳಲ್ಲಿಯೂ ಚಹಾ ಸವಿಯಲು ಅನೇಕರು ಇಷ್ಟಪಡುತ್ತಾರೆ. ಮಣ್ಣಿನ ಪಾತ್ರೆಯಲ್ಲಿ ಚಹಾ ಕುಡಿದರೆ ತೃಪ್ತಿಯಾಗುತ್ತದೆ ಎನ್ನುತ್ತಾರೆ. ಇನ್ನೂ ಹಲವೆಡೆ ಟೀ ಸ್ಟಾಲ್‌ಗಳು ಮಣ್ಣಿನ ಪಾತ್ರೆಗಳಲ್ಲಿ ಟೀ ಕುಡಿಯುತ್ತಿರುವುದು ಕಂಡು ಬರುತ್ತಿದೆ. ವಾಸ್ತವವಾಗಿ, ಮಣ್ಣಿನ ಪಾತ್ರೆಯಿಂದ ಚಹಾ ಕುಡಿಯುವುದು ದೇಹಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Advertisement

ಮಣ್ಣಿನ ಪಾತ್ರೆಯ ಚಹಾ ಏಕೆ ಪ್ರಯೋಜನಕಾರಿ

Advertisement

ಅನೇಕ ಜನರು ಹಾಲಿನೊಂದಿಗೆ ಮಾಡಿದ ಚಹಾವನ್ನು ಕುಡಿಯಲು ಬಯಸುತ್ತಾರೆ. ಆದರೆ ಹಾಲು ಮತ್ತು ಡಿಕಾಶಿನ್ ಟೀ ಕುಡಿದ ನಂತರ ಅನೇಕರಿಗೆ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ತಜ್ಞರ ಪ್ರಕಾರ ಮಣ್ಣಿನ ಪಾತ್ರೆಯಲ್ಲಿ ಹಾಲಿನೊಂದಿಗೆ ತಯಾರಿಸಿದ ಟೀ ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಮಣ್ಣಿನ ಮಡಕೆ ತನ್ನಲ್ಲಿರುವ ಕ್ಷಾರವನ್ನು ಒಣಗಿಸಿ ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮಣ್ಣಿನ ಪಾತ್ರೆಯಲ್ಲಿ ಟೀ ಕುಡಿಯುವುದರಿಂದ ದೇಹಕ್ಕೆ ಪೋಷಕಾಂಶಗಳೂ ಸಿಗುತ್ತವೆ. ಏಕೆಂದರೆ ಮಣ್ಣಿನಲ್ಲಿ ರಂಜಕ ಮತ್ತು ವಿವಿಧ ಖನಿಜಗಳಿವೆ. ಇವು ಚಹಾದ ಜೊತೆ ಸೇರಿ ಆರೋಗ್ಯಕ್ಕೆ ಒಳ್ಳೆಯದು.

ಇಂದಿನ ದಿನಗಳಲ್ಲಿ ಮಣ್ಣಿನ ಮಡಕೆಗಳು ತುಂಬಾ ಕಡೆ ಕಾಣಸಿಗುವುದಿಲ್ಲ. ಎಷ್ಟೋ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಲೋಟಗಳಲ್ಲಿ ಚಹಾ ಮಾರುತ್ತಾರೆ. ಆದರೆ ಅದರಲ್ಲಿ ಅಪಾಯವಿದೆ. ಪ್ಲಾಸ್ಟಿಕ್ ಕಪ್ ಗಳಲ್ಲಿ ಚಹಾವನ್ನು  ಸುರಿಯುವುದರಿಂದ ರಾಸಾಯನಿಕ ಕ್ರಿಯೆ ಪ್ರಾರಂಭಿಸುತ್ತದೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಕಪ್ ಗಳಲ್ಲಿ ಟೀ ಕುಡಿಯುವುದು ಹೊಸ ಟ್ರೆಂಡ ಆಗಿದೆ.

Advertisement
Tags :
Advertisement