For the best experience, open
https://m.suddione.com
on your mobile browser.
Advertisement

ಮಳೆಗಾಲದಲ್ಲಿ ಮಧುಮೇಹಿಗಳು ಈ ಹಣ್ಣನ್ನ ತಿನ್ನಿ.. ಶುಗರ್ ಕಂಟ್ರೋಲ್‌ ಇರುತ್ತೆ..!

06:12 AM Nov 20, 2024 IST | suddionenews
ಮಳೆಗಾಲದಲ್ಲಿ ಮಧುಮೇಹಿಗಳು ಈ ಹಣ್ಣನ್ನ ತಿನ್ನಿ   ಶುಗರ್ ಕಂಟ್ರೋಲ್‌ ಇರುತ್ತೆ
Advertisement

ಸಕ್ಕರೆ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. 30 ದಾಟಿದವರಿಗೂ ಬಿಪಿ ಶುಗರ್ ಕಾಣಿಸಿಕೊಳ್ಳುತ್ತದೆ. ಆದರೆ ಹೀಗೆ ಮಧುಮೇಹ ಚಿಕ್ಕ ವಯಸ್ಸಿನಲ್ಲೇ ಬಂದರೂ ಹೆಚ್ಚು ಮಾತ್ರೆಗಳಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಕಾಲ ಕಾಲಕ್ಕೆ ಆಹಾರದಲ್ಲಿನ ವ್ಯತ್ಯಯದಿಂದಾನೇ ಮಧುಮೇಹವನ್ನು ಕಂಟ್ರೋಲ್ ನಲ್ಲಿಟ್ಟುಕೊಳ್ಳಬಹುದು. ಅದರಲ್ಲೂ ಮಳೆಗಾಲದಲ್ಲಿ ಮಧುಮೇಹಿಗಳು ಈ ಹಣ್ಣುಗಳನ್ನು ತಿನ್ನುವುದರಿಂದ ಶುಗರ್ ಕಂಟ್ರೋಲ್ ನಲ್ಲಿರುತ್ತದೆ.

Advertisement

* ಸೀಬೆಕಾಯಿ ಹೆಣ್ಣು ಮಕ್ಕಳಿಗೂ ಬಹಳ ಒಳ್ಳೆಯದು ಹಾಗೇ ಮಧುಮೇಹಿಗಳಿಗೂ ತುಂಬಾನೇ ಒಳ್ಳೆಯದು. ಪ್ರತಿದಿನ ಒಂದು ಸೀಬೆಕಾಯಿ ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಸಿಗುವ ಸಾಧ್ಯತೆ ಇದೆ. ಯಾಕಂದ್ರೆ ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಅಡಗಿದೆ.

* ನೇರಳೆ ಹಣ್ಣು ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಆದರೆ ಬೇಸಿಗೆ ಹಾಗೂ ಮಾನ್ಸೂನ್ ಕಾಲದಲ್ಲಿ ಸಿಗುವ ನೇರಳೆ ಹಣ್ಣನ್ನು ತಿನ್ನುವುದರಿಂದ ಹೆಚ್ಚಿನ ಫೈಬರ್ ಹಾಗೇ ಕಡಿಮೆ ಗ್ಲೈ ಸೆಮಿಕ್ ಸೂಚ್ಯಂಕದಿಂದ ಮಧುಮೇಹಿಗಳಿಗೆ ಅನುಕೂಲವಾಗುತ್ತದೆ.

Advertisement

* ಮಾನ್ಸೂನ್ ಸಮಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಪೀಚ್ ಹಣ್ಣುಗಳು ಸಿಗುತ್ತವೆ. ಇವು ಆರೋಗ್ಯಕ್ಕೆ ತೀರಾ ಸ್ನೇಹಮಯಿಯಾಗಿದ್ದಾವೆ. ಇದರಲ್ಲಿ ಕಬ್ಬಿಣ, ಪೊಟ್ಯಾಸಿಯಮ್‌ ಹಾಗೂ ವಿಟಮಿನ್ ಸಿ ಅಂಶಗಳು ಅಡಗಿವೆ.

* ಅದರಲ್ಲೂ ಮಳೆಗಾಲದ ಸಮಯದಲ್ಲಿ ಈ ಹಣ್ಣುಗಳನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಸಿಗುತ್ತವೆ. ಅದರಲ್ಲೂ ಮಧುಮೇಹಿಗಳಿವೆ ಬೇಕಾದ ಪೌಷ್ಠಿಕಾಂಶವೂ ಇದರಲ್ಲಿ ದೊರೆಯುತ್ತದೆ. ಸದಾ ಮಾತ್ರೆ, ಇನ್ಸುಲಿನ್ ಎನ್ನುವುದಕ್ಕಿಂತ ಈ ರೀತಿ ಆಹಾರ ಕ್ರಮದ ಮೂಲಕವೇ ರೋಗವನ್ನು ನಿವಾರಣೆ ಮಾಡಿಕೊಂಡರೆ ಉತ್ತಮ. ಮರೆಯದೆ ಪ್ರತಿದಿನ ಎಲ್ಲರೂ ಹಣ್ಣುಗಳನ್ನು ತಿನ್ನುವುದು ಉತ್ತಮ. ಆರೋಗ್ಯವೂ ವೃದ್ದಿಸುತ್ತದೆ.

Tags :
Advertisement