For the best experience, open
https://m.suddione.com
on your mobile browser.
Advertisement

ಶ್ರೀಕೃಷ್ಣನ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ : ಶಾಸಕ ಟಿ ರಘುಮೂರ್ತಿ

06:16 PM Aug 26, 2024 IST | suddionenews
ಶ್ರೀಕೃಷ್ಣನ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ   ಶಾಸಕ ಟಿ ರಘುಮೂರ್ತಿ
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

Advertisement
Advertisement

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 26 : ಪಂಚಭೂತಗಳಿಂದ ಪಂಚೇಂದ್ರಿಯ ಮೂಲಕ ಅರಿಶಡ್ವರ್ಗಗಳನ್ನು ನಿಯಂತ್ರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ತಮ್ಮ ಜೀವನವನ್ನು ಮುಡುಪಾಗಿಟ್ಟು ಸಮಾಜದ ಏಳಿಗೆಗಾಗಿ ದಾರ್ಶನಿಕರು ಶ್ರಮಿಸಿದ್ದರಿಂದಲೇ ದೇಶದಲ್ಲಿ ರಾಮಾಯಣ ಮಹಾಭಾರತ ಕಾವ್ಯಗಳು ಸೃಷ್ಟಿಯಾಗಲು ಸಾಧ್ಯವಾಯಿತು ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು‌‌.

ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಎಲ್ಲಾ ಸಮುದಾಯಗಳಲ್ಲಿ ದಾರ್ಶನಿಕರು ಜನಿಸಿ ಆ ಸಮುದಾಯದ ಏಳಿಗೆಗಾಗಿ ಶ್ರಮಿಸಿದರೂ ಸಹ ಅವರ ತತ್ವ ಆದರ್ಶಗಳು ಜಾತಿ ರಹಿತವಾಗಿದ್ದುದರಿಂದ ಇಂದು ಮಹಾತ್ಮರಾಗಿದ್ದಾರೆ ಸರ್ಕಾರ ಎಲ್ಲಾ ಜಾತಿಗಳ ಮಹನೀಯರ ಜಯಂತಿಗಳನ್ನು ಆಚರಿಸುವ ಉದ್ದೇಶ ಅವರ ತತ್ವಗಳನ್ನು ನಾವು ಅಳವಡಿಸಿಕೊಂಡು ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂಬುದಾಗಿದೆ. ತಾಲೂಕಿನಲ್ಲಿ ಗೊಲ್ಲ ಸಮುದಾಯದ ಸಮುದಾಯ ಭವನ ನಿರ್ಮಾಣ ಹಂತದಲ್ಲಿದ್ದು ಶ್ರೀ ಕೃಷ್ಣ ವೃತ್ತ ನಿರ್ಮಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಎಸ್ ರವಿಕುಮಾರ್ ಮಾತನಾಡಿ ವಿಶ್ವದಲ್ಲೆಡೆ ಆಚರಿಸುವ ಏಕೈಕ ಹಬ್ಬವೆಂದರೆ ಶ್ರೀ ಕೃಷ್ಣ ಜನ್ಮಾಷ್ಟಮಿಯಾಗಿದೆ ಈ ಹಬ್ಬವನ್ನು ಜಾತಿ ಮತ ಧರ್ಮದ ಹಂಗಿಲ್ಲದೆ ಎಲ್ಲಾ ಸಮುದಾಯದ ಜನರು ಪಾಲ್ಗೊಂಡು ಆಚರಿಸುತ್ತಾರೆ ಇಂತಹ ಸಮುದಾಯದಲ್ಲಿ ಹುಟ್ಟಿರುವುದು ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೆಹಾನ್ ಪಾಷ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಮೂಡಲಗಿರಿಯಪ್ಪ ಶ್ರೀ ಕೃಷ್ಣ ಜಯಂತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಗಳಾದ ರೇಹಾನ್ ಪಾಷಾ, ನಗರಸಭೆ ಪೌರಾಯುಕ್ತರಾದ ಜಗ್ಗರೆಡ್ಡಿ, ಡಿವೈಎಸ್ಪಿ ರಾಜಣ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರವಿಕುಮಾರ್, ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭೆ ಸದಸ್ಯರಾದ ಸಾವಿತ್ರಮ್ಮ, ರಮೇಶ್ ಗೌಡ, ರಾಘವೇಂದ್ರ, ನಾಮ ನಿರ್ದೇಶನ ಸದಸ್ಯರಾದ ವೀರಭದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಮುಖಂಡರುಗಳಾದ ಸಿರಿಯಪ್ಪ, ಶಿವಣ್ಣ, ಮಂಜುನಾಥ್, ಮೂಡಲಗಿರಿಯಪ್ಪ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.

Tags :
Advertisement