For the best experience, open
https://m.suddione.com
on your mobile browser.
Advertisement

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

05:56 AM Apr 27, 2024 IST | suddionenews
ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ
Advertisement

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಬ್ಯಾನ್ ಮಾಡಲಾಗಿದೆ. ನಗರ ಪ್ರದೇಶದಲ್ಲಿ ಪಾಲಿಕೆಯವರು ಕಟ್ಟು ನಿಟ್ಟಾಗಿಯೇ ಈ ವಿಚಾರವನ್ನು ಹೇಳಿದ್ದಾರೆ. ಹಲವು ಬಾರಿ ಹೊಟೇಲ್ ಗಳಿಗೆ ದಂಡ ಕೂಡ ಹಾಕಿದ್ದಾರೆ. ಆದರೆ ಆ ನಿಯಮವನ್ನು ಆ ಕ್ಷಣಕ್ಕಷ್ಟೇ ಪಾಲಿಸುವ ಹೊಟೇಲ್ ನವರು, ಹಣಕ್ಕಾಗಿ ಮತ್ತದೇ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ.

Advertisement

ಹೊಟೇಲ್ ನವರಿಗೆ ಉದ್ಯಮವಾದರೆ ಸಾಕು. ಜನರ ಆರೋಗ್ಯದ ಅವಶ್ಯಕತೆ ಇಲ್ಲ ಎಂಬ ದೃಷ್ಟಿಗೆ ಬಂದು ಬಿಟ್ಟಿದ್ದಾರೆ. ಇನ್ನು ಬ್ಯಾಚುಲರ್ಸ್ ಗಳ ಪಾಡು ಕೇಳುವಂತೆ ಇಲ್ಲ. ಯಾಕಂದ್ರೆ ಮನೆಯಲ್ಲಿ ಮಾಡುವುದು ಕಷ್ಟ, ಹೊರಗೆ ತಿನ್ನುವುದು ಅನಿವಾರ್ಯ. ಹೀಗಿರುವಾಗ ಬೇರೆ ದಾರಿಯಿಲ್ಲ. ಇವೆನ್ ಪ್ಲಾಸ್ಟಿಕ್ ಕವರ್ ನಲ್ಲಿ ಆಹಾರ ತಿನ್ನುವ, ನ್ಯೂಸ್ ಪೇಪರ್ ನಲ್ಲಿ ಬಿಸಿ ಆಹಾರ ಬಳಸಿದಾಗ ಅದರಿಂದ ಅನಾಹುತ ಆಗುತ್ತೆ ಅಂತ ಅವರಿಗೂ ಗೊತ್ತು. ಆದರು ಏನು ಮಾಡುವುದಕ್ಕೆ ಆಗಲ್ಲ ಎಂದು ತಿನ್ನುತ್ತಾರೆ. ಹಣ ಕೊಟ್ಟು ಆಹಾರ ತಿನ್ನುವುದರ ಜೊತೆಗೆ ಕಾಯಿಲೆಯನ್ನು ಮುಂದಕ್ಕೆ ಬರಮಾಡಿಕೊಳ್ಳುತ್ತಾರೆ.

Advertisement

ವೈದ್ಯರು ಹೇಳುವ ಪ್ರಕಾರ, ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅನೇಕ ಜನರು ದಿನಪತ್ರಿಕೆಗಳಲ್ಲಿ ಆಹಾರವನ್ನು ತಿನ್ನುತ್ತಾರೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ವಾಸ್ತವವಾಗಿ, ಬಿಸಿ ಆಹಾರವನ್ನು ಪತ್ರಿಕೆಗಳ ಮೇಲೆ ಇರಿಸಿದಾಗ, ಶಾಖದಿಂದಾಗಿ ಕಾಗದದ ಮೇಲಿನ ಶಾಯಿ ಕರಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಪತ್ರಿಕೆಯ ಶಾಯಿಯು ಡೈಸೊಪ್ರೊಪಿಲ್ ಥಾಲೇಟ್, ಡೈನ್ ಐಸೊಪ್ರೊಪಿಲೇಟ್ ಇತ್ಯಾದಿ ರಾಸಾಯನಿಕಗಳನ್ನು ಹೊಂದಿರುತ್ತದೆ. ಇದು ನಂತರ ತಿಂಡಿಯಲ್ಲಿ ಅಂಟಿಕೊಂಡು ನಮ್ಮ ಹೊಟ್ಟೆಯೊಳಗಡೆ ಹೋಗುತ್ತವೆ. ದಿನನಿತ್ಯ ಹೀಗೆ ತಿನ್ನೋದನ್ನು ಅಭ್ಯಾಸ ಮಾಡಿದ್ರೆ ಆರೋಗ್ಯ ಹದಗೆಡೋದು ಪಕ್ಕಾ.

Tags :
Advertisement