For the best experience, open
https://m.suddione.com
on your mobile browser.
Advertisement

ಬೇಸಿಗೆಗೆ ಎಳನೀರು ಬೆಸ್ಟ್ : ಪ್ರತಿದಿನ ಕುಡಿದರು ಈ ಸಮಯವನ್ನ ಪಾಲನೆ ಮಾಡಿ

05:57 AM Apr 21, 2024 IST | suddionenews
ಬೇಸಿಗೆಗೆ ಎಳನೀರು ಬೆಸ್ಟ್   ಪ್ರತಿದಿನ ಕುಡಿದರು ಈ ಸಮಯವನ್ನ ಪಾಲನೆ ಮಾಡಿ
Advertisement

ಅಬ್ಬಬ್ಬಾ ಬಿರು ಬಿರು ಸುಡುವ ಬಿಸಿಲು. ಮಳೆಗಾಲ ಶುರುವಾದರೆ ಸಾಕು ಎನದನುತ್ತಿದ್ದಾರೆ. ಉಷ್ಣಾಂಶ ದಿನೇ ದಿನೇ ಜಾಸ್ತಿಯಾಗುತ್ತಿರುವ ಕಾರಣ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಪ್ರತಿದಿನ ಎಳನೀರು ಕುಡಿಯಲು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಡಿಹೈಡ್ರೇಷನ್ ಆಗಬಾರದು ಎಂಬ ಕಾರಣಕ್ಕೂ ಎಳನೀರು ಬೆಸ್ಟ್ ಮದ್ದು. ಆದರೆ ಪ್ರತಿದಿನ ಎಳನೀರು ಕುಡಿಯುವವರು ಬೆಳಗಿನ ಸಮಯದಲ್ಲಿ ಕುಡಿಯುವುದು ಉತ್ತಮ.

Advertisement

ಅದರಲ್ಲೂ ಬ್ರೇಕ್ ಫಾಸ್ಟ್ ಗಿಂತ ಮೊದಲು ಎಳನೀರು ಕುಡಿಯಬೇಕು. ಯಾಕಂದ್ರೆ ಎಳನೀರಿನ ಇಡೀ ಲಾಭ ದೇಹಕ್ಕೆ ಸಿಗಲಿದೆ. ಯಾವ ಸಮಯದಲ್ಲಾದರೂ ಕುಡಿಯಬಹುದು. ಆದರೆ ಬ್ರೇಕ್ ಫಾಸ್ಟ್ ಗೂ ಬೆಸ್ಟ್.

ಎಳ ನೀರಿನಿಂದ ಎಷ್ಟೆಲ್ಲಾ‌ಪ್ರಯೋಜನಗಳಿವೆ ಗೊತ್ತಾ..?

Advertisement

*ಇದರಲ್ಲಿ ಯಾವುದೇ ರಾಸಾಯನಿಕಗಳಿರಲ್ಲ, ಆರೋಗ್ಯಕ್ಕೆ ಅಗ್ಯತವಾದ ಪೋಷಕಾಂಶಗಳು ದೊರೆಯುವುದು. ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ, ಎಳನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಬಹುದು. ಈ ಬಿಸಿಲಿನಲ್ಲಿ ಹೊರಗಡೆ ಹೋದಾಗ ಒಂದು ಎಳನೀರು ಕುಡಿದರೆ ಸಾಕು ಹೊಸ ಚೈತನ್ಯ ದೊರೆಯುತ್ತದೆ.

* ಅಜೀರ್ಣ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುತ್ತದೆ. ಇದನ್ನು ತಡೆಗಟ್ಟಲು ಎಳನೀರು ಸಹಕಾರಿಯಾಗಿದೆ. ಮೈ ಉಷ್ಣಾಂಶ ಹೆಚ್ಚಾದಾಗ ಹೊಟ್ಟೆ ನೀವು ಉಂಟಾಗುವುದು, ಅದನ್ನು ತಡೆಗಟ್ಟಲು ಎಳನೀರು ಸಹಕಾರಿಯಾಗಿದೆ.

* ಎಳನೀರಿನಲ್ಲಿ ವಿಟಮಿನ್‌, ಖನಿಜಾಂಶಗಳು, ಎಲೆಕ್ಟ್ರೋಲೈಟ್ಸ್ ಇರುವುದರಿಂದ ದೇಹಕ್ಕೆ ಎಳನೀರು ದೊರೆಯುತ್ತದೆ, ಇದರಿಂದ ಮೈ ತುಂಬಾ ಬೆವರುವುದನ್ನು ತಡೆಗಟ್ಟಲು ಸಹಕಾರಿ. ಬೇಸಿಗೆಯಲ್ಲಿ ಸ್ವಲ್ಪ ಕೆಲಸ ಮಾಡಿದರೆ ಸುಸ್ತಾಗುತ್ತೇವೆ, ಅದನ್ನು ತಡೆಗಟ್ಟಲು ಸಹಕಾರಿ.

* ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಎಳನೀರಿನಲ್ಲಿ ನೀರು ಜೊತೆಗೆ ನಾರಿನಂಶ ಕೂಡ ಇರಲಿದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

Tags :
Advertisement