For the best experience, open
https://m.suddione.com
on your mobile browser.
Advertisement

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

05:52 PM Nov 23, 2024 IST | suddionenews
ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ   ಶಿವಲಿಂಗಾನಂದ ಸ್ವಾಮೀಜಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು ಸಹಾ ಮಾನವನಿಗೆ ಹಾಕಲು ಬರುವುದಿಲ್ಲ ಈ ಹಿನ್ನಲೆಯಲ್ಲಿ ಮಾನವ ರಕ್ತವನ್ನು ಮಾನವನಿಗೆ ಮಾತ್ರ ಹಾಕಲು ಬರುತ್ತದೆ ಇದರಿಂದ ರಕ್ತವನ್ನು ದಾನ ಮಾಡಲು ಮುಂದಾಗುವುಂತೆ ನಗರದ ಕಭೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಕರೆ ನೀಡಿದರು.

Advertisement

ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ವೀರ ಮದಕರಿ ಸೇವಾ ಟ್ರಸ್ಸ್ ವತಿಯಿಂದ ಅಯೋಧ್ಯ ಬಲಿದಾನ ದಿವಸ್ ಅಂಗವಾಗಿ ನಗರದ ವಿ.ಪಿ.ಬಡಾವಣೆಯಲ್ಲಿನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಾಯದಲ್ಲಿ ಶನಿವಾರ ರಕ್ತದಾನ ಶಿಬಿರದಲ್ಲಿ ತಾಯಿ ಭಾರತಾಂಭೆ ಹಾಗೂ ಅಂಜನೇಯ ಸ್ವಾಮಿಯ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿ ಮಾತನಾಡಿದ ಶ್ರೀಗಳು ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆ ನಡೆಸುವಾಗ ಮಾನವನಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ, ಈ ಹಿನ್ನಲೆಯಲ್ಲಿ ಸರ್ಕಾರ ಮತ್ತು ಖಾಸಗಿಯಾಗಿ ರಕ್ತ ನಿಧಿ ಕೇಂದ್ರಗಳು ಕೆಲಸವನ್ನು ಮಾಡುತ್ತಿವೆ ಮಾನವನಿಗೆ ಅಗತ್ಯವಾದ ರಕ್ತವನ್ನು ಸಂಗ್ರಹ ಮಾಡಿ ಅವಶ್ಯಕತೆ ಇರುವವರಿಗೆ ನೀಡುವ ಕಾರ್ಯವನ್ನು ಮಾಡಲಾಗುತ್ತದೆ. ಇದಕ್ಕೆ ನಾವೆಲ್ಲ ಸಹಕಾರವನ್ನು ನೀಡಬೇಕಿದೆ ಎಂದರು.

ರಕ್ತವನ್ನು ಕೃತಕವಾಗಿ ಮಾಡಲು ಸಾಧ್ಯವಿಲ್ಲ ಎಷ್ಠೆ ಅದರೂ ಸಹಾ ಅದನ್ನು ಮಾನವರಿಂದಲೇ ಪಡೆಯಬೇಕಿದೆ. ಇದನ್ನು ಬಿಟ್ಟು ಯಾವ ಪ್ರಾಣಿಗಳಿಂದಲೂ ಸಹಾ ಸಾಧ್ಯವಿಲ್ಲ, ಈ ಹಿನ್ನಲೆಯಲ್ಲಿ ತಮ್ಮ ಮನೆಗಳಲ್ಲಿಒ ವಿವಿಧ ರೀತಿಯ ಕಾರ್ಯಕ್ರಮಗಳು ಇದ್ದಾಗ ಅದರ ಅಂಗವಾಗಿ ರಕ್ತವನ್ನು ದಾನ ಮಾಡುವ ಸಂಪ್ರದಾಯವನ್ನು ಬೆಳಸಿಕೊಂಡರೆ ಬೇರೆಯವರಿಗೆ ಅನುಕೂಲವಾಗಲಿದೆ ಎಂದ ಶ್ರೀಗಳು ಈ ಸಂಸ್ಥೆಯು ಉತ್ತಮವಾದ ಜನಪಯೋಗಿ ಕಾರ್ಯವನ್ನು ಮಾಡುತ್ತಿದೆ, ರಕ್ತವನ್ನು ದಾನಿಗಳಿಂದ ಸಂಗ್ರಹ ಮಾಡಿ ಬೇರೆಯವರಿಗೆ ನಿಡುವ ಕಾರ್ಯ ಉತ್ತಮವಾಗಿದೆ ಇದೆ ರೀತಿ ಬೇರೆ ಸಂಘ ಸಂಸ್ಥೆಗಳು ಸಹಾ ಮಾಡುವುದರ ಮೂಲಕ ಮಾದರಿಯಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 30 ಯೂನಿಟ್ ರಕ್ತವನ್ನು ದಾನ ಮಾಡಲಾಯಿತು.ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪತರಿಷತ್‍ನ ಉಪಾಧ್ಯಕ್ಷರಾದ ಮಂಜುನಾಥ್, ಜಂಟಿ ಕಾರ್ಯದರ್ಶಿಗಳಾದ ವಿಠಲ್, ಚನ್ನಕೇಶವ, ನಗರ ಕಾರ್ಯದರ್ಶಿ ಆಶೋಕ್, ನಗರ ಸಹ ಕಾರ್ಯದರ್ಶಿ ರಂಗನಾಥ್, ಜಿಲ್ಲಾ ಸೇವಾ ಪ್ರಮುಖ್ ರಘುನಾಥ್, ನಗರ ಸಂಯೋಜಕರಾದ ಕೇಶವ, ರಾಜು, ವಿನಯಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advertisement