Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದ್ದು, ಬಿ. ಎನ್‌. ಚಂದ್ರಪ್ಪ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ : ಮಾಜಿ ಸಚಿವ ಹೆಚ್. ಆಂಜನೇಯ

03:55 PM Apr 20, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ ಏ. 20 : ಕ್ಷೇತ್ರದ ತುಂಬಾ ಕಾಂಗ್ರೆಸ್ ಅಲೆ ಇದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಭವಿಷ್ಯ ನುಡಿದಿದ್ದಾರೆ.

Advertisement

ಚಿತ್ರದುರ್ಗದಲ್ಲಿ ಡಿಸಿಸಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ಅವರು. ಜನರು ಭಾಗ್ಯಗಳಿಂದ ಸಂತೋಷವಾಗಿದ್ದಾರೆ. ನಮಗೆ ಈ ಸರ್ಕಾರ ಬೇಕು ಎಂದು ಹೇಳುತ್ತಿದ್ದಾರೆ. ಮೋದಿ ಗ್ಯಾರಂಟಿಯಲ್ಲಿ ಜನರಿಗೆ ಉಪಯೋಗವಾಗುವಂತ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಹಿಂದು ಮುಸ್ಲಿಂ ಧರ್ಮದ ಮೇಲೆ ರಾಜಕಾರಣ ಮಾಡದೆ, ಬಡವರಿಗೆ, ರೈತರಿಗೆ ಯುವ ಜನರಿಗೆ ಉಪಯೋವಾಗುವಂತ ಕೆಲಸ ಮಾಡಿ, ಇದು ಬಿಟ್ಟು ಹಳೆ ಯೋಜನೆಗಳನ್ನು ಜಾತಿ ಮಾಡುತ್ತೇವೆ ಎಂದು ಹೇಳುತ್ತಿದ್ದಿರಿ,  ದೇಶದ ಭದ್ರತೆಯನ್ನು ಕಾಂಗ್ರೆಸ್ ಮಾಡಿದೆ,  ಇದನ್ನು ನೀವು ನೋಡಿಕೊಂಡರೆ ಸಾಕು. ಬಿಜೆಪಿಯವರಿಗೆ ಜನರ ಮತ ಕೇಳುವ ನೈತಿಕ ಹಕ್ಕಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ ಜಿಲ್ಲೆಯಲ್ಲಿ ನಮ್ಮದೆ ಸಂಪ್ರದಾಯಿಕ ಮತಗಳಿವೆ, ಅವುಗಳ ಜೊತೆಗೆ ತಪ್ಪಾಗಿದ್ದರೆ, ಸರಿಪಡಿಸಿಕೊಂಡು ಮುನ್ನೆಡೆಯುತ್ತೇವೆ ಎಂದರು.

ಇಂದಿರಾ ಗಾಂಧಿಯ ರೀತಿಯಲ್ಲಿ ರಾಷ್ಟ್ರದ ಗಮನ ಸೆಳೆಯುತ್ತಿರುವ ಪ್ರಿಯಾಂಕ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು, ಇದೇ 21 ರಂದು ಬೆಳಗ್ಗೆ 11ಕ್ಕೆ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಿ ಎನ್ ಚಂದ್ರಪ್ಪ ಅವರ ಪರ ಮತಯಾಚನೆ ಮಾಡಲಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದು ಭಾಗವಹಿಸಬೇಕೆಂದು ಮನವಿ ಮಾಡಿದರು.

Advertisement

ಇದೇ ಸಮಯದಲ್ಲಿ ಮಾತಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ಮಾತಾಡಿ, ಕಾಂಗ್ರೆಸ್ ನ ಯಾವ ನಗರಸಭಾ ಸದಸ್ಯರು ಬಿಜೆಪಿಗೆ ಸೇರಿಲ್ಲ, ಇನ್ನು ಗ್ಯಾರಂಟಿ ಕಾರ್ಡ್  ನೀಡುವಾಗ ಯಾವುದೇ ಚುನಾವಣೆ ಅಕ್ರಮ ಮಾಡಿಲ್ಲ. ಫಲಾನುಭವಿಗಳ ಹೆಸರು ಬರೆದುಕೊಳ್ಳಲು ಆಧಾರ್ ಕಾರ್ಡ್ ತೆಗೆದುಕೊಂಡು ವಾಪಾಸ್ಸು ನೀಡಲಾಗಿದೆ.ಇನ್ನು ಸ್ಥಳೀಯ ಶಾಸಕರಾದ ವೀರೇಂದ್ರ ಪಪ್ಪಿ ಅವರು ಹಾಗೂ ಕಾರ್ಯಕರ್ತರು, ಮನೆ ಮನೆಗೂ ಭೇಟಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.

ಈ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ, ಸಂಪತ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ನರಸಿಂಹ ಮೂರ್ತಿ, ಲಿಡ್ಕರ್ ಮಾಜಿ ಅಧ್ಯಕ್ಷ ಓ ಶಂಕರ್, ಡಿಎನ್ ಮೈಲಾರಪ್ಪ, ಇತರರಿದ್ದರು.

Advertisement
Tags :
B.N. ChandrappabengaluruchitradurgaCongress in the fieldFormer Minister H. Anjaneyasuddionesuddione newsThere is a waveಕಾಂಗ್ರೆಸ್ಚಿತ್ರದುರ್ಗಬಿ.ಎನ್.ಚಂದ್ರಪ್ಪಬೆಂಗಳೂರುಮಾಜಿ ಸಚಿವ ಹೆಚ್. ಆಂಜನೇಯಲಕ್ಷ ಮತಗಳಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article