ಬೆಂಡೆಕಾಯಿ ತಿನ್ನುವುದರಿಂದ ಎಷ್ಟೊಂದು ರೋಗಗಳಿಂದ ದೂರವಿರಬಹುದು ಗೊತ್ತಾ..?
ಮನುಷ್ಯನ ದೇಹಕ್ಕೆ ಪೌಷ್ಠಿಕಾಂಶ ಬಹಳ ಮುಖ್ಯ. ಒಂದೊಂದು ತರಕಾರಿಯಲ್ಲೂ ಹಲವು ಪೌಷ್ಠಿಕಾಂಶ ಅಡಗಿರುತ್ತದೆ. ಹೀಗಾಗಿ ಯಾವುದೇ ತರಕಾರಿ ಕೊಟ್ಟರು ಬೇಡ ಎನ್ನದೆ ತಿನ್ನಬೇಕು. ಆದರೆ ಕೆಲವೊಬ್ಬರು ಎಷ್ಟೋ ತರಕಾರಿಯನ್ನು ವಾಕರಿಕೆ ಬರುವವರಂತೆ ಫೀಲ್ ಮಾಡುತ್ತಾರೆ. ಅದರಲ್ಲೂ ಬೆಂಡೆಕಾಯಿ ಸಾಂಬಾರ್, ಬೆಂಡೆಕಾಯಿ ಪಲ್ಯ ಎಂದರೆ ಮೂಗು ಮುರಿಯುವವರೆ ಜಾಸ್ತಿ. ಆದರೆ ಬೆಂಡೆಕಾಯಿಯಿಂದ ಎಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆ ಗೊತ್ತಾ..? ಇಲ್ಲಿದೆ ನೋಡಿ ಡಿಟೈಲ್ಸ್
ಬೆಂಡೆಕಾಯಿ ಮಧುಮೇಹ ಇರುವವರಿಗೆ ಅತ್ಯುತ್ತಮ ಆಹಾರ. ಇದರಲ್ಲಿ ಫೈಬರ್ ಶಕ್ತಿ ಹೆಚ್ಚಾಗಿದೆ. ಇದರಿಂದ ಜೀರ್ಣಾಂಗ ಶಕ್ತಿ ವೃದ್ಧಿಯಾಗುತ್ತದೆ. ಜೀರ್ಣಾಂಗ ಕ್ರಿಯೆಯಲ್ಲಿ ಸಕ್ಕರೆ ಮಟ್ಟವನ್ನು ಹೀರಿಕೊಳ್ಳುವುದರಿಂದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗುತ್ತದೆ.
ಬೆಂಡೆಕಾಯಿಯಲ್ಲಿರುವ ಹೆಚ್ಚಿನ ಉತ್ಕರ್ಷಣ ನಿರೋಧಕಗಳು ನಿಮ್ಮ ಕೋಶಗಳನ್ನು ಸ್ವತಂತ್ರ ರಾಡಿಕಲ್ ಕೋಶಗಳಿಂದ ಹಾನಿಯಾಗದಂತೆ ರಕ್ಷಿಸುತ್ತದೆ. ಜೊತೆಗೆ ದೇಹದಲ್ಲಿ ಕ್ಯಾನ್ಸರ್ ಕೋಶಕಗಳು ಬೆಳೆಯದಂತೆ ರಕ್ಷಣೆ ನೀಡುತ್ತದೆ.
ದೇಹಕ್ಕೆ ವಿಟಮಿನ್ ಸಿ ಅಂಶ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಬೆಂಡೆಕಾಯಿಯನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಕೆ ಮಾಡುವುದರಿಂದ ವಿಟಮಿನ್ ಸಿ ಹೇರಳವಾಗಿ ಸಿಗಲಿದೆ. ಶೇಕಡ 38% ರಷ್ಟು ಹೆಚ್ಚಳ ಮಾಡುತ್ತದೆ. ವಿಟಮಿನ್ ಸಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹದ ತೂಕ ಇಳಿಸಬೇಕು ಅಂತ ಸಿಕ್ಕಾಪಟ್ಟೆ ವರ್ಕೌಟ್ ಮಾಡುವವರು ಅದರ ಜೊತೆಗೆ ಬೆಂಡೆಕಾಯಿ ಕೂಡ ಸೇರಿಸಿಕೊಳ್ಳಿ. ಬೆಂಡೆಕಾಯಿ ಸೇವನೆಯಿಂದ ತೂಕ ಇಳಿಕೆ ಬೇಗ ಆಗುತ್ತದೆ. ಯಾಕಂದ್ರೆ ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದೆ.
ಯಾರ ದೇಹ ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತದೋ ಅವರು ದೇಹವನ್ನು ತಂಪಾಗಿಸಿಕೊಳ್ಳಲು ಬಮಡೆಕಾಯಿಯನ್ನು ತಿನ್ನಿ. ಇದರಿಂದ ದೇಹದ ಉಷ್ಣಾಂಶ ಕಡಿಮೆಯಾಗಿ ದೇಹ ತಂಪಾಗಿರುತ್ತದೆ.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ಇದು ಕೇವಲ ಪ್ರಾಥಮಿಕ ಮಾಹಿತಿಯಾಗಿದ್ದು, ಇಲ್ಲಿ ಒದಗಿಸಲಾದ ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)